ದೇಶದ 100ನೇ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ
ದೇಶದ 100ನೇ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ
ಸಿಕ್ಕಿಂನ ಮೊದಲ ಗ್ರೀನ್ಫೀಲ್ಡ್ ಪಾಕ್ಯೊಂಗ್ ವಿಮಾನ ನಿಲ್ದಾಣವನ್ನು ಸೋಮವಾರ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ. ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್, ರಾಜ್ಯಪಾಲ ಗಂಗಾಪ್ರಸಾದ್, ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಇದ್ದಾರೆ –ಪಿಟಿಐ ಚಿತ್ರ

ಪಾಕ್ಯೊಂಗ್/ಸಿಕ್ಕಿಂ (ಪಿಟಿಐ): ರಾಷ್ಟ್ರದ 100ನೇ ಹಾಗೂ ಸಿಕ್ಕಿಂನ ಮೊದಲ ಗ್ರೀನ್ಫೀಲ್ಡ್ ಪಾಕ್ಯೊಂಗ್ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಿದರು.
‘ಹಿಂದಿನ ಸರ್ಕಾರಗಳು ಹೆಚ್ಚಿನ ಒತ್ತು ನೀಡದ ಕಾರಣ ಅಭಿವೃದ್ಧಿ ಕುಂಠಿತವಾಗಿತ್ತು. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಭಾರತದ ಬೆಳವಣಿಗೆ ಕಥೆಗೆ ಈ ಭಾಗ ಎಂಜಿನ್ ಆಗಲಿದೆ’ ಎಂದು ಮೋದಿ ಹೇಳಿದರು.
‘ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ವಾಯುಮಾರ್ಗ, ರೈಲು ಮಾರ್ಗಗಳ ಸಂಪರ್ಕ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸೌಕರ್ಯ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಲ್ಪಿಸಲು ಒತ್ತು ನೀಡಲಾಗಿದೆ' ಎಂದರು.
ಪರ್ವತಗಳ ನಾಡು ಸಿಕ್ಕಿಂ ಹಾಗೂ ದೇಶಕ್ಕೆ ಐತಿಹಾಸಿಕ ದಿನ ಎಂದು ಬಣ್ಣಿಸಿದ ಅವರು, ‘ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗುವುದು’ ಎಂದು ಹೇಳಿದರು.
ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಭಾಗವಹಿಸಿದ್ದರು.
9 ವರ್ಷಗಳ ನಂತರ ಸಾಕಾರಗೊಂಡ ಕನಸು:
ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ನಿಂದ 33 ಕಿ.ಮೀ. ದೂರದಲ್ಲಿರುವ ಪಾಕ್ಯೊಂಗ್ನಲ್ಲಿ 2009 ರಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಅದು 9 ವರ್ಷಗಳ ನಂತರ ಸಾಕಾರಗೊಂಡಿದೆ.
ಭಾರತ–ಚೀನಾ ಗಡಿ ಭಾಗದಿಂದ 60 ಕಿ.ಮೀ. ದೂರದ ಪಾಕ್ಯೊಂಗ್ ಗ್ರಾಮದ ಬಳಿ ಗುಡ್ಡ ಪ್ರದೇಶದಲ್ಲಿರುವ ಈ ವಿಮಾನ ನಿಲ್ದಾಣವು 201 ಎಕರೆ ವಿಸ್ತೀರ್ಣ ಹೊಂದಿದೆ.
ಅಕ್ಟೋಬರ್ 4ರಿಂದ ಈ ನಿಲ್ದಾಣದಿಂದ ವಿಮಾನ ಸಂಚಾರ ವಿಧ್ಯುಕ್ತವಾಗಿ ಪ್ರಾರಂಭವಾಗಲಿದೆ.
9 ವರ್ಷಗಳ ನಂತರ ಸಾಕಾರಗೊಂಡ ಕನಸು

ಸಾಮಾನ್ಯ ಜನರು ಸಹ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬುವುದು ನಮ್ಮ ಉದ್ದೇಶ
ನರೇಂದ್ರ ಮೋದಿ, ಪ್ರಧಾನಿ
ಸಾಮಾನ್ಯ ಜನರು ಸಹ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬುವುದು ನಮ್ಮ ಉದ್ದೇಶ
ನರೇಂದ್ರ ಮೋದಿ, ಪ್ರಧಾನಿ
Friends, If you like this post,kindly comment below the post and do share your
Response,
(Thanks for Reading....)
No comments:
Post a Comment