
ಪ್ರಯೋಗಾರ್ಥ ಸಂಚಾರ ನಡೆಸಿದ ಏರ್ ಇಂಡಿಯಾ ವಿಮಾನವು ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಬಂದಿಳಿಯಿತು ಪಿಟಿಐ ಚಿತ್ರ
ತಿರುವನಂತಪುರ (ಪಿಟಿಐ): ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ನಿರ್ಮಿಸಲಾದ ಎರಡನೇ ಹಸಿರು ವಲಯ ವಿಮಾನ ನಿಲ್ದಾಣ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಉದ್ಘಾಟನಾ ಕಾರ್ಯಕ್ರಮವನ್ನು ಡಿಸೆಂಬರ್ 9ಕ್ಕೆ ನಿಗದಿ ಮಾಡಲಾಗಿದೆ.
ಈ ಅಂತರರಾಷ್ಟ್ರೀಯ ಏರ್‌ಪೋರ್ಟ್ ಕಾರ್ಯಾರಂಭ ಮಾಡುವುದರಿಂದ ಮಡಿಕೇರಿ ಮತ್ತು ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕಣ್ಣೂರು–ಮಟ್ಟನ್ನೂರು–ಮೈಸೂರು ರಸ್ತೆಯಲ್ಲಿರುವ ಈ ವಿಮಾನ ನಿಲ್ದಾಣವು ಮಡಿಕೇರಿಯಿಂದ 90 ಕಿ.ಮೀ ಹಾಗೂ ಮೈಸೂರಿನಿಂದ 158 ಕಿ.ಮೀ. ದೂರದಲ್ಲಿದೆ.
20 ವಿಮಾನಗಳು ನಿಲ್ಲುವಷ್ಟು ಇದು ವಿಶಾಲವಾಗಿದ್ದು, 4 ಇ–ವೀಸಾ ಕೌಂಟರ್‌ಗಳನ್ನು ಮತ್ತು 16 ಕಸ್ಟಮ್ಸ್ ಕೌಂಟರ್‌ಗಳನ್ನು ಹೊಂದಿದೆ.
ಕೊಚ್ಚಿಯಲ್ಲಿನ ನೆಡುಂಬಾಶೇರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಈ ಏರ್‌ಪೋರ್ಟ್ ಅನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗಿದೆ. ಅಲ್ಲದೆ, ಇದು ಕೇರಳದಲ್ಲಿನ ನಾಲ್ಕನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
No comments:
Post a Comment