ರೂಪಾಯಿ ಮೌಲ್ಯ ಇಳಿಕೆ, ಜಾಗತಿಕ ವಾಣಿಜ್ಯ ಸಮರದ ಪರಿಣಾಮ
Friends,
If you like this post,kindly comment below the post and do share your
Response,
(Thanks for Reading....)

ಮುಂಬೈ (ಪಿಟಿಐ): ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ಮುಂದುವರಿದಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಮಂಗಳವಾರ 295 ಅಂಶ ಇಳಿಕೆಯಾಗಿ, ಒಂದು ತಿಂಗಳ ಕನಿಷ್ಠ ಮಟ್ಟವಾದ 37,291 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ಆಗಸ್ಟ್ 2 ರಂದು 37,165 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 99 ಅಂಶ ಇಳಿಕೆಯಾಗಿ 11,278 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.
ಹಣಕಾಸು ಮತ್ತು ವಾಹನ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದ ಸೂಚ್ಯಂಕ ಇಳಿಕೆ ಕಾಣುವಂತಾಗಿದೆ.
ನಕಾರಾತ್ಮಕ ಅಂಶಗಳು: ಜಾಗತಿಕ ವಾಣಿಜ್ಯ ಸಮರವು ದೇಶದ ಷೇರುಪೇಟೆಗಳ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಸರಕುಗಳ ಮೇಲೆ ಹೊಸದಾಗಿ ಶೇ 10ರಷ್ಟು ಆಮದು ಸುಂಕ ಹೇರಿಕೆಯನ್ನು ಘೋಷಿಸಿದ್ದಾರೆ.
ಇದೇ 24 ರಿಂದ ಹೊಸ ಸುಂಕ ಅನ್ವಯಿಸಲಿದೆ. ಇದು ಹೂಡಿಕೆ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ 47 ಪೈಸೆ ಇಳಿಕೆಯಾಗಿ 72.98ರಂತೆ ವಹಿವಾಟು ನಡೆಸಿತು. ಇದೂ ಸಹ ಸೂಚ್ಯಂಕದ ಇಳಿಕೆಗೆ ಕಾರಣವಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದೆ. ಮಂಗಳವಾರ ಬ್ರೆಂಟ್ ಕಚ್ಚಾ ತೈಲ ದರ 83 ರೂಪಾಯಿ ಹೆಚ್ಚಾಗಿ ಒಂದು ಬ್ಯಾರೆಲ್‌ಗೆ ₹ 5,779ರಂತೆ (79.19 ಡಾಲರ್) ಮಾರಾಟವಾಯಿತು.
ಕರಗುತ್ತಿದೆ ಹೂಡಿಕೆದಾರರ ಸಂಪತ್ತು
ಮುಂಬೈ ಷೇರುಪೇಟೆಯಲ್ಲಿ ಸಂವೇದಿ ಸೂಚ್ಯಂಕ ಇಳಿಕೆ ಕಾಣುತ್ತಿರುವುದರಿಂದ ಎರಡು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ₹ 2.72 ಲಕ್ಷ ಕೋಟಿಯಷ್ಟು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 153 ಲಕ್ಷ ಕೋಟಿಗೆ ಇಳಿಕೆಯಾಗಿದೆ.
ಇದಕ್ಕೂ ಹಿಂದಿನ ವಾರದ ವಹಿವಾಟಿನಲ್ಲಿ ಎರಡು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ₹ 4.14 ಲಕ್ಷ ಕೋಟಿಯಷ್ಟು ನಷ್ಟವಾಗಿತ್ತು.
‘ದೇಶಿ ಮಾರುಕಟ್ಟೆಗಳಲ್ಲಿ ನೋಂದಣಿ ಮಾಡಿಕೊಳ್ಳಲು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ (ಎಫ್‌ಪಿಐ) ಏಕರೂಪದ ಅರ್ಜಿ ನಮೂನೆ, ಪರಿಷ್ಕೃತ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ನಿಯಮ ಶೀಘ್ರವೇ ಜಾರಿಗೆ ಬರಲಿವೆ’ ಎಂದು ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ ತಿಳಿಸಿದ್ದಾರೆ.
‘ಕೆಲವು ಸೂಕ್ಷ್ಮ ಸರಕುಗಳನ್ನು ಬಿಟ್ಟು, ಸರಕುಗಳ ವಾಯಿದಾ ವಹಿವಾಟಿನಲ್ಲಿ ಭಾಗವಹಿಸಲೂ ಹೂಡಿಕೆದಾರರಿಗೆ ಅವಕಾಶ ನೀಡಲಾಗುವುದು’ ಎಂದು ಆಡಳಿತ ಮಂಡಳಿ ಸಭೆಯ ಬಳಿಕ ತ್ಯಾಗಿ ತಿಳಿಸಿದ್ದಾರೆ.
ಕಚ್ಚಾ ತೈಲ ದರ ಏರಿಕೆಯು ಷೇರುಪೇಟೆಯಲ್ಲಿ ಮಾರಾಟದ ಒತ್ತಡವನ್ನು ಹೆಚ್ಚಿಸಿದೆ
ವಿನೋದ್ ನಾಯರ್, ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ
ಸಂಶೋಧನಾ ಮುಖ್ಯಸ್ಥ
Friends,
If you like this post,kindly comment below the post and do share your
Response,
(Thanks for Reading....)ಸಂಶೋಧನಾ ಮುಖ್ಯಸ್ಥ
No comments:
Post a Comment