ಈ ವಾರಾಂತ್ಯದಲ್ಲಿ ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆಯಲ್ಲಿ ಶೇ 28ರಷ್ಟು ತೆರಿಗೆ ದರ ವ್ಯಾಪ್ತಿಯಿಂದ ಇನ್ನಷ್ಟು ಸರಕುಗಳನ್ನು ಕೈಬಿಡುವ ನಿರೀಕ್ಷೆ ಇದೆ.
ಈ ವಾರಾಂತ್ಯದಲ್ಲಿ ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆಯಲ್ಲಿ ಶೇ 28ರಷ್ಟು ತೆರಿಗೆ ದರ ವ್ಯಾಪ್ತಿಯಿಂದ ಇನ್ನಷ್ಟು ಸರಕುಗಳನ್ನು ಕೈಬಿಡುವ ನಿರೀಕ್ಷೆ ಇದೆ.
ಇದೇ 28ರಂದು ಮಂಡಳಿಯ 30ನೆ ಸಭೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ವಿಡಿಯೊ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಿಲಾಸಿ ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ಪರಿಭಾವಿಸಲಾದ ಸರಕುಗಳನ್ನು ಹೊರತುಪಡಿಸಿ ಉಳಿದೆಲ್ಲ ಸರಕುಗಳನ್ನು ಈ ದರ ಪಟ್ಟಿಯಿಂದ ಹಂತ ಹಂತವಾಗಿ ಕೈಬಿಡುವುದಾಗಿ ಜೇಟ್ಲಿ ಈ ಮೊದಲೇ ಭರವಸೆ ನೀಡಿದ್ದಾರೆ.
ಶೇ 28ರ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿಯಲಿರುವ ಸರಕುಗಳ ಪಟ್ಟಿಯಲ್ಲಿ ಸಿಮೆಂಟ್, ವಾಹನಗಳ ಕೆಲ ಬಿಡಿಭಾಗಗಳು, ಡಿಜಿಟಲ್ ಕ್ಯಾಮೆರಾ, ಟೆಲಿವಿಷನ್‌ಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಇವುಗಳನ್ನು ಶೇ 18 ಅಥವಾ ಶೇ 12ರ ತೆರಿಗೆ ದರಗಳ ಸಾಲಿಗೆ ಸೇರ್ಪಡೆ ಮಾಡುವ ಚಿಂತನೆ ಇದೆ.
ಕಟ್ಟಡ ನಿರ್ಮಾಣ ವಲಯದ ಸರಕುಗಳ ಪೈಕಿ ಸಿಮೆಂಟ್ ಮಾತ್ರ ಈಗ ಶೇ 28ರ ತೆರಿಗೆ ದರದ ವ್ಯಾಪ್ತಿಯಲ್ಲಿ ಇದೆ. ಗರಿಷ್ಠ ತೆರಿಗೆ ದರದ ವ್ಯಾಪ್ತಿಯಿಂದ ಸಿಮೆಂಟ್ ಕೈಬಿಡುವುದರಿಂದ ಕಟ್ಟಡ ನಿರ್ಮಾಣ ವಲಯದ ಚಟುವಟಿಕೆಗಳು ವೇಗ ಪಡೆಯಲಿವೆ.
ಜಿಎಸ್‌ಟಿ ಜಾರಿಗೆ ಬಂದ ನಂತರದ ಇದುವರೆಗಿನ ಅವಧಿಯಲ್ಲಿ ಜಿಎಸ್‌ಟಿ ಮಂಡಳಿಯು ಶೇ 28ರ ದರದ ವ್ಯಾಪ್ತಿಯಲ್ಲಿದ್ದ 191 ಸರಕುಗಳ ಮೇಲಿನ ತೆರಿಗೆ ಹೊರೆ ತಗ್ಗಿಸಿದೆ. ಆರಂಭದಲ್ಲಿ 226 ಸರಕುಗಳು ಈ ದರದ ವ್ಯಾಪ್ತಿಯಲ್ಲಿ ಇದ್ದವು.
ತೆರಿಗೆ ಕಡಿತದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಈಗಾಗಲೇ ₹ 70 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿದೆ. ತೆರಿಗೆ ಕಡಿತದಿಂದ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಿ, ಖರೀದಿ ಸಾಮರ್ಥ್ಯ ಹೆಚ್ಚಳಗೊಂಡು ಆರ್ಥಿಕತೆಗೆ ಚೇತರಿಕೆ ಸಿಗಲಿದೆ ಎನ್ನುವುದು ಸರ್ಕಾರದ ನಿಲುವಾಗಿದೆ.
ಪ್ರತಿ ತಿಂಗಳೂ ₹ 1 ಲಕ್ಷ ಕೋಟಿಯಷ್ಟು ತೆರಿಗೆ ವರಮಾನ ಸಂಗ್ರಹಿಸಲು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಆದರೆ, ಏಪ್ರಿಲ್ ತಿಂಗಳು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ವರಮಾನ ಸಂಗ್ರಹವು ನಿಗದಿತ ಗುರಿ ತಲುಪಿಲ್ಲ.
ಸಿಮೆಂಟ್, ವಾಹನ ಬಿಡಿಭಾಗಗಳ ಜತೆಗೆ, ಟೈರ್, ವಿಲಾಸಿ ಕಾರ್, ವಿಮಾನ, ತಂಪುಪಾನೀಯ, ತಂಬಾಕು, ಸಿಗರೇಟ್, ಪಾನ್ ಮಸಾಲಾಗಳು ಈ ತೆರಿಗೆ ವ್ಯಾಪ್ತಿಯಲ್ಲಿ ಇವೆ.
Friends, If you like this post,kindly comment below the post and do share your
Response,
(Thanks for Reading....)

No comments:
Post a Comment