ಶ್ರೀನಗರ: ಜಮ್ಮು- ಕಾಶ್ಮೀರದ ತಂಗ್ಧಾರ್ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಲ್ಯಾನ್ಸ್ನಾಯಕ್ ಸಂದೀಪ್ ಸಿಂಗ್ ಹುತಾತ್ಮರಾಗಿದ್ದಾರೆ. 2016ರಲ್ಲಿ ಪಾಕ್ ನೆಲದಲ್ಲಿ ಭಾರತ ನಡೆಸಿದ್ದ ಸರ್ಜಿಕಲ್ ದಾಳಿಯಲ್ಲಿ ಇವರು ಪಾಲ್ಗೊಂಡಿದ್ದರು. ಸರ್ಜಿಕಲ್ ದಾಳಿಯ 2ನೇ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಂದೀಪ್ ಸಿಂಗ್ ಹುತಾತ್ಮರಾಗಿದ್ದಾರೆ.
ಮೂವರ ಹತ್ಯೆ: 4 ಪ್ಯಾರಾ ಕಮಾಂಡ್ಗೆ ಸೇರಿದ ಲ್ಯಾನ್ಸ್ನಾಯಕ್ ಸಂದೀಪ್ ಸಿಂಗ್ ತಮ್ಮ ತಂಡದೊಂದಿಗೆ ತಂಗ್ಧಾರ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಪಹರೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದರು. ತಕ್ಷಣವೇ ಅವರನ್ನು ಸುತ್ತುವರಿದು, ಗುಂಡಿನ ದಾಳಿ ಆರಂಭಿಸಿದರು. ಉಗ್ರರು ಹಾರಿಸಿದ ಗುಂಡು ತಲೆಯೊಳಗೆ ಹೊಕ್ಕರೂ, ಛಲಬಿಡದೆ ಹೋರಾಡಿದ ಸಂದೀಪ್ ಸಿಂಗ್, ಮೂವರು ಉಗ್ರರನ್ನು ಹತ್ಯೆ ಮಾಡಿ ಹುತಾತ್ಮರಾದರು. ಗುರುದಾಸ್ಪುರದಲ್ಲಿ ಮಂಗಳವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
2007ರಲ್ಲಿ ಸೇನೆಗೆ ಸೇರ್ಪಡೆ: ಸಂದೀಪ್ ಸಿಂಗ್ ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಕೋಟ್ಲಾ ಖುರ್ದ್ ಗ್ರಾಮದವರು. 2007ರಲ್ಲಿ ಸೇನಾಪಡೆಗೆ ಸೇರ್ಪಡೆಗೊಂಡಿದ್ದರು.
ಕುಪ್ವಾರದಲ್ಲಿ 5 ಉಗ್ರರ ಹತ್ಯೆ
ಜಮ್ಮು – ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೋಮವಾರದಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ಐವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಒಬ್ಬ ಯೋಧ ಹುತಾತ್ಮರಾಗಿದ್ದು, ಒಬ್ಬರು ಗಾಯ ಗೊಂಡಿದ್ದಾರೆ.
Telegram Link
https://t.me/joinchat/AAAAAE9lq2X6z4BbgUUCnw
Friends, If you like this post,kindly comment below the post and do share your
Response,
(Thanks for Reading....)
No comments:
Post a Comment