ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇಂದು 94ನೇ ಜನ್ಮದಿನ! | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Thursday, September 27, 2018

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇಂದು 94ನೇ ಜನ್ಮದಿನ!

  Pundalik       Thursday, September 27, 2018
- ಜಗದೀಶ ಮಾನೆ, ಸಂಶೋಧನಾ ವಿದ್ಯಾರ್ಥಿ
ಅಂದು ಬ್ರಿಟಿಷರ ಕುತಂತ್ರದಿಂದ ಒಡೆದುಹೋದಂತಹ ಹಿಂದು ಸಮಾಜವನ್ನು ಸನಾತನ ಭಾರತೀಯ ಸಂಸ್ಕೃತಿಯನ್ನು ಪುನರ್ ಸ್ಥಾಪಿಸುವ ಪ್ರಯತ್ನದಲ್ಲಿ ಸದಾ ನಿರತರಾಗಿದ್ದ ಡಾ. ಕೇಶವ ಬಲಿರಾಂ ಹೆಡಗೇವಾರರು ಬಾಲ್ಯದಿಂದ ದೇಶಭಕ್ತನಾಗಿದ್ದರು. ಅಂತಹ ದೇಶಭಕ್ತನಿಗೆ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ದಂತಹ ಸಂಘಟನೆಯನ್ನು ಪ್ರತ್ಯೇಕವಾಗಿ ಪ್ರಾರಂಭಿಸಬೇಕೆಂಬ ಕಲ್ಪನೆ ಹೇಗೆ ಬಂತು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. 1934 ವಾರ್ದಾದಲ್ಲಿ ಹೆಡಗೇವಾರರನ್ನು ಭೇಟಿ ಮಾಡಿದ ಮಹಾತ್ಮ ಗಾಂಧೀಜಿ ಕೇಳುತ್ತಾರೆ, ‘ನೀವು ಕಾಂಗ್ರೆಸ್‌ನಲ್ಲಿದ್ದುಕೊಂಡೇ ಏಕೆ ಸ್ವಯಂಸೇವಕರ ದಳವನ್ನು ಕಟ್ಟಲಿಲ್ಲ? ಪ್ರತ್ಯೇಕವಾಗಿ ಏಕೆ ಆರಂಭಿಸಿದಿರಿ? ಇದಕ್ಕೆ ಹೆಡಗೇವಾರರ ಸಂಬಂಧಿಸಿದಂತೆ ನನ್ನ ಕಲ್ಪನೆಯೇ ಬೇರೆ. ಸ್ವಾರ್ಥ ಬಿಟ್ಟು ದೇಶಕ್ಕಾಗಿ ಸ್ವತಃ ಮುಂದಾಗಿ ಕೆಲಸ ಮಾಡುವವರನ್ನು ನಿರ್ಮಾಣ ಮಾಡಬೇಕೆಂಬುದು ನನ್ನ ಇಚ್ಛೆ. ಆದರೆ ಈ ಕೆಲಸ ರಾಜಕೀಯ ಪಕ್ಷದ ಒಂದು ಭಾಗವಾಗಿದ್ದುಕೊಂಡು ಮಾಡಲು ಸಾಧ್ಯವಿಲ್ಲ.’ ರಾಷ್ಟ್ರ ಕಾರ್ಯಕ್ಕಾಗಿ ಸಮರ್ಪಿತ ಕಾರ್ಯಕರ್ತರ ಭರವಸೆಯ ಮೇಲೆಯೇ ರಾಷ್ಟ್ರದ ಎಲ್ಲ ಕ್ಷೇತ್ರಗಳ ಏಳ್ಗೆ ಸಾಧ್ಯ ಎಂದವರು ಬಲವಾಗಿ ನಂಬಿದ್ದರು. ವ್ಯಕ್ತಿ ಯಾವತ್ತೂ ಕೂಡಾ ಪರಿಪೂರ್ಣನಲ್ಲ. ಆತ ಎಷ್ಟೇ ಜ್ಞಾನಿಯಾಗಿದ್ದರೂ ಒಂದಿಲ್ಲೊಂದು ಬಗೆಯಲ್ಲಿ ಆತ ಸ್ವಾರ್ಥಿ ಭಾವನೆ ಅವರಿಗಿದ್ದುದರಿಂದ ಒಂದು ನಿಸ್ವಾರ್ಥ, ಧೈರ್ಯ, ಸಾಹಸ, ಶೌರ್ಯದ ಪ್ರತೀಕವಾದ ಸಂಘಟನೆಯನ್ನುಕಟ್ಟಬೇಕು ಎಂದುಕೊಂಡರು. ಭಗವಧ್ವಜವನ್ನು ಗುರುವಾಗಿ ಸ್ವಯಂಸೇವಕರ ಕಣ್ಮುಂದಿಟ್ಟು, ಇಂಥ ಶ್ರೇಷ್ಠ ಗುರುವಿಗೆ ನಿಷ್ಠೆಯಿಂದ ನಡೆದುಕೊಳ್ಳಬೇಕೆಂಬುದಾಗಿ ಕಾರ್ಯಕರ್ತರನ್ನು ಪ್ರೇರೇಪಿಸಿದರು.
ಆ ಸಂದರ್ಭದಲ್ಲಿ ಒಂದೆಡೆ ಮುಸ್ಲಿಂ ಲೀಗ್‌ನ ಮತಾಂಧತೆಯ ರಾಜಕೀಯ ಚಳವಳಿಗಳು, ಮತ್ತೊಂದೆಡೆ ಲಕ್ಷಾಂತರ ಕ್ರಾಂತಿಕಾರಿಗಳ ನಿರಂತರ ಹೋರಾಟ, ಬಲಿದಾನಗಳು ನಡೆದಿದ್ದರೆ ಇತ್ತ ಕಾಂಗ್ರೆಸ್‌ನ ದ್ವಂದ್ವ ನೀತಿ, ನಿರ್ಣಯಗಳು ದೇಶಬಾಂಧವರಲ್ಲಿ ಗೊಂದಲ ಮೂಡಿಸಿದ್ದವು. ಗಾಂಧಿ ಮತ್ತು ನೆಹರೂರವರ ಕೆಲ ನಿಲುವುಗಳಂತೂ ಬಗ್ಗೆ ಅನೇಕ ರೀತಿಯನ ಪ್ರಶ್ನೆಗಳೇಳುವಂತೆ ಮಾಡಿದ್ದವು. ಹಿಂದುತ್ವ ಮತ್ತು ರಾಷ್ಟ್ರೀಯವಾದ ಸತ್ತು ಭೂಮಿಯೊಳಗೆ ಅಡಗಿ ಹೋಗುವ ಸಮಯದಲ್ಲಿ ಹಿಂದುತ್ವದ ಅಲೆಗಳನ್ನು ಬಡಿದೆಬ್ಬಿಸಲು ಡಾ.ಹೆಡಗೇವಾರರ ನೇತೃತ್ವದಲ್ಲಿ 1925 ಸೆಪ್ಟೆಂಬರ್ 27ರ ವಿಜಯದಶಮಿಯ ದಿನ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ಜನ್ಮ ತಾಳಿತು. ರಾಷ್ಟ್ರ ಪುನರ್‌ನಿರ್ಮಾಣದ ಧ್ಯೇಯದೊಂದಿಗೆ ಸಮಾಜದ ಸಮಸ್ಯೆಗಳಿಗೆ ಎದೆಯೊಡ್ಡಿ ರಾಷ್ಟ್ರವಾದಿ ಸಂಘಟೆಯಾಗಿ ರೂಪಗೊಂಡು ನಿಸ್ವಾರ್ಥ ಮನೋಭಾವನೆಯುಳ್ಳ ದೇಶಭಕ್ತರನ್ನು ಹುಟ್ಟುಹಾಕುವ ಮಹಾನ್ ಶಕ್ತಿಯಾಗಿ ಸಂಘಟನೆ ಬೆಳೆಯಲಾರಂಭಿಸಿತು.
ಭವ್ಯ ರಾಷ್ಟ್ರೀಯತೆಯನ್ನು ಪುನಃ ಸ್ಥಾಪನೆ ಒಂದು ರಾಷ್ಟ್ರದ ಉತ್ತಮ ಸ್ಥಿತಿಯ ಪ್ರಜೆಗಳ ಬೇಡಿಕೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷಧ, ಭಾರತದ ಪ್ರತಿಯೊಬ್ಬನಿಗೂ ದೊರಕಬೇಕಾದ ವ್ಯವಸ್ಥೆಯನ್ನು ರೂಪಿಸುವುದಾಗಿದೆ. ಸಾಮರಸ್ಯ, ಸಮಾನತೆ, ಮೂಡಿಸುವುದರೊಂದಿಗೆ ಭ್ರಷ್ಟಾಚಾರ, ಅನ್ಯಾಯಗಳನ್ನು ದೂರಗೊಳಿಸಿ, ರಾಷ್ಟ್ರೀಯತೆಯ ವಿಚಾರದಲ್ಲಿ ಎಲ್ಲ ಧರ್ಮ, ವಿವಿಧ ಜನಾಂಗಗಳೆಲ್ಲವನ್ನು ಒಂದುಗೂಡಿಸಿ ಆರೋಗ್ಯಕರವಾದ ನಾಗರಿಕ ಸಮಾಜವನ್ನು ಕಟ್ಟುವುದರೊಂದಿಗೆ ಸನಾತನ ಭಾರತದ ಗತವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡುವುದೇ ಆಗಿದೆ. 1940ರ ಜೂನ್ 21 ರಂದು ಹೆಡಗೇವಾರರ ಮರಣ ನಂತರ 1973ರ ಜೂನ್ ವರೆಗೆ ಸಂಘದ ಜ್ಯೋತಿಗೆ ಬತ್ತಿಗಳಂತೆ ಉರಿದು ಕೇಶವ ಹಚ್ಚಿದ ರಾಷ್ಟ್ರಮಂತ್ರದ ಹಣತೆಯನ್ನು ನಂದದಂತೆ ಬೆಳಗಿದ ಕೀರ್ತಿ ಮಾಧವರಾವ್ ಸದಾಶಿವ ಗೋಳ್ವಲ್ಕರ್‌ರಿಗೆ ಸಲ್ಲುತ್ತದೆ. ಮಾಧವರಾವ್ ಅವರು ಸ್ವಾಮಿ ವಿವೇಕಾನಂದರ ಬಡ, ದೀನ, ದಲಿತೋದ್ಧಾರ ಹಾಗೂ ಬಡವರ ಕಷ್ಟ ನಿವಾರಣೆಯ ಕಾರ್ಯವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡರು.
ಗುರೂಜಿಯವರ ಈ ಕಾರ್ಯವನ್ನು ಅನೇಕರು ಸ್ಮರಿಸಿದರು. 1939 ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರದಲ್ಲಿ ಭಾಗವಹಿಸಿದ ಅಂಬೇಡ್ಕರ್‌ರು,-‘ಇತರರ ಜಾತಿ ತಿಳಿಯುವ ಗೊಡವೆಯೇ ಸಂಪೂರ್ಣ ಸಮಾನತೆ, ಸಹೋದರತೆಗಳ ಭಾವನೆಯಿಂದ ಸ್ವಯಂಸೇವಕರು ವ್ಯವಹರಿಸುವದನ್ನು ಕಂಡು ನನಗೆ ಬಹಳ ಆಶ್ಚರ್ಯವೆನಿಸಿತು’ ಎಂದು ಹೇಳಿದ್ದರು. 1952ರ ಉಪಚುನಾವಣೆಯಲ್ಲಿ ಕಾಂಗ್ರೆಸ್, ಅಂಬೇಡ್ಕರ್‌ರನ್ನು ಸೋಲಿಸಲು ಹೊರಟಾಗ ಅಂದು ಅಂಬೇಡ್ಕರ್‌ಪರ ಚುನಾವಣಾ ಏಜೆಂಟ್ ಆಗಿದ್ದವರು ಸಂಘದ ಪ್ರಚಾರಕ ದತ್ತೋಪಂತ ಟೆಂಗಡಿಯವರು. ಇದಕ್ಕಿಂತ ಮುಂಚೆ ಗಾಂಧೀಜಿಯ ಹತ್ಯೆಯ ನಂತರ ಸಂಘದ ಮೇಲೆ ನೆಹರು ನಿರ್ಬಂಧ ಹೇರಿದಾಗ ಅಂಬೇಡ್ಕರ್‌ರು ಇದನ್ನು ಕಟುವಾಗಿ ವಿರೋಧಿಸಿದ್ದರು. ಯಾರೋ ಒಬ್ಬರು ಮಾಡಿರುವ ತಪ್ಪಿಗೆ ಇಡೀ ಸಂಘಟನೆಯ ಮೇಲೆ ನಿಷೇಧ ಶುದ್ಧ ಮೂರ್ಖತನ ಎಂದು ನೇರವಾಗಿ ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಂಡಿದ್ದರು. ದೇಶ ಇಬ್ಭಾಗವಾದ ಸಂದರ್ಭದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಗುರೂಜಿ ಪ್ರವಾಸ ಮಾಡಿ ಹಿಂದೂಗಳಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ನಿರತರಾಗಿದ್ದರು. ಅದೇ ಸಮಯದಲ್ಲಿ ಪಶ್ಚಿಮ ಪಂಜಾಬ್‌ದಲ್ಲಿ ಹಿಂದೂಗಳ ಮೇಲೆ ಆಕ್ರಮಣ, ಕೊಲೆ, ಸುಲಿಗೆಯಂತಹ ಪಾತಕ ಕೃತ್ಯಗಳು ಆರಂಭವಾಗಿದ್ದವು. ಆ ದಂಗೆಗಳಲ್ಲಿ ನಿಮ್ಮದೇ ಕೈವಾಡವಿದೆ ಎಂದು ಗಾಂಧೀಜಿಯವರು ಗೋಳ್ವಲ್ಕರ್‌ರಿಗೆ ನೇರವಾಗಿ ಕೇಳಿದಾಗ, ‘ಸಂಘ ಎಂದೆಂದಿಗೂ ದಂಗೆಯ ರೂವಾರಿಯಲ್ಲ. ಸಂಘ ಯಾರ ಆಕ್ರಮಣ ಮಾಡುವುದಿಲ್ಲ. ಸ್ವಯಂಸೇವಕರಲ್ಲಿ ಆತ್ಮ ರಕ್ಷಣೆಯನ್ನು ಕಲಿಸುತ್ತದೆಯೇ ಹೊರತು ಸೇಡಿನ ಪ್ರತೀಕಾರವನ್ನು ಕಲಿಸುವುದಿಲ್ಲ’ ಎಂದು ಉತ್ತರಿಸಿದ್ದರು. ಗಾಂಧಿ ಹತ್ಯೆಯಾದಾಗ ಆ ಆರೋವನ್ನು ಸಂಘದ ಮೇಲೆ ಹೊರಿಸಿ ಗುರೂಜಿಯವರನ್ನು ನೆಹರು ಜೈಲಿಗೆ ತಳ್ಳಿದರು. ಆದರೆ ಈ ಆರೋಪವನ್ನು ಸಾಬೀತು ಮಾಡಲಿಕ್ಕಾಗದೆ ಸರಕಾರ ಮುಖಭಂಗಕ್ಕೀಡಾಗಿ ಅವರನ್ನು ಬಿಡುಗಡೆಗೊಳಿಸಿತು.
ಗುರೂಜೀಯವರ ಕಾರ್ಯಶಕ್ತಿಯಿಂದ ಸಂಘ ಕಾರ್ಯವು ಭಾರತಾದ್ಯಂತ ಹೆಮ್ಮರವಾಗಿ ಬೆಳೆಯಲಾರಂಭಿಸಿತು. 1940 ರಲ್ಲಿ ಗುರೂಜೀ ಸಂಘದ ಜವಾಬ್ದಾರಿಯನ್ನು ತೆಗೆದುಕೊಂಡ ನಂತರ ‘ಪ್ರಚಾರಕ’ ಎಂಬ ಯೋಜನೆಯನ್ನು ಪ್ರಚಾರಕ ಎಂದರೆ ಒಂದು ಹಂತದ ಶಿಕ್ಷಣವನ್ನು ಮುಗಿಸಿದ ನಂತರ ತಮ್ಮ ಪೂರ್ಣ ಸಮಯವನ್ನು ರಾಷ್ಟ್ರ ಕಾರ್ಯಕ್ಕೆ ಸಮರ್ಪಿಸುವುದು. ಸ್ವಾರ್ಥ ಆಸೆಗಳನ್ನು ಬಿಟ್ಟು ದೇಶಕ್ಕಾಗಿ ಸೇವೆ ಮಾಡುವುದು. ಗುರೂಜಿಯವರು ಕೊಟ್ಟ ಆ ಕರೆಗೆ ಓಗೊಟ್ಟ ಸಹಸ್ರಾರು ಯುವ ತರುಣರು ತಮ್ಮ ವೈಯಕ್ತಿಕ ಜೀವನ ತೊರೆದು ರಾಷ್ಟ್ರಕ್ಕಾಗಿ ಜೀವಿಸಲು ಬದ್ಧರಾಗಿ ನಿಂತರು. ಇಂದು ಸಂಘ ಪರಿವಾರದ 100ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ 6 ಸಾವಿರಕ್ಕೂ ಹೆಚ್ಚು ಪೂರ್ಣಾವಧಿ ಕಾರ್ಯಕರ್ತರಿದ್ದಾರೆ. ದೇಶದ ಮೂಲೆ ಸಂಘದ ಶಾಖೆಗಳು ರಾಷ್ಟ್ರದ ಶಕ್ತಿಯಾಗಿ ಬೆಳೆದುನಿಂತಿವೆ. ದೇಶದಲ್ಲಿ ಒಟ್ಟು 55 ಸಾವಿರ ಶಾಖೆಗಳು ಇಂದು ಕಾರ್ಯ ನಿರ್ವಹಿಸುತ್ತಿವೆ. ಶಾಖೆಯ ಉದ್ದೇಶ, ವ್ಯಕ್ತಿಗಳನ್ನು ಆಯ್ಕೆ ಮಾಡಿ ಸಂಘಕ್ಕೆ ತಂದು, ಕಾರ್ಯಕ್ರಮಗಳಿಂದ ಧ್ಯೇಯನಿಷ್ಠರನ್ನಾಗಿ ಮಾಡಿ ರಾಷ್ಟ್ರೀಯ ದೃಷ್ಟಿಕೋನದಿಂದ ವ್ಯಕ್ತಿತ್ವ ಮತ್ತು ಚಾರಿತ್ರ್ಯ ನಿರ್ಮಾಣ ಮಾಡುವುದು. ಬೈಠಕ್, ಚರ್ಚೆ, ಗೀತೆಗಳು, ಬೌದ್ಧಿಕ ಕಾರ್ಯಕ್ರಮ, ಶಿಬಿರ, ಪ್ರಾರ್ಥನೆ ಮುಂತಾದ ಚಟುವಟಿಕೆಗಳು ಅಲ್ಲಿ ನಡೆಯುತ್ತವೆ.
ಸಾಮಾಜಿಕ ನ್ಯಾಯದ ಸಂಘದ ದೃಷ್ಟಿಕೋನ ಬಹಳ ವಿಶಾಲವಾದದ್ದು. ಕೇವಲ ದಲಿತ-ಹಿಂದುಳಿದ ಉದ್ಧಾರ ಮಾತ್ರವಲ್ಲ, ಅದರೊಂದಿಗೆ ಬಹಳ ಮುಖ್ಯವಾಗಿ ಯಾರು ಇನ್ನೂ ಕಾಡು-ಮೇಡುಗಳಲ್ಲಿ ಪ್ರಾಣಿಗಳಂತೆ ಬದುಕುತ್ತಿದ್ದಾರೆಯೋ ಆ ಎಲ್ಲ ಆದಿವಾಸಿ, ವನವಾಸಿ ಜನಾಂಗವೆಲ್ಲವೂ ಮನುಷ್ಯರಂತೆ ಬಾಳಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅವರಿಗೂ ಕೂಡಾ ಇತರರಂತೆ ಸರಕಾರಿ ಮೂಲಭೂತ ಸೌಕರ್ಯಗಳು ಸಿಗಬೇಕು. ಈ ಉದ್ದೇಶದಿಂದ ಸಂಘವು 1952ರಲ್ಲಿ ‘ವನವಾಸಿ ಕಲ್ಯಾಣ’ ಎಂಬ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿತು. ವನವಾಸಿ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ನಿಲಯಗಳನ್ನು ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ನಿರ್ಮಾಣ ಮಾಡಲಾಗಿದೆ. ಕರ್ನಾಟಕದಲ್ಲಿ ಶಿವಮೊಗ್ಗ, ಚಾಮರಾಜನಗರ, ದಾಂಡೇಲಿ, ಸಿದ್ದಾಪುರ, ಭಟ್ಕಳ, ಕುಮಟಾ ಮುಂತಾದ ಪ್ರದೇಶಗಳಲ್ಲಿ ಇದರ ಶಾಖೆಗಳಿವೆ. ಸಾವಿರಾರು ವಿದ್ಯಾವಂತರು, ವನವಾಸಿಗರ ಕಲ್ಯಾಣಕ್ಕಾಗಿ ತಮ್ಮ ಪೂರ್ಣ ಸಮಯವನ್ನು ಮೀಸಲಿಟ್ಟು ಸೇವೆಯಲ್ಲಿ ನಿರತರಾಗಿದ್ದಾರೆ.
ಸಂಘವು ತನ್ನ ನೂರಾರು ಸೇವಾ ಪ್ರಕಲ್ಪಗಳೊಂದಿಗೆ ವಿವಿಧ ರೀತಿಯ ಸೇವಾ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಅತಿವೃಷ್ಟಿ, ಪ್ರಕೃತಿ ವಿಕೋಪಗಳು ಸಂಭವಿಸಿದ ಸಂದರ್ಭಗಳಲ್ಲೆಲ್ಲ ಸಂಘದ ಕಾರ್ಯಕರ್ತರು, ಸರಕಾರಿ ಅಧಿಕಾರಿಗಳಿಗಿಂತ ಮೊದಲು ಅಲ್ಲಿಗೆ ತೆರಳಿ ತಮ್ಮ ಜೀವದ ಹಂಗನ್ನು ತೊರೆದು ಸಹಾಯ ಮಾಡುತ್ತಾರೆ. ಅಪಾಯದ ಸಿಲುಕಿದ್ದ ಸಾವಿರಾರು ಜನರನ್ನು ರಕ್ಷಿಸಿ ಅವರಿಗೆ ಅನ್ನ, ಆಹಾರ, ಬಟ್ಟೆ, ಔಷಧಿಗಳನ್ನು ನೀಡಿ ಅವರನ್ನು ಪೋಷಣೆ ಮಾಡುತ್ತಾರೆ. 2004 ರಲ್ಲಿ ಸುನಾಮಿ ಸಂಭವಿಸಿದಾಗ, 2009 ರಲ್ಲಿ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಾದಾಗ, 2013 ರಲ್ಲಿ ಉತ್ತರಾಖಂಡ ನೆರೆಹಾವಳಿಯಾದ ಸಂದರ್ಭಗಳಲ್ಲೂ ಸ್ವಯಂಸೇವಕರು ಮಾಡಿರುವ ಸೇವಾ ಕಾರ್ಯವನ್ನು ಸ್ಮರಿಸಲೇಬೇಕು. ಈ ರೀತಿಯ ಸೇವಾ ಕಾರ್ಯದ ಜತೆಗೆ ರಾಷ್ಟ್ರಕ್ಕೆ ಶತ್ರುಳಿಂದ ಗಂಡಾಂತರ ಬಂದಂತಹ ಸಂದರ್ಭದಲ್ಲಿಯೂ ಕೂಡಾ ವಿದ್ಯಾರ್ಥಿ ಪರಿಷತ್ತಿನ ಎಬಿವಿಪಿ ಕಾರ್ಯಕರ್ತರು ಶಸ್ತ್ರಾಸ್ತ್ರ-ಸಮವಸ್ತ್ರವಿಲ್ಲದ ಶತ್ರುಗಳಿಗೆ ಪ್ರತ್ಯುತ್ತರ ಕೊಡುವ ಮೂಲಕ ರಾಷ್ಟ್ರಭಕ್ತಿಯನ್ನು ಮೆರೆದಿದ್ದಾರೆ.
1986 ರಲ್ಲಿ ಆಂಧ್ರಪ್ರದೇಶದ ವಾರಂಗಲ್‌ನ ಕಾಕತೀಯ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಧ್ವಜವನ್ನು ಕಮ್ಯುನಿಸ್‌ಟ್ ಕಾರ್ಯಕರ್ತರು ಹಾರಿಸಲು ಬಿಡದೇ ಇದ್ದ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತ ಜಗಮೋಹನ್ ರೆಡ್ಡಿ ತಿರಂಗವನ್ನು ಹಾರಿಸಿ ಸಾಹಸ ಮೆರೆದ. 1992 ರಲ್ಲಿ ಭಾರತಮಾತೆಯ ಮುಕುಟಮಣಿಯಾಗಿದ್ದ ಜಮ್ಮು-ಕಾಶ್ಮೀರದ ಶ್ರೀನಗರದ ‘ಲಾಲ್‌ಚೌಕ್’ನಲ್ಲಿ ಭಯೋತ್ಪಾದಕರು ಸವಾಲೆಸೆದಿದ್ದಾಗ, ಈ ಸವಾಲ್‌ನ್ನು ಸ್ವೀಕರಿಸಿದ ಎಬಿವಿಪಿ ಕಾರ್ಯಕರ್ತರು ಜೀವದ ಹಂಗನ್ನು ತೊರೆದು 10,000ಕ್ಕಿಂತ ಅಧಿಕ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ತಿರಂಗಾ ಹಾರಿಸುವ ಮೂಲಕ ಶತ್ರುಗಳ ಸವಾಲಿಗೆ ತಿರುಗೇಟು ಕೊಟ್ಟಿದ್ದರು.
ಆರೆಸ್ಸೆಸ್ ಮುಸ್ಲಿಂ ವಿರೋಧಿ ಎಂದು ಕೆಲವರು ಕುಟುಕುತ್ತಿರುತ್ತಾರೆ. ಆದರೆ ಸಂಘ ಯಾವತ್ತೂ ಕೂಡಾ ಮುಸ್ಲಿಂ ವಿರೋಧಿಯಲ್ಲ. ಕಳೆದ ಐದಾರು ದಿನಗಳ ಹಿಂದೆ ಆರೆಸ್ಸೆಸ್ಸಿನ ಸರಸಂಘಚಾಲಕ ಮೋಹನ ಭಾಗವತರು ‘‘ಹಿಂದುತ್ವ ಎಂದರೆ ಮುಸ್ಲಿಂ ವಿರೋಧಿ ಅಲ್ಲ. ಹಿಂದೂ ರಾಷ್ಟ್ರವೆಂದರೆ ಮುಸ್ಲಿಂ ರಹಿತ ಸಮಾಜವೂ ಅಲ್ಲ. ಒಂದೊಮ್ಮೆ ಅಂತಹ ಸ್ಥಿತಿ ನಿರ್ಮಾಣವಾದರೆ ಅದು ಹಿಂದುತ್ವವೇ ಅಲ್ಲ. ‘ವಸುಧೈವ ಕುಟುಂಬಕಂ’ ಎನ್ನುವುದು ಸಂಘದ ಎಂದು ಹೇಳಿದ್ದಾರೆ. ಅಂದೊಮ್ಮೆ ಸಂಘದ ಶಿಬಿರದಲ್ಲಿ ಭಾಗವಹಿಸಿದ ಡಾ.ಝಕೀರ್ ಹುಸೇನರು, ‘ಮುಸಲ್ಮಾನರ ವಿರುದ್ಧ ಹಿಂಸೆ ಮತ್ತು ದ್ವೇಷವನ್ನು ಪ್ರಚೋದಿಸುತ್ತಾರೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಆರೋಪ ಹೊರಿಸುವುದು ಅಸತ್ಯ. ಮುಸಲ್ಮಾನರು ಪರಸ್ಪರ ಸ್ನೇಹ, ಸಹಕಾರ, ಪ್ರೀತಿಯ ಪಾಠಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಕಲಿಯಬೇಕೆಂದಿದ್ದರು. ಭಾರತದಲ್ಲಿ ಹಿಂದೂಗಳು ಸರ್ವಶ್ರೇಷ್ಠ ಉದಾರ ಮನೋಭಾವನೆಯನ್ನು ಹೊಂದಿರುವದರಿಂದಲೇ ಇಲ್ಲಿನ ಮುಸಲ್ಮಾನರು ಪಾಕಿಸ್ತಾನಕ್ಕಿಂತ ಅತ್ಯಂತ ಹೆಚ್ಚು ನೆಮ್ಮದಿಯಿಂದಿದ್ದಾರೆ. ಹಿಂದುತ್ವ ಎನ್ನುವದು ಮಾನವ ತತ್ವದ ಸಂಕೇತ. ಹಾಗಾಗಿ ಸ್ವಯಂಸೇವಕ ಸಂಘ ಒಂದು ಮಹಾಮಾನವತಾವಾದಿ ಸಂಘಟನೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ’ ಎಂದು ಹೇಳಿದ್ದರು.
ಇಂದು ಸಂಘದ ಮಹಾಮಾನವತಾವಾದದ ವಿಚಾರಗಳು ಇಡೀ ವಿಶ್ವಾದ್ಯಂತ ಪಸರಿಸುತ್ತಿವೆ. ವಿಶ್ವದ 37 ರಾಷ್ಟ್ರಗಳಲ್ಲಿ ಸಂಘದ ಶಾಖೆಗಳು ನಡೆಯುತ್ತಿವೆ. ಅಲ್ಲಿ ‘ಹಿಂದು ಸ್ವಯಂಸೇವಕ ಸಂಘ’ ಎಂಬ ಹೆಸರಿನೊಂದಿಗೆ ಚಟುವಟಿಕೆಗಳು ನಡೆಯುತ್ತವೆ. 22 ಜನ ಪೂರ್ಣಾವಧಿ ಕಾರ್ಯಕರ್ತರು ಹೊರ ರಾಷ್ಟ್ರಗಳಲ್ಲಿ ಸಂಘ ಕಾರ್ಯದಲ್ಲಿ ತೊಡಗಿದ್ದಾರೆ. 1990 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಂಘ ‘ಶಿಕ್ಷಾ’ ವರ್ಗದಲ್ಲಿ 20 ಬಂದಿದ್ದ 200 ಸ್ವಯಂಸೇವಕರು ಭಾಗವಹಿಸಿದ್ದರು. 1995ರ ಡಿಸೆಂಬರ್‌ನಲ್ಲಿ ಗುಜರಾತ್‌ನ ವಡೋದರದಲ್ಲಿ ನಡೆದ ಎರಡನೆಯ ವಿಶ್ವಸಂಘದ ಶಿಬಿರದಲ್ಲಿ 26 ದೇಶಗಳಿಂದ ಬಂದಿದ್ದ 380 ಸ್ವಯಂ ಸೇವಕರು ಭಾಗವಹಿಸಿದರು. ಮಾರಿಷಸ್, ಮಲೇಶಿಯಾ, ಇಂಗ್ಲೆಂಡ್, ಇಂಡೋನೇಷಿಯಾ, ನೇಪಾಳ, ಅಮೆರಿಕ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ಕೆನಡಾ, ಡೆನ್ಮಾರ್ಕ್, ಕೀನ್ಯಾ ಹೀಗೆ ಹಲವಾರು ರಾಷ್ಟ್ರಗಳಲ್ಲಿ ಸ್ವಯಂ ಸೇವಕರ ನೇತೃತ್ವದಲ್ಲಿ ಸಂಘದ ಚಟುವಟಿಕೆ ಕಾರ್ಯವಿಸ್ತಾರ ನಿರಂತರವಾಗಿ ನಡೆಯುತ್ತಾ ಕಾರ್ಯದ ವ್ಯಾಪ್ತಿ ಹೆಚ್ಚು ವಿಸ್ತಾರವಾಗುತ್ತಿದೆ. ಭಾರತೀಯ ಸಾಂಸ್ಕೃತಿಕ ಸರ್ವಾಂಗೀಣ ಪುನರುಜ್ಜೀವನ ಕಾರ್ಯದ ಪ್ರತಿಧ್ವನಿಯು ಹೊರನಾಡುಗಳಲ್ಲಿ ಅನುರಣಿತವಾಗುತ್ತಿರುವುದು ಸಂಘದ ಶಕ್ತಿಯೇ ಸರಿ. ಭಾರತದ ಸಾಂಸ್ಕೃತಿಕ ಸೂರ್ಯನು ಬಾನಿನ ನೆತ್ತಿಯನ್ನೇರಿದಾಗಲೆಲ್ಲ ಹೊರ ಜಗತ್ತಿನಲ್ಲೂ ಅದರ ಹೊಂಗಿರಣಗಳು ಪಸರಿಸಿದ್ದು ಈಗ ಅನಾವರಣವಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಸ್ವಯಂಸೇವಕರು ಸನಾತನ ಭಾರತದ ದಿವ್ಯಜ್ಯೋತಿಯನ್ನು ವಿಶ್ವಾದ್ಯಂತ ಬೆಳಗಿಸುತ್ತಿದ್ದಾರೆ.

Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
logoblog

Thanks for reading ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇಂದು 94ನೇ ಜನ್ಮದಿನ!

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *