ನವದೆಹಲಿ: ಸಿಗರೇಟ್ ಬೆಲೆ 1 – 2 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಸಿಗರೇಟ್ ಮೇಲೆ ಶೇ. 5-6 ವಿಪತ್ತು ನಿರ್ವಹಣಾ ಮೇಲ್ತೆರಿಗೆ ವಿಧಿಸುವ ಬಗ್ಗೆ ಜಿಎಸ್ಟಿ ಮಂಡಳಿ ಚಿಂತನೆ ನಡೆಸುತ್ತಿದೆ. ಸಂಗ್ರಹವಾಗುವ ಹಣವನ್ನು ಪ್ರವಾಹದಿಂದ ಜಜ್ಜರಿತವಾಗಿರುವ ಕೇರಳದ ಮರುನಿರ್ವಣಕ್ಕೆ ಬಳಸಲಾಗು ತ್ತದೆ ಎನ್ನಲಾಗಿದೆ.
ಸಿಎಲ್ಎಸ್ಎ ಶಿಫಾರಸು: ಸಿಗರೇಟ್ಗಳ ಮೇಲೆ ಶೇ. 5-6 ವಿಪತ್ತು ಮೇಲ್ತೆರಿಗೆ ವಿಧಿಸುವ ಬಗ್ಗೆ ಇನ್ವೆಸ್ಟ್ಮೆಂಟ್ ಕಂಪನಿ ಸಿಎಲ್ಎಸ್ಎ ವರದಿ ತಯಾರಿಸಿ, ಜಿಎಸ್ಟಿ ಮಂಡಳಿಗೆ ಸಲ್ಲಿಸಿದೆ. ಸೆ. 28ರಂದು ನಡೆಯಲಿರುವ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಈ ವಿಷಯದ ಕುರಿತು ರ್ಚಚಿಸಿ, ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸಿಗರೇಟ್, ಜರ್ದಾ ಮತ್ತು ಖೆೈನಿಯಂತಹ ತಂಬಾಕು ಉತ್ಪನ್ನಗಳ ಮೇಲೆ ಮೇಲ್ತೆರಿಗೆ ವಿಧಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇಂತಹ ವಸ್ತುಗಳಿಂದ ಬಳಕೆದಾರರ ಆರೋಗ್ಯಕ್ಕೆ ಆಗುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಸಿಗರೇಟ್ಗಳ ಮೇಲೆ ಶೇ. 20 ಮತ್ತು ಜರ್ದಾ ಮೇಲೆ ಶೇ. 250 ಮೇಲ್ತೆರಿಗೆ ವಿಧಿಸಬೇಕು ಎಂದು ಹೇಳಿತ್ತು. ಆದರೆ, ಸರ್ಕಾರ ಈ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
Telegram Link
https://t.me/joinchat/AAAAAE9lq2X6z4BbgUUCnw
Friends, If you like this post,kindly comment below the post and do share your
Response,
(Thanks for Reading....)
No comments:
Post a Comment