
SAMPADAKIYA-24-09-18.jpg
Indo-pak
ಈ ವಾರ ಭಾರತ ಹಾಗೂ ಪಾಕಿಸ್ತಾನ ವಿದೇಶಾಂಗ ಸಚಿವರ ನಡುವೆ ನಡೆಯಬೇಕಿದ್ದ ಮಾತುಕತೆ ರದ್ದಾಗಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಗೂ ಮೊದಲು ಭಾರತ-ಪಾಕಿಸ್ತಾನದ ವಿದೇಶಾಂಗ ಸಚಿವರು ಸಭೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೇಳಿಕೊಂಡಿದ್ದರು. ಹೀಗಾಗಿ, ಪಾಕಿಸ್ತಾನದ ಈ ಪ್ರಸ್ತಾವದ ಅನ್ವಯ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರ ಜೊತೆ ಮಾತುಕತೆ ನಡೆಸುವರು ಎಂದು ಭಾರತ ಹೇಳಿತ್ತು. ಆದರೆ ನಂತರ, ಕೇವಲ 24 ಗಂಟೆಯೊಳಗೇ ಈ ಮಾತುಕತೆಯನ್ನು ಭಾರತ ರದ್ದುಮಾಡಿದೆ. ಈ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಖಾರವಾಗಿ ಪ್ರತಿಕ್ರಿಯಿಸಿರುವುದು ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ವಾಕ್ಸಮರವನ್ನು ತಾರಕಕ್ಕೇರಿಸಿದಂತಾಗಿದೆ. ಕತ್ತು ಸೀಳಿ ಹತ್ಯೆ ಮಾಡಲಾದ ಬಿಎಸ್ಎಫ್ ಯೋಧನೊಬ್ಬನ ಶವ ಗಡಿ ಪ್ರದೇಶದಲ್ಲಿ ಪತ್ತೆಯಾಗಿತ್ತು. ಜೊತೆಗೆ, ಕಾಶ್ಮೀರದ ಮೂವರು ಪೊಲೀಸರನ್ನು ಅವರ ಮನೆಗಳಿಂದಲೇ ಅಪಹರಿಸಿದ್ದ ಉಗ್ರರು ನಂತರ ಅವರನ್ನು ಗುಂಡಿಕ್ಕಿ ಸಾಯಿಸಿ ಪೈಶಾಚಿಕತೆ ಪ್ರದರ್ಶಿಸಿದ್ದರು. ಈ ಬೆಳವಣಿಗೆಗಳು ಪಾಕಿಸ್ತಾನದ ‘ದುರುದ್ದೇಶ’ಗಳನ್ನು ಹಾಗೂ ಇಮ್ರಾನ್ ಖಾನ್ ಅವರ ‘ನಿಜವಾದ ಮುಖವನ್ನು’ ಬಹಿರಂಗಗೊಳಿಸಿವೆ ಎಂದು ಮಾತುಕತೆ ರದ್ದುಪಡಿಸಿದ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ವಿದೇಶಾಂಗ ಸಚಿವಾಲಯ ದೂಷಿಸಿದೆ. ಬಿಎಸ್ಎಫ್ ಯೋಧನ ಕತ್ತು ಸೀಳಿ ಹತ್ಯೆ ಮಾಡಿದ ಕ್ರಮವನ್ನು ಬಲವಾಗಿ ಖಂಡಿಸಬೇಕು. ಇದು ಬರ್ಬರ ಹಾಗೂ ಅಮಾನವೀಯವಾದ ಕುಕೃತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಕಾಶ್ಮೀರದಲ್ಲಿ ಉಗ್ರರು ನಡೆಸುತ್ತಿರುವ ಹೊಸ ಬಗೆಯ ಹಿಂಸಾತ್ಮಕ ಆಕ್ರಮಣಗಳೂ ತೀವ್ರ ಮಾತುಗಳಲ್ಲಿ ಖಂಡನಾರ್ಹವಾದವು. ಯೋಧನ ದೇಹ ಸಿಕ್ಕುವ ಒಂದು ದಿನ ಮೊದಲು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಶತ್ರುಗಳ ಶಿರಗಳನ್ನು ನಾವೂ ಛೇದ ಮಾಡುತ್ತೇವೆ. ಆದರೆ ಅದನ್ನು ನಾವು ಪ್ರಸಾರ ಮಾಡುವುದಿಲ್ಲ’ ಎಂದಿದ್ದರು. ಹೀಗೆ, ದ್ವೇಷದ ಹಾಗೂ ಸೇಡಿನ ಪ್ರತಿಕ್ರಿಯೆಗಳನ್ನು ನೀಡುವುದರ ಬಗ್ಗೆಯೂ ನಾವು ಮರು ಆಲೋಚನೆ ಮಾಡಬೇಕು. ಇಂತಹ ಸೇಡಿನ ಹೇಳಿಕೆಗಳಿಗೇ ಉಭಯದೇಶಗಳೂ ಸೀಮಿತಗೊಳ್ಳದೆ ಪರಿಣಾಮಕಾರಿಯಾದ ರಾಜತಾಂತ್ರಿಕ ಬಾಂಧವ್ಯವನ್ನು ವೃದ್ಧಿಗೊಳಿಸಲು ಕ್ರಮಗಳನ್ನು ಕೈಗೊಳ್ಳುವುದು ಸದ್ಯದ ಅಗತ್ಯ.
ಉಭಯ ರಾಷ್ಟ್ರಗಳ ಮಧ್ಯೆ ಮಾತುಕತೆ ರದ್ದು ಮಾಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ. ಆದರೆ ಈ ಮಾತುಕತೆ ರದ್ದುಪಡಿಸಲು ಸರ್ಕಾರ ನೀಡಿದ ಕಾರಣಗಳು ಮಾತ್ರ ಒಪ್ಪುವಂತಹವಲ್ಲ. ನ್ಯೂಯಾರ್ಕ್ನಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರ ಸಭೆಗೆ ಭಾರತ ಒಪ್ಪಿಕೊಳ್ಳುವ ಮುಂಚೆಯೂ ಉಗ್ರರ ದಾಳಿಗಳು ನಡೆದೇ ಇದ್ದವು. ಕಳೆದ ಕೆಲವು ತಿಂಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ತೀವ್ರ ಹಿಂಸಾಚಾರ ಪ್ರಕರಣಗಳೂ ವರದಿಯಾಗುತ್ತಲೇ ಇವೆ. ಹೀಗಾಗಿ ಮಾತುಕತೆ ರದ್ದತಿಗೆ ಸರ್ಕಾರ ನೀಡಿದ ಕಾರಣಗಳು ಅಷ್ಟೇನೂ ತರ್ಕಬದ್ಧವಾಗಿಲ್ಲ. ‘ಕಾಶ್ಮೀರದ ಉಗ್ರ ಬುರ್ಹಾನ್ ವಾನಿಯನ್ನು ವೈಭವೀಕರಿಸುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಸಭೆ ರದ್ದು ಮಾಡಲಾಗಿದೆ. ಇಂತಹ ವಾತಾವರಣದಲ್ಲಿ ಸಭೆ ನಡೆಸುವುದರಲ್ಲಿ ಅರ್ಥವೇ ಇಲ್ಲ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಆದರೆ ಕಾಶ್ಮೀರಿ ಉಗ್ರರನ್ನು ವೈಭವೀಕರಿಸುವ ಅಂಚೆಚೀಟಿಗಳನ್ನು ಮಾತುಕತೆಗೆ ಭಾರತ ಒಪ್ಪಿಕೊಳ್ಳುವುದಕ್ಕೆ
ಅನೇಕ ವಾರಗಳ ಹಿಂದೆಯೇ ಬಿಡುಗಡೆ ಮಾಡಲಾಗಿತ್ತು. ಮಾತುಕತೆಗೆ ಒಪ್ಪಿಗೆಯನ್ನು ಸೂಚಿಸಿದ್ದ ಭಾರತ, ಮಾತುಕತೆಯ ವೇಳೆ ಭಾರತದ ಈ ಆಕ್ಷೇಪಗಳನ್ನು ಮಂಡಿಸಬಹುದಿತ್ತು. ಪರಸ್ಪರರ ನಡುವಿನ ಸಂಶಯ ಪರಿಹಾರಕ್ಕೆ ಹಾಗೂ ವಿಶ್ವಾಸವೃದ್ಧಿಗೆ ಮಾತುಕತೆಗಳು ಅನಿವಾರ್ಯ. ಮಾತುಕತೆ ರದ್ದು ಮಾಡುವುದರಿಂದ ಹಿಂಸಾತ್ಮಕ ಆಕ್ರಮಣಗಳು ನಿಲ್ಲುತ್ತವೆ ಎಂಬಂತಹ ನಿರೀಕ್ಷೆ ಇಟ್ಟುಕೊಳ್ಳಲಾಗದು. ಮಾತುಕತೆ ಪ್ರಕ್ರಿಯೆ ಚಾಲನೆಯಲ್ಲಿದ್ದಲ್ಲಿ ಉಗ್ರರ ಚಟುವಟಿಕೆಗಳೂ ಕಡಿಮೆ ಆಗಲು ಅವಕಾಶವಾಗುತ್ತದೆ. ವಾಣಿಜ್ಯ ವಹಿವಾಟು ಸೇರಿದಂತೆ ದ್ವಿಪಕ್ಷೀಯ ಸಹಕಾರದ ಹಲವು ಆಯಾಮಗಳಿಗೂ ಮಾತುಕತೆಯಿಂದ ಚಾಲನೆ ದೊರೆಯುತ್ತದೆ ಎಂಬುದು ನಮಗೆ ನೆನಪಿರಬೇಕು.
ಅನೇಕ ವಾರಗಳ ಹಿಂದೆಯೇ ಬಿಡುಗಡೆ ಮಾಡಲಾಗಿತ್ತು. ಮಾತುಕತೆಗೆ ಒಪ್ಪಿಗೆಯನ್ನು ಸೂಚಿಸಿದ್ದ ಭಾರತ, ಮಾತುಕತೆಯ ವೇಳೆ ಭಾರತದ ಈ ಆಕ್ಷೇಪಗಳನ್ನು ಮಂಡಿಸಬಹುದಿತ್ತು. ಪರಸ್ಪರರ ನಡುವಿನ ಸಂಶಯ ಪರಿಹಾರಕ್ಕೆ ಹಾಗೂ ವಿಶ್ವಾಸವೃದ್ಧಿಗೆ ಮಾತುಕತೆಗಳು ಅನಿವಾರ್ಯ. ಮಾತುಕತೆ ರದ್ದು ಮಾಡುವುದರಿಂದ ಹಿಂಸಾತ್ಮಕ ಆಕ್ರಮಣಗಳು ನಿಲ್ಲುತ್ತವೆ ಎಂಬಂತಹ ನಿರೀಕ್ಷೆ ಇಟ್ಟುಕೊಳ್ಳಲಾಗದು. ಮಾತುಕತೆ ಪ್ರಕ್ರಿಯೆ ಚಾಲನೆಯಲ್ಲಿದ್ದಲ್ಲಿ ಉಗ್ರರ ಚಟುವಟಿಕೆಗಳೂ ಕಡಿಮೆ ಆಗಲು ಅವಕಾಶವಾಗುತ್ತದೆ. ವಾಣಿಜ್ಯ ವಹಿವಾಟು ಸೇರಿದಂತೆ ದ್ವಿಪಕ್ಷೀಯ ಸಹಕಾರದ ಹಲವು ಆಯಾಮಗಳಿಗೂ ಮಾತುಕತೆಯಿಂದ ಚಾಲನೆ ದೊರೆಯುತ್ತದೆ ಎಂಬುದು ನಮಗೆ ನೆನಪಿರಬೇಕು.
Friends, If you like this post,kindly comment below the post and do share your Response, (Thanks for Reading....)
No comments:
Post a Comment