ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಅವರಿಗೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆ ಕಲಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಜಿಲ್ಲೆಯ ಆಯ್ದ ಸರ್ಕಾರಿ ಶಾಲೆಗಳಲ್ಲಿ ನಲಿ–ಕಲಿ ಪಾಠಗಳ ಮೂಲಕ ಈ ಯೋಜನೆಯು ಈಗಾಗಲೇ ಪ್ರಾಯೋಗಿಕವಾಗಿ ಜಾರಿಯಲ್ಲಿದೆ.
ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಅವರಿಗೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆ ಕಲಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಜಿಲ್ಲೆಯ ಆಯ್ದ ಸರ್ಕಾರಿ ಶಾಲೆಗಳಲ್ಲಿ ನಲಿ–ಕಲಿ ಪಾಠಗಳ ಮೂಲಕ ಈ ಯೋಜನೆಯು ಈಗಾಗಲೇ ಪ್ರಾಯೋಗಿಕವಾಗಿ ಜಾರಿಯಲ್ಲಿದೆ.
ರಾಜ್ಯದ ನಾಲ್ಕು ಜಿಲ್ಲೆಗಳ
- ರಾಮನಗರ
- ಮೈಸೂರು,
- ತುಮಕೂರು,
- ದಕ್ಷಿಣ ಕನ್ನಡ
ಜಿಲ್ಲೆಗಳ ಆಯ್ದ ಶಾಲೆಗಳಲ್ಲಿಯೂ ಏಕಕಾಲಕ್ಕೆ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.
ಇದರ ಯಶಸ್ಸು ಆಧರಿಸಿ ಮುಂದಿನ ವರ್ಷದಿಂದ ಎಲ್ಲ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಅನ್ನು ಒಂದು ಭಾಷೆಯನ್ನಾಗಿ ಕಲಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ.
ನಲಿಯುತ್ತಾ ಕಲಿಕೆ:
ಪಠ್ಯವನ್ನು ಸರಳಗೊಳಿಸಿ ಮಕ್ಕಳು ನಲಿಯುತ್ತಾ ಕಲಿಯಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ನಲಿ–ಕಲಿ ಯೋಜನೆ ರೂಪಿಸಿದೆ. ಈಗ ಇದೇ ಮಾದರಿಯಲ್ಲಿ ಇಂಗ್ಲಿಷ್ ಅನ್ನೂ ಕಲಿಸಲಾಗುತ್ತಿದೆ. ಒಂದನೇ ತರಗತಿಯ ಮಕ್ಕಳಿಗೆ ಕನ್ನಡ ವರ್ಣಮಾಲೆಗಳನ್ನು ಚಿತ್ರ, ಪಟಗಳ ಮೂಲಕ ಕಲಿಸುವ ರೀತಿಯಲ್ಲಿಯೇ ಇಂಗ್ಲಿಷ್ ಅಕ್ಷರಗಳನ್ನು ಕಲಿಸಲಾಗುತ್ತದೆ. ನಂತರದಲ್ಲಿ ಸಣ್ಣ ಸಣ್ಣ ಪದಗಳ ಉಚ್ಛಾರ, ಬಳಕೆ ಮೊದಲಾದವುಗಳ ಬಗ್ಗೆ ಹೇಳಿಕೊಡಲಾಗುತ್ತದೆ.
‘ಪ್ರಾರ್ಥಮಿಕ ಹಂತದಲ್ಲಿಯೇ ಇಂಗ್ಲಿಷ್ ಕಲಿಸುವ ನಿರ್ಧಾರಕ್ಕೆ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಉತ್ಸಾಹ
ದಿಂದ ಇಂಗ್ಲಿಷ್ ವರ್ಣಮಾಲೆಯನ್ನು ಅಭ್ಯಸಿಸುತ್ತಿದ್ದಾರೆ. ಅವರ ಕಲಿಕೆಯ ಮಟ್ಟ ಚುರುಕಾಗಿದೆ’ ಎನ್ನುತ್ತಾರೆ ರಾಮನಗರ ತಾಲ್ಲೂಕು ಬಿಆರ್ಸಿ ಸಂಪತ್ಕುಮಾರ್.
ತರಬೇತಿ:
ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ಶಿಕ್ಷಕರಿಗೆಂದೇ ಇಲಾಖೆ ಕಳೆದ ಜನವರಿಯಲ್ಲಿ ವಿಶೇಷ ತರಬೇತಿ ಹಮ್ಮಿಕೊಂಡಿತ್ತು. 10 ದಿನಗಳ ಕಾಲ ನಡೆದ ಈ ಕಾರ್ಯಾಗಾರದಲ್ಲಿ ನಲಿ–ಕಲಿ ಚಟುವಟಿಕೆಗಳ ಮೂಲಕ ಹೇಗೆ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕು ಎನ್ನುವುದನ್ನು ಹೇಳಿಕೊಡಲಾಗಿತ್ತು. ಈಗ ಅದೇ ಶಿಕ್ಷಕರು ಆಯ್ದ ಶಾಲೆಗಳಲ್ಲಿ ಆಂಗ್ಲ ವರ್ಣಮಾಲೆಯ ಪಾಠ ಹೇಳಿ
ಕೊಡುತ್ತಿದ್ದಾರೆ.
‘ಒಂದನೇ ತರಗತಿಯ ಮಕ್ಕಳು ಈಗ ಎಬಿಸಿಡಿ ಬರೆಯುತ್ತಿದ್ದಾರೆ. ಕಂಪ್ಯೂಟರ್ಗಳಲ್ಲಿ ವರ್ಣಮಾಲೆಗಳನ್ನು ಗುರುತಿಸುತ್ತಾರೆ. ಎರಡೆರಡು ಭಾಷೆ ಕಲಿಕೆಯಿಂದ ಅವರಲ್ಲಿ ಯಾವುದೇ ಗೊಂದಲ
ವಾಗಿಲ್ಲ. ಸರ್ಕಾರಿ ಶಾಲೆಯಲ್ಲಿನ ಈ ಬೆಳವಣಿಗೆಯಿಂದಮಕ್ಕಳಪೋಷಕರೂ ಸಂತಸಗೊಂಡಿದ್ದಾರೆ’ ಎನ್ನುತ್ತಾರೆ ಕನಕಪುರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಪಿ. ಯತೀಶ್ಕುಮಾರ್.
ಖಾಸಗಿ ಶಾಲೆಗಳಿಗೆ ಸಡ್ಡು
ಸರ್ಕಾರದ ಈ ನಿರ್ಧಾರವು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಹಕಾರಿಯಾಗಲಿದೆ. ಶಿಕ್ಷಕರು ಮನಸ್ಸಿಟ್ಟು ಮಕ್ಕಳಿಗೆ ಕಲಿಸಿದ್ದೇ ಆದಲ್ಲಿ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯಬಹುದು ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.
ಇಂಗ್ಲಿಷ್ ಮಾಧ್ಯಮದ ಕಾರಣಕ್ಕೆ ಸಾಕಷ್ಟು ಮಂದಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿಯೇ ಇಂಗ್ಲಿಷ್ ಕಲಿಕೆ ಸಾಧ್ಯವಾದರೆ ಹೆಚ್ಚಿನ ವಿದ್ಯಾರ್ಥಿಗಳು ಮತ್ತೆ ಇಂತಹ ಶಾಲೆಗಳಿಗೆ ಮರಳುತ್ತಾರೆ ಎನ್ನುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಆಶಯವಾಗಿದೆ.
ಒಂದನೇ ತರಗತಿಯ ಮಕ್ಕಳು ಆಸಕ್ತಿಯಿಂದ ಇಂಗ್ಲಿಷ್ ಕಲಿಯತೊಡಗಿದ್ದಾರೆ. ಎರಡೆರಡು ಭಾಷೆ ಕಲಿಕೆಯಿಂದ ಅವರಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ ಕೆ.ಪಿ. ಯತೀಶ್ಕುಮಾರ್ ಶಿಕ್ಷಕ, ಬಾಚಳ್ಳಿದೊಡ್ಡಿ ಶಾಲೆ
ಒಂದನೇ ತರಗತಿಯ ಮಕ್ಕಳು ಆಸಕ್ತಿಯಿಂದ ಇಂಗ್ಲಿಷ್ ಕಲಿಯತೊಡಗಿದ್ದಾರೆ. ಎರಡೆರಡು ಭಾಷೆ ಕಲಿಕೆಯಿಂದ ಅವರಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ ಕೆ.ಪಿ. ಯತೀಶ್ಕುಮಾರ್ ಶಿಕ್ಷಕ, ಬಾಚಳ್ಳಿದೊಡ್ಡಿ ಶಾಲೆ
Friends, If you like this post,kindly comment below the post and do share your
Response,
(Thanks for Reading....)
No comments:
Post a Comment