ದಾಖಲೆ ನಿರ್ಮಿಸಿದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಐದನೇ ಘಟಕ
ದಾಖಲೆ ನಿರ್ಮಿಸಿದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಐದನೇ ಘಟಕ
ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ಟಿಪಿಎಸ್) ಐದನೇ ಘಟಕವು 220 ದಿನಗಳಿಂದ ಹಗಲು–ರಾತ್ರಿ ವಿದ್ಯುತ್ ಉತ್ಪಾದನೆ ಮಾಡಿ ಸೆಪ್ಟೆಂಬರ್ 24ಕ್ಕೆ ದಾಖಲೆ ನಿರ್ಮಿಸಿದೆ.

210 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಘಟಕವು ಕಾರ್ಯಕ್ಷಮತೆಯನ್ನು ಒರೆಗಲ್ಲಿಗೆ ಹಚ್ಚಿದೆ. ಈ ಹಿಂದೆ 200 ದಿನಗಳ ಗಡಿ ದಾಟಿರಲಿಲ್ಲ. ಆರ್ಟಿಪಿಎಸ್ನಲ್ಲಿರುವ ಎಂಟು ಘಟಕಗಳ ಪೈಕಿ ಗರಿಷ್ಠ ದಿನಗಳವರೆಗೆ ವಿದ್ಯುತ್ ಉತ್ಪಾದಿಸಿದ ಎರಡನೇ ದಾಖಲೆಗೆ ಈ ಘಟಕವು ಭಾಜನವಾಗಿದೆ. ಆರ್ಟಿಪಿಎಸ್ನಲ್ಲಿ ಸತತ 352 ದಿನಗಳವರೆಗೆ ವಿದ್ಯುತ್ ಉತ್ಪಾದಿಸಿದ ದಾಖಲೆಯನ್ನು ಆರನೇ ಘಟಕವು ಹೊಂದಿದೆ.
’ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲು ಸಾಕಷ್ಟು ಕಾರಣಗಳು ಇವೆ. ಒಂದು ಸಲ ಇಲಿ ಕಂಪ್ಯೂಟರ್ ವೈರ್ಗಳನ್ನು ಕತ್ತರಿಸಿ ಹಾಕಿದ್ದರಿಂದ ನೆಟ್ವರ್ಕ್ ಸಮಸ್ಯೆ ತಲೆದೋರಿ ಸ್ಥಗಿತಗೊಳಿಸಲಾಗಿತ್ತು! ಉತ್ಪಾದನೆಯಾದ ವಿದ್ಯುತ್ ಗ್ರೀಡ್ಗಳಿಗೆ ಹೋಗುತ್ತದೆ. ಆದರೆ, ವಿದ್ಯುತ್ ಬಳಕೆಯಾಗದೆ ಹೆಚ್ಚುವರಿಯಾದರೂ ಘಟಕವು ಸ್ವಯಂ ಸ್ಥಗಿತವಾದದ್ದು ಹಿಂದೆ ನಡೆದಿವೆ. ಈಗ ತಂತ್ರಜ್ಞಾನ ಸುಧಾರಿಸಿರುವುದರಿಂದ ಹೆಚ್ಚುವರಿ ವಿದ್ಯುತ್ನಿಂದ ಟ್ರಿಪ್ ಆಗುವುದಿಲ್ಲ’ ಎಂದು ಆರ್ಟಿಪಿಎಸ್ ಎಂಜಿನಿಯರುಗಳು
ಹೇಳಿದರು.
ಕಲ್ಲಿದ್ದಲು ಗುಣಮಟ್ಟ ಆಧರಿಸಿ ವಿದ್ಯುತ್ ಉತ್ಪಾದನೆಯಲ್ಲಿ ಏರಿಳಿತ
ವಾಗುತ್ತದೆ. ಐದನೇ ಘಟಕವು 220 ದಿನಗಳಲ್ಲಿ ಗರಿಷ್ಠ 225 ಮೆಗಾವಾಟ್ ಗರಿಷ್ಠ ಹಂತಕ್ಕೆ ತಲುಪಿ ವಿದ್ಯುತ್ ಉತ್ಪಾದಿಸಿದೆ. ವಿದ್ಯುತ್ ಬೇಡಿಕೆಯಿಲ್ಲದಿದ್ದರೆ ವಿದ್ಯುತ್ ಉತ್ಪಾದನೆ ಮಾಡುವುದನ್ನು ಕಡಿತ ಮಾಡುವುದು ಅನಿವಾರ್ಯ. ಆದರೆ, ಘಟಕಗಳು ಹೊಂದಿದ ಸಾಮರ್ಥ್ಯಕ್ಕಿಂತ ಶೇಕಡ 50ರ ಕೆಳಮಟ್ಟದಲ್ಲಿ ವಿದ್ಯುತ್ ಉತ್ಪಾದಿಸುವುದಿಲ್ಲ. ಐದನೇ ಘಟಕವು ಕನಿಷ್ಠ 110 ಮೆಗಾವಾಟ್ ವಿದ್ಯುತ್ ಉತ್ಪಾದನಾ ಹಂತದಲ್ಲಿ ಕೆಲಸ ಮಾಡಿದೆ. ಸಾಮರ್ಥ್ಯಕ್ಕಿಂತ ತುಂಬಾ ಕಡಿಮೆ ವಿದ್ಯುತ್ ಉತ್ಪಾದನೆ ಮಾಡುವುದರಿಂದ ಟರ್ಬೈನ್ಗಳಲ್ಲಿ ಹೆಚ್ಚು ಶಬ್ದ ಉಂಟಾಗುತ್ತದೆ ಎನ್ನುವುದು ಎಂಜಿನಿಯರುಗಳ ವಿವರಣೆ.
‘ಜೂನ್ ಹಾಗೂ ಆಗಸ್ಟ್ನಲ್ಲಿ ಜಲವಿದ್ಯುತ್, ಸೌರವಿದ್ಯುತ್ ಹಾಗೂ ಪವನ ವಿದ್ಯುತ್ ಹೆಚ್ಚಾಗಿ ಸಿಗುತ್ತಿದ್ದರಿಂದ ಶಾಖೋತ್ಪನ್ನ ವಿದ್ಯುತ್ಗೆ ಕೆಪಿಟಿಸಿಎಲ್ನಿಂದ ಬೇಡಿಕೆ ಇರಲಿಲ್ಲ. ಇದರಿಂದಾಗಿ ಆರ್ಟಿಪಿಎಸ್ನಲ್ಲಿ ಆರು ಘಟಕಗಳನ್ನು ಸ್ಥಗಿತಗೊಳಿಸ
ಲಾಗಿತ್ತು. ಸೆಪ್ಟೆಂಬರ್ನಲ್ಲಿ ಪವನ ವಿದ್ಯುತ್ ಉತ್ಪಾದನೆ ತಗ್ಗಿದ್ದರಿಂದ ಶಾಖೋತ್ಪನ್ನ ವಿದ್ಯುತ್ಗೆ ಬೇಡಿಕೆ ಬಂದಿದೆ. ಎಲ್ಲ ಘಟಕಗಳು ವಿದ್ಯುತ್ ಉತ್ಪಾದಿಸುತ್ತಿವೆ. ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಬಳಸುವ ಬಾಯ್ಲರ್ಗಳನ್ನು ವರ್ಷಕ್ಕೊಮ್ಮೆ ನವೀಕರಣ ಮಾಡುತ್ತೇವೆ. ಏನಾದರೂ ದೋಷಗಳು ಕಂಡುಬಂದರೆ ಬಾಯ್ಲರ್ ಬದಲಾವಣೆ ಮಾಡುತ್ತೇವೆ’ ಎಂದು ಆರ್ಟಿಪಿಎಸ್ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಎಸ್. ಯಲ್ಲಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಸಾಮಾನ್ಯವಾಗಿ ಎಲ್ಲ ವಿದ್ಯುತ್ ಘಟಕಗಳು 200 ದಿನ ತನಕ ವಿದ್ಯುತ್ ಉತ್ಪಾದಿಸುತ್ತವೆ. 5ನೇ ಘಟಕವು 220 ದಿನಗಳಾದರೂ ಯಾವುದೇ ತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ
ಚಂದ್ರಶೇಖರ್ ಎಸ್.ಯಲ್ಲಟ್ಟಿ
ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್
ಸಾಮಾನ್ಯವಾಗಿ ಎಲ್ಲ ವಿದ್ಯುತ್ ಘಟಕಗಳು 200 ದಿನ ತನಕ ವಿದ್ಯುತ್ ಉತ್ಪಾದಿಸುತ್ತವೆ. 5ನೇ ಘಟಕವು 220 ದಿನಗಳಾದರೂ ಯಾವುದೇ ತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ
ಚಂದ್ರಶೇಖರ್ ಎಸ್.ಯಲ್ಲಟ್ಟಿ
ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್
Friends, If you like this post,kindly comment below the post and do share your
Response,
(Thanks for Reading....)
No comments:
Post a Comment