ಅನೈತಿಕ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಐಪಿಸಿ ಸೆಕ್ಷನ್ 497 ಅಸಂವಿಧಾನಿಕ ಎಂದು ಹೇಳಿದೆ.
ಅನೈತಿಕ ಸಂಬಂಧಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 497ನ ಮಾನ್ಯತೆ ಬಗ್ಗೆ ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಪೀಠ ಮಹತ್ವದ ತೀರ್ಪು ನೀಡಿದೆ. ಪತಿಯು ಪತ್ನಿಯ ಮಾಲೀಕನಲ್ಲ. ಮೂಲಭೂತ ಹಕ್ಕುಗಳ ಮಾನದಂಡವು ಮಹಿಳೆಯರ ಹಕ್ಕುಗಳನ್ನೂ ಒಳಗೊಂಡಿರಬೇಕು. ವ್ಯವಸ್ಥೆಯು ಮಹಿಳೆಯನ್ನು ಅಸಮಾನವಾಗಿ ಕಾಣಬಾರದು. ಮಹಿಳೆ, ಪುರುಷ ಇಬ್ಬರೂ ಸಮಾನರು. ಮಹಿಳೆಯರನ್ನು ಸಮಾನವಾಗಿ ಗೌರವಿಸಬೇಕು. ನಾನು, ನೀನು ಹಾಗೂ ನಾವು ಅನ್ನೋದೇ ಸಂವಿಧಾನದ ಅಂದ. ಸಮಾನತೆ ಒಂದು ವ್ಯವಸ್ಥೆಯ ಆಡಳಿತ ವ್ಯವಸ್ಥೆಯ ತತ್ವವಾಗಿದೆ ಎಂದು ಹೇಳಿದರು.
ಕಾನೂನಿನಲ್ಲಿ ಹೆಣ್ಣಿಗೆ ಗಂಡು ಅಥವಾ ಗಂಡಿಗೆ ಹೆಣ್ಣು ಅಧೀನರಾಗಿರುವುದು ತಪ್ಪು. ಮದುವೆಯಾದ ನಂತರ ಮಹಿಳೆ ತನ್ನ ಲೈಂಗಿಕ ಸ್ವಾಯತ್ತತೆಯನ್ನು ಗಂಡನಿಗೆ ಅರ್ಪಿಸುವುದಿಲ್ಲ. ಮದುವೆ ನಂತರ ತನ್ನ ಒಪ್ಪಿಗೆಯಂತೆ ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಆಯ್ಕೆಗೆ ಕಡಿವಾಣ ಹಾಕಬಾರದು. ಮಹಿಳೆಯನ್ನು ಅಸಮಾನತೆಗೆ ಒಳಪಡಿಸುವ ಯಾವುದೇ ಷರತ್ತು ಸಂವಿಧಾನಾತ್ಮಕವಾಗಿಲ್ಲ ಎಂದು ಸಿಜೆಐ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟರು.
Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
No comments:
Post a Comment