ಸಾವನ್ನು ಮುಟ್ಟಿ ಬಂದ ಮೈಕಲ್ ಶುಮಾಕರ್
‘ಫಾರ್ಮುಲಾ ಒನ್ ರೇಸ್ನಲ್ಲಿ ದೇವರು ಪಾಲ್ಗೊಂಡಿದ್ದರೆ ಮೈಕಲ್ ಶುಮಾಕರ್(ಶೂಮಿ) ರೀತಿ ಕಾರು ಚಲಾಯಿಸುತ್ತಿದ್ದ. ಶೂಮಿ ಅವರ ಆ ವೇಗದ ಶೈಲಿಯನ್ನು ಕಣ್ತುಂಬಿಕೊಳ್ಳುವುದೇ ಪರಮಾನಂದ. ಆತ ರಸ್ತೆ ಮೇಲಿನ ಪೈಲಟ್’ -ಜರ್ಮನಿಯ ಮೈಕಲ್ ಶುಮಾಕರ್ ಫಾರ್ಮುಲಾ ಒನ್ ರೇಸ್ನ ಉತ್ತುಂಗದಲ್ಲಿದ್ದಾಗ ಮೋಟಾರ್ ಸ್ಪೋರ್ಟ್ಸ್ ತಜ್ಞರು ಹೇಳುತ್ತಿದ್ದ ಮಾತಿದು. ಸತತ ಐದು ವರ್ಷ ಚಾಂಪಿಯನ್ ಆಗಿದ್ದ ಅವಧಿಯಲ್ಲಿ ಶುಮಾಕರ್ ಅವರ ಅಮೋಘ ಫಾರ್ಮ್ ಈ ಹೇಳಿಕೆಗೆ ಕಾರಣ.
ವೇಗದ ಚಾಲನೆ ಮೂಲಕ ಗರ್ಜಿಸಿದ್ದ ಶುಮಾಕರ್ ಈಗ ಹಾಸಿಗೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಕಣಕ್ಕಿಳಿಯಬೇಕಾದ ರೇಸಿಂಗ್ ಸ್ಪರ್ಧೆಯ 18 ವರ್ಷಗಳ ಅವಧಿಯಲ್ಲಿ ಯಾವುದೇ ಅಪಾಯ ಮಾಡಿಕೊಳ್ಳದ ಶುಮಾಕರ್, ಮೋಜಿಗಾಗಿ ಸ್ಕೀಯಿಂಗ್ ಆಡಲು ಹೋಗಿ 2013ರ ಡಿಸೆಂಬರ್ನಲ್ಲಿ ಮೆದುಳಿಗೆ ಭಾರಿ ಪೆಟ್ಟು ಮಾಡಿಕೊಂಡಿದ್ದರು. ‘ಬದುಕುವುದೇ ಅಸಾಧ್ಯ’ ಎಂದು ವೈದ್ಯರು ನುಡಿದಿದ್ದರು. ಆಗ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಸೂತಕದ ಛಾಯೆ ಆವರಿಸಿತ್ತು.
ಆತ್ಮೀಯತೆ, ಪ್ರೀತಿ, ಭರವಸೆಯನ್ನು ಕಂಗಳಲ್ಲಿ ತುಂಬಿಕೊಂಡು ಶೂಮಿ ಕಾರು ಚಲಾಯಿಸುವುದನ್ನು ವೀಕ್ಷಿಸುತ್ತಿದ್ದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು. ಆದರೆ, ಪವಾಡ ಎಂಬಂತೆ ಆರು ತಿಂಗಳ ಬಳಿಕ ಶೂಮಿಗೆ ಪ್ರಜ್ಞೆ ಬಂದಿದೆ. ಸಾವನ್ನು ಜಯಿಸಿದ್ದಾರೆ. ಕಣ್ಬಿಟ್ಟು ಸನ್ನೆ ಮಾಡಿದ್ದಾರೆ. ಇಷ್ಟಾಗಿಯೂ 45 ವರ್ಷ ವಯಸ್ಸಿನ ಶೂಮಿ ಸಂಪೂರ್ಣ ಚೇತರಿಸಿಕೊಳ್ಳುವ ಭರವಸೆಯನ್ನು ವೈದ್ಯರು ನೀಡಿಲ್ಲ.
ಅಭಿಮಾನಿಗಳ ಪ್ರೀತಿ, ಕುಟುಂಬದವರ ಪ್ರಯತ್ನ ಹಾಗೂ ಹಣದ ಬಲ ಶುಮಾಕರ್ ಅವರ ಜೀವ ಉಳಿಸಿದೆ.
ಅಭಿಮಾನಿಗಳ ಪ್ರೀತಿ, ಕುಟುಂಬದವರ ಪ್ರಯತ್ನ ಹಾಗೂ ಹಣದ ಬಲ ಶುಮಾಕರ್ ಅವರ ಜೀವ ಉಳಿಸಿದೆ.
ಶೂಮಿ ಚೇತರಿಸಿಕೊಳ್ಳಲೆಂದು ವಿಶ್ವದ ಮೂಲೆಮೂಲೆಗಳಲ್ಲಿ ಅಸಂಖ್ಯಾತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅವರಿಗೀಗ ಪ್ರಜ್ಞೆ ಬಂದಿರುವುದು ಆ ಅಭಿಮಾನಿಗಳಲ್ಲಿ ಸ್ವಲ್ಪ ಸಮಾಧಾನ ಮೂಡಿಸಿದೆ. ರೂ.100 ಕೋಟಿ ಖರ್ಚು ಮಾಡಿ ತಮ್ಮ ಮನೆಯಲ್ಲಿಯೇ ಆಸ್ಪತ್ರೆ ನಿರ್ಮಿಸಿರುವ ಪತ್ನಿ ಕೊರಿನಾ, ಪತಿಯನ್ನು ಉಳಿಸಿಕೊಳ್ಳಲು ಸರ್ವಪ್ರಯತ್ನ ನಡೆಸಿದ್ದಾರೆ.
ಫಾರ್ಮುಲಾ ಒನ್ ದಂತಕತೆ: ಫಾರ್ಮುಲಾ ಒನ್ ರೇಸ್ನ ಅನರ್ಘ್ಯ ರತ್ನ ಶುಮಾಕರ್. ಹಣಕ್ಕಾಗಿ ಅವರು ಕ್ರೀಡಾ ಜಗತ್ತಿನೊಳಗೆ ಇಳಿಯಲಿಲ್ಲ. ಬದಲಾಗಿ ರೇಸ್ ಮೇಲೆ ಅವರಿಗೆ ಗಾಢ ಪ್ರೀತಿ. ಪ್ರತಿ ಸಲ ಗೆದ್ದಾಗಲೂ ಮತ್ತೆ ಮತ್ತೆ ಗೆಲ್ಲುವ ಛಲ, ಚಾಂಪಿಯನ್ ಆಗಬೇಕೆಂಬ ತುಡಿತ ಅವರದ್ದು.
ಭಾರತದ ಕ್ರಿಕೆಟ್ಗೆ ಸಚಿನ್ ತೆಂಡೂಲ್ಕರ್ ಇದ್ದಂತೆ ವಿಶ್ವ ಮೋಟಾರ್ ಸ್ಪೋರ್ಟ್ಸ್ನಲ್ಲಿ ಶುಮಾಕರ್ ಬಹುದೊಡ್ಡ ಹೆಸರು. ಅದೆಷ್ಟೊ ಯುವಕರ ಪಾಲಿಗೆ ಸ್ಫೂರ್ತಿಯ ಚಿಲುಮೆ. ತೆಂಡೂಲ್ಕರ್ ಅವರಿಗಿಂತ ನೂರು ಪಟ್ಟು ಅಧಿಕ ಅಭಿಮಾನಿಗಳನ್ನು ಹೊಂದಿರುವ ಹಾಗೂ ಅವರಿಗಿಂತ ನೂರು ಪಟ್ಟು ಅಧಿಕ ಹಣ ಸಂಪಾದಿಸಿರುವ ಶುಮಾಕರ್ ಸೃಷ್ಟಿಸಿದ್ದ ಕ್ರೇಜ್ ಅದ್ಭುತ. ಪ್ರೀತಿಯಿಂದ ಅವರನ್ನು ‘ಶೂಮಿ’ ಎನ್ನುತ್ತಾರೆ. ಅವರಿಗೆ 14 ಹಾಗೂ 16ರ ಹರೆಯದ ಗಂಡು ಮಕ್ಕಳು ಇದ್ದಾರೆ.
ಮೈಕಲ್ ಸುಮಾರು 10 ವರ್ಷ ಫಾರ್ಮುಲಾ ಒನ್ ರೇಸಿಂಗ್ನಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದರು. 1991ರಲ್ಲಿ ಅವರು ‘ಟೀಮ್ ಜೋರ್ಡಾನ್’ ಪರ ಬೆಲ್ಜಿಯಂ ಗ್ರ್ಯಾನ್ ಪ್ರಿನಲ್ಲಿ ಪದಾರ್ಪಣೆ ಮಾಡಿದ್ದರು. ಜೋರ್ಡಾನ್ ಚಾಲಕ ಬರ್ಟ್ರಾಂಡ್ ಗಚೋಟ್ ಜೈಲು ಸೇರಿದ್ದರಿಂದ ಶೂಮಿಗೆ ಅವಕಾಶ ಲಭಿಸಿತ್ತು. ಅವರು ಒಟ್ಟು 91 ರೇಸ್ ಜಯಿಸಿದ್ದಾರೆ. 1994, 1995, 2000, 2001, 2002, 2003, 2004ರ ಎಫ್-1 ಋತುವಿನಲ್ಲಿ ಚಾಂಪಿಯನ್ ಆಗಿದ್ದರು. ಅದು ವಿಶ್ವದಾಖಲೆ ಕೂಡ.
ಫೆರಾರಿ ತಂಡ ಪ್ರತಿನಿಧಿಸುತ್ತಿದ್ದ ಶುಮಾಕರ್ 2006ರಲ್ಲಿಯೇ ಫಾರ್ಮುಲಾ ಒನ್ ರೇಸ್ಗೆ ವಿದಾಯ ಹೇಳಿದ್ದರು. ಆದರೆ ರೇಸ್ ಮೇಲಿನ ಪ್ರೀತಿ ಮತ್ತೆ ಅವರನ್ನು ಟ್ರ್ಯಾಕ್ಗೆ ಕರೆತಂದಿತು. ಏಳು ಬಾರಿ ಚಾಂಪಿಯನ್ ಆಗಿ ವಿಶ್ವದಾಖಲೆ ಹೊಂದಿರುವ ಅವರಿಗೆ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಬೇಕೆಂಬ ಛಲವಿತ್ತು. 2010ರಲ್ಲಿ ಮತ್ತೆ ಎಫ್-1ನಲ್ಲಿ ಸ್ಪರ್ಧಿಸಿದರು. ಆದರೆ ಹಿಂದಿನಷ್ಟು ಯಶಸ್ಸು ಒಲಿಯಲಿಲ್ಲ. ಮರ್ಸಿಡಿಸ್ ತಂಡ ಪ್ರತಿನಿಧಿಸಿದ್ದ ಅವರು ಪ್ರಶಸ್ತಿಯ ಸನಿಹ ಕೂಡ ಬರಲಿಲ್ಲ. ಫರ್ನಾಂಡೊ ಅಲೊನ್ಸೊ, ಸೆಬಾಸ್ಟಿಯನ್ ವೆಟೆಲ್, ಲೂಯಿಸ್ ಹ್ಯಾಮಿಲ್ಟನ್ ಅವರಂಥ ಯುವ ಚಾಲಕರ ಪಾರಮ್ಯ ಶೂಮಿಗೆ ಅವಕಾಶ ನೀಡಲಿಲ್ಲ. 2012ರಲ್ಲಿ ಅವರು ಮತ್ತೆ ಎಫ್-1ಗೆ ವಿದಾಯ ಹೇಳಿದ್ದರು.
ಅಂದಿನ ಕಾಲಕ್ಕೆ ಕ್ರೀಡಾ ಜಗತ್ತಿನಲ್ಲಿ ಗಾಲ್ಫರ್ ಟೈಗರ್ ವುಡ್ಸ್ ನಂತರ ಅತಿ ಹೆಚ್ಚು ಹಣ ಸಂಪಾದಿಸಿದ್ದು ಶುಮಾಕರ್. 2004ರ ಋತುವಿನಲ್ಲಿ ರೂ. 360 ಕೋಟಿ ಸಂಭಾವನೆ ಪಡೆದಿದ್ದರು. ಜಾಹೀರಾತಿನಿಂದಲೇ ಅಧಿಕ ಹಣ ಗಳಿಸಿದ್ದರು. ಅವರ ಒಟ್ಟಾರೆ ಸಂಪಾದನೆ ಐದು ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಜಿನಿವಾದಲ್ಲಿ ರೂ. 250 ಕೋಟಿ ಮೊತ್ತದ ಫಾರ್ಮ್ಹೌಸ್ ಹಾಗೂ ರೂ. 500 ಕೋಟಿ ಮೊತ್ತದ ಐಷಾರಾಮಿ ಬಂಗಲೆ ಹೊಂದಿದ್ದಾರೆ.
ಶುಮಾಕರ್ ಖಡಕ್ ಮಾತುಗಾರ. ‘ಅವಕಾಶ ಸಿಗುವವರು ಅದೃಷ್ಟವಂತರು; ಅವಕಾಶ ಸೃಷ್ಟಿಸಿಕೊಳ್ಳುವವರು ಪ್ರತಿಭಾವಂತರು’ ಎಂದು ಪದೇಪದೇ ಹೇಳುತ್ತಿರುತ್ತಾರೆ. ಅವರು ಸದ್ಯ ನೆಲೆಸಿರುವುದು ಸ್ವಿಟ್ಜರ್ಲೆಂಡ್ನಲ್ಲಿ. ರೇಸಿಂಗ್ ಜೀವನ ಆರಂಭಿಸಿದಾಗಿನಿಂದ ಅವರಿಗೆ ಸ್ಕೀಯಿಂಗ್ ಮೇಲೆ ಅಪಾರ ಪ್ರೀತಿ. ಅದಕ್ಕಾಗಿ ಫ್ರಾನ್ಸ್ನ ಮೆರಿಬಲ್ನಲ್ಲಿ ರೆಸಾರ್ಟ್ ಖರೀದಿಸಿ ಅದರಲ್ಲಿಯೇ ಸ್ಕೀಯಿಂಗ್ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಿಮದ ಮೇಲೆ ವೇಗವಾಗಿ ಚಲಿಸುವ ಸಾಹಸ ಕ್ರೀಡೆ ಸ್ಕೀಯಿಂಗ್. ಸ್ಕೀಯಿಂಗ್ ಆಡಲು ಹೋಗಿ ನಿಯಂತ್ರಣ ತಪ್ಪಿ ಬಿದ್ದಾಗ ಅವರ ತಲೆ ಕಲ್ಲು ಬಂಡೆಗೆ ಅಪ್ಪಳಿಸಿತ್ತು.
ಕ್ರಿಕೆಟ್ ದಿಗ್ಗಜ ಸಚಿನ್ ಜೊತೆ ಶುಮಾಕರ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶುಮಾಕರ್ ಅವರ ರೇಸ್ಗಳನ್ನು ವೀಕ್ಷಿಸಲು ಸಚಿನ್ ಹೋಗುತ್ತಿದ್ದರು. ಅವರು ತೆಂಡೂಲ್ಕರ್ಗೆ ಒಂದು ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಭಾರತದ ವೇಗದ ಚಾಲಕ ಎನಿಸಿರುವ ನಾರಾಯಣ್ ಕಾರ್ತಿಕೇಯನ್ ಕೂಡ ಶೂಮಿ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. 2011ರಲ್ಲಿ ಭಾರತದಲ್ಲಿ ನಡೆದ ಎಫ್-1 ರೇಸ್ನಲ್ಲಿ ಶೂಮಿ ಪಾಲ್ಗೊಂಡಿದ್ದರು. 2004ರಲ್ಲಿ ಸಂಭವಿಸಿದ ಸುನಾಮಿ ದುರಂತದಲ್ಲಿ ಸಂತ್ರಸ್ತರಾದವರ ನೆರವಿಗೆ ರೂ. 50 ಕೋಟಿ ಹಣ ನೀಡಿದ್ದರು. ಅದೇನೇ ಇರಲಿ, ಚಾಂಪಿಯನ್ ಶೂಮಿ ಸಂಪೂರ್ಣ ಚೇತರಿಸಿಕೊಳ್ಳುವ ಭರವಸೆಯಲ್ಲಿ ಕ್ರೀಡಾ ಜಗತ್ತಿದೆ.
›
›
ಸುನ್ನಿ– ಶಿಯಾ ದಳ್ಳುರಿ: ಇರಾಕ್ ಏಕತೆಗೆ ಆತಂಕ
ಮಧ್ಯಪ್ರಾಚ್ಯದ ಇರಾಕ್ನಲ್ಲಿ ಮುಸ್ಲಿಂ ಒಳಪಂಗಡಗಳ ಜನಾಂಗೀಯ ಕಲಹ ತಾರಕಕ್ಕೆ ಏರಿದೆ. ಆಡಳಿತ ಚುಕ್ಕಾಣಿ ಕೇಂದ್ರೀಕೃತವಾಗಿರುವ ಬಹುಸಂಖ್ಯಾತ ಶಿಯಾ ಮತ್ತು ಅಲ್ಪಸಂಖ್ಯಾತರಾದ ಸುನ್ನಿ ಸಮುದಾಯಗಳ ಈ ಹಗೆತನದಿಂದ ಇರಾಕ್ ನೆಲ ಅಕ್ಷರಶಃ ರಕ್ತಸಿಕ್ತವಾಗಿದೆ. ಜನಾಂಗೀಯ ದ್ವೇಷದ ದಳ್ಳುರಿಯು ಈಗ ರಾಜಧಾನಿ ಬಾಗ್ದಾದ್ನ ಸನಿಹಕ್ಕೆ ಬಂದು ನಿಂತಿದೆ.
ಸುನ್ನಿ ಬಂಡುಕೋರರು ಉತ್ತರ ಇರಾಕ್ನಲ್ಲಿ ಕಳೆದ ವಾರ ಭೀಕರ ಹಿಂಸಾಚಾರ ನಡೆಸಿದ್ದಾರೆ. ಇದಕ್ಕೆ ಇರಾಕ್ ಯೋಧರು ಮತ್ತು ಸರ್ಕಾರಿ ನೌಕರರು ಬಲಿಯಾಗಿದ್ದಾರೆ. ಶಿಯಾಗಳ ಧಾರ್ಮಿಕ ಕೇಂದ್ರಗಳನ್ನು ನಾಮಾವಶೇಷ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ.
ಈ ಹಿಂಸಾಚಾರವನ್ನು ಮೌನವಾಗಿ ಎದುರಿಸುತ್ತಿದ್ದ ಶಿಯಾಗಳು, ರಕ್ತಪಾತ ಕೊನೆಗಾಣಿಸುವಂತೆ ತಮ್ಮ ಧಾರ್ಮಿಕ ಮುಖಂಡರ ಮೊರೆ ಹೋಗಿದ್ದರು. ಆದರೆ, ಸಮುದಾಯದವರ ಶವ ಒಂದರ ಹಿಂದೆ ಒಂದರಂತೆ ಬೀಳುತ್ತಿದ್ದರಿಂದ ಕಳೆದ ಮಂಗಳವಾರ ಶಿಯಾಗಳ ಸಹನೆಯ ಕಟ್ಟೆ ಒಡೆಯಿತು.
ತತ್ಪಪರಿಣಾಮ ಮುಸ್ಲಿಂ ಸಮುದಾಯದ ಈ ಎರಡೂ ಪಂಗಡಗಳ ನಡುವಿನ ಗಲಭೆ ತೀವ್ರಗೊಂಡಿದೆ. ಇದಕ್ಕೆ ಸಾಕ್ಷಿಯಾಗಿ ರಾಜಧಾನಿ ಬಾಗ್ದಾದ್ನಿಂದ 40 ಮೈಲು ದೂರದಲ್ಲಿರುವ ಬಕುಬಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ 44 ಸುನ್ನಿ ಕೈದಿಗಳ ಶವಗಳು ಪತ್ತೆಯಾಗಿವೆ.
ಸಿರಿಯಾಕ್ಕೆ ಹೊಂದಿಕೊಂಡಿರುವ ಇರಾಕ್ ಗಡಿಯಲ್ಲಿ ಅಕ್ರಮವಾಗಿ ಒಳನುಸುಳುತ್ತಿದ್ದ ಶಂಕೆ ಮೇಲೆ ಕೆಲವರನ್ನು ಹಿಡಿದು ಬಕುಬಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾಗ, ಸುನ್ನಿ ಬಂಡುಕೋರರ ಗುಂಪು ಹಠಾತ್ ದಾಳಿ ನಡೆಸಿತು. ಕ್ಷಣ ಮಾತ್ರದಲ್ಲಿ ಅಲ್ಲಿನ ಸನ್ನಿವೇಶ ರಣರಂಗವಾಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸತತ ಮೂರು ತಾಸುಗಳ ಗುಂಡಿನ ಚಕಮಕಿ ನಂತರ ಸುನ್ನಿ ಬಂಡುಕೋರರನ್ನು ಪೊಲೀಸರು ಹಿಮ್ಮೆಟ್ಟಿಸಿದರು. ಈ ಕಾಳಗದಲ್ಲಿ ಜೈಲಿನಲ್ಲಿದ್ದವರೂ ಹತರಾಗಿದ್ದಾರೆ’ ಎಂದು ಬಕುಬಾ ಪೊಲೀಸ್ ಕಮಾಂಡರ್ ಬ್ರಿಗೇಡಿಯರ್ ಜನರಲ್ ಜಮೀಲ್ ಕಮಾಲ್ ಅಲ್– ಶಿಮ್ಮರಿ ಹೇಳಿದ್ದಾರೆ.
ಜೈಲಿನಲ್ಲಿದ್ದವರು ಸಾವನ್ನಪ್ಪಲು ಬಂಡುಕೋರರೇ ಕಾರಣ. ಗ್ರೆನೇಡ್ಗಳ ದಾಳಿಯಿಂದ ಕೈದಿಗಳು ಸತ್ತಿದ್ದಾರೆ ಎಂದು ಇರಾಕ್ ಸೇನಾ ವಕ್ತಾರ ಜನರಲ್ ಖಾಸಿಂ ಅಟ್ಟಾ ಅವರೂ ತಿಳಿಸಿದ್ದಾರೆ.
ಆದರೆ, ಕೈದಿಗಳ ಮೇಲೆ ಸೋಮವಾರ ರಾತ್ರಿ ಹತ್ತಿರದಿಂದಲೇ ಗುಂಡುಹಾರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಇದಕ್ಕೆ ಇಂಬು ನೀಡುವಂತೆ ‘ಬಂಧಿತರನ್ನು ಪೊಲೀಸರೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ’ ಎಂದು ಸಿರಿಯಾ, ಸಾಮಾಜಿಕ ಜಾಲತಾಣ ‘ಟ್ವಿಟ್ಟರ್’ನಲ್ಲಿ ಹೇಳಿದೆ.
ಮರುದಿನ (ಮಂಗಳವಾರ) ಬೆಳಿಗ್ಗೆ ಬಾಗ್ದಾದ್ನ ಪೂರ್ವಕ್ಕೆ ಇರುವ ಬೆಂಕು ಪಟ್ಟಣದಲ್ಲಿ ನಾಲ್ವರು ಯುವಕರ ದೇಹಗಳು ಪತ್ತೆಯಾಗಿವೆ. ಗುಂಡೇಟಿನಿಂದ ಅವರ ದೇಹಗಳು ತೂತು ಬಿದ್ದಿವೆ. ಆದರೆ, ಮೃತರ ಗುರುತು ಪತ್ತೆಯಾಗಿಲ್ಲವಾದರೂ ಹತರಾದವರು ಸುನ್ನಿಗಳೇ ಇರಬೇಕು ಎಂದು ಶಂಕಿಸಲಾಗಿದೆ. ಈ ಪ್ರದೇಶದಲ್ಲಿ ಸುನ್ನಿಗಳು ಗಣನೀಯ ಸಂಖ್ಯೆಯಲ್ಲಿ ಇದ್ದರೂ ಶಿಯಾ ಬಂಡುಕೋರರು ಪ್ರಾಬಲ್ಯ ಇದೆ. ಈವರೆಗೂ ನಾಲ್ವರ ಹತ್ಯೆ ಬಗ್ಗೆ ಯಾವ ಗುಂಪೂ ಹೊಣೆ ಹೊತ್ತಿಲ್ಲ ಎಂದು ಆಂತರಿಕ ಭದ್ರತಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೆ ಪ್ರತೀಕಾರವಾಗಿ ಸುನ್ನಿ ಬಂಡುಕೋರರು ಸಾದರ್ ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸಿದ್ದಾರೆ. ಇದರಿಂದ ಕನಿಷ್ಠ 14 ಮಂದಿ ಶಿಯಾಗಳು ಸಾವನ್ನಪ್ಪಿದ್ದಾರೆ.
ಮಂಗಳವಾರ ನಡೆದ ಕದನದಲ್ಲಿ ಬಂಡುಕೋರರು ವಶಕ್ಕೆ ತೆಗೆದುಕೊಂಡಿದ್ದ ಕೆಲವು ಪ್ರದೇಶಗಳನ್ನು ಮರುವಶ ಮಾಡಿಕೊಳ್ಳಲು ಸೇನೆ ಅತ್ಯುಗ್ರವಾಗಿ ದಾಳಿ ನಡೆಸಿತ್ತು. ಬಂಡುಕೋರರು ವಶಕ್ಕೆ ತೆಗೆದುಕೊಂಡಿರುವ ಪ್ರದೇಶಗಳನ್ನು ಇರಾಕ್ ಸರ್ಕಾರ ಈವರೆಗೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಸುನ್ನಿ ಬಂಡುಕೋರರಿಗೆ ಸೌದಿ ಅರೇಬಿಯಾದಿಂದ ಹಣಕಾಸು ನೆರವು ದೊರೆಯುತ್ತಿದೆ ಎಂದು ಗಂಭೀರವಾಗಿ ಆಪಾದಿಸಿದೆ.
ಬಂಡುಕೋರರನ್ನು ಹಿಂಸಾಚಾರ ತ್ಯಜಿಸುವಂತೆ ಮನವೊಲಿಸಿ ದೇಶದಲ್ಲಿ ಶಾಂತಿ ನೆಲೆಇಸುವಂತೆ ಮಾಡಬೇಕಿದ್ದ ಇರಾಕ್ ಪ್ರಧಾನಿ ನೂರಿ ಕಮಾಲ್ ಅಲ್ – ಮಲಿಕಿ ಅವರು, ದೇಶ ಮತ್ತು ಸಮುದಾಯದ ರಕ್ಷಣೆಗೆ ನಿಲ್ಲುವಂತೆ ಶಿಯಾಗಳಿಗೆ ಉತ್ತೇಜನ ನೀಡುವ ಮಾತುಗಳನ್ನು ಪದೇ ಪದೇ ಆಡುತ್ತಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.
ಪ್ರಧಾನಿ ಮಲಿಕಿ ಅವರು ಸುನ್ನಿ ಬಂಡುಕೋರರ ಉಪಟಳ ಮತ್ತು ಅವರು ಸಾಧಿಸಿರುವ ಮೇಲುಗೈ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು, ತಮ್ಮ ನಾಯಕತ್ವದ ವೈಫಲ್ಯದ ಬಗ್ಗೆ ಏನೂ ಹೇಳುತ್ತಿಲ್ಲ. ಮಲಿಕಿ ಅವರ ಈ ಧೋರಣೆ ಅಮೆರಿಕವನ್ನು ಕೆರಳಿಸಿದೆ. ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರರು ಮಲಿಕಿ ಅವರ ಈ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.
ಈ ಮಧ್ಯೆ, ಭುಗಿಲೆದ್ದಿರುವ ಜನಾಂಗೀಯ ಕಲಹವನ್ನು ನಿವಾರಿಸಲು ತಮ್ಮ ದೇಶದ ಸೇನೆ, ಮಧ್ಯಪ್ರವೇಶ ಮಾಡುವುದಿಲ್ಲ ಎಂಬ ಅಮೆರಿಕ ನಿಲುವಿನಿಂದ ಇರಾಕ್ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
‘ದೇಶದ ಅಶಾಂತ ಸ್ಥಿತಿಯನ್ನು ದೂರ ಮಾಡಲು ಶೀಘ್ರ ಕ್ರಮಕೈಗೊಳ್ಳದಿದ್ದರೆ, 2006ರಲ್ಲಿ ಉಂಟಾಗಿದ್ದ ಸನ್ನಿವೇಶವೇ ಮರುಕಳಿಸುತ್ತದೆ’ ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಮಸ್ರೂರ್ ಅಸ್ವಾದ್ ಎಚ್ಚರಿಕೆ ನೀಡಿದ್ದಾರೆ.
‘ಅಲ್ಪಸಂಖ್ಯಾತರಾದ ಸುನ್ನಿಗಳು ಉಗ್ರಸ್ವರೂಪದ ಹಿಂಸಾಚಾರಕ್ಕೆ ಇಳಿದಿದ್ದಾರೆ. ಶಿಯಾಗಳನ್ನು ನಿರ್ನಾಮ ಮಾಡಲು ಪಣತೊಟ್ಟವರಂತೆ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಶಿಯಾ ಸಮುದಾಯದವರೂ ಶಸ್ತ್ರ ಸಜ್ಜಿತರಾಗಿ ಸುನ್ನಿಗಳ ಮೇಲೆ ಮುಗಿಬೀಳುತ್ತಿದ್ದಾರೆ. ಇದು ದೇಶದ ಏಕತೆಗೆ ಭಂಗ ಉಂಟುಮಾಡುತ್ತದೆ’ ಎಂಬ ಅಸ್ವಾದ್ ಅವರ ಆತಂಕ ಸರಿಯಾಗಿಯೇ ಇದೆ.
ಇರಾಕ್ನಲ್ಲಿ ಈಗ ನಡೆಯುತ್ತಿರುವ ರಕ್ತಪಾತವು 2006ರ ಸಂಭವಿಸಿದ ಗಲಭೆಯನ್ನು ನೆನಪಿಸುತ್ತದೆ. ಮೂರು ವರ್ಷಗಳ ಕಾಲ ಮುಂದುವರಿದ ಈ ಜನಾಂಗೀಯ ಕಲಹದಿಂದ ದೇಶ ತೀವ್ರವಾಗಿ ತತ್ತರಿಸಿತ್ತು. ಅಮೆರಿಕ ಸೇನೆಯ ಒತ್ತಾಸೆಯಿಂದಾಗಿ ಇರಾಕ್ ಬುಡಕಟ್ಟು ನಾಯಕರು ಸುನ್ನಿ ಬಂಡುಕೋರರ ವಿರುದ್ಧ ತಿರುಗಿಬಿದ್ದ ಮೇಲಷ್ಟೆ ಇರಾಕ್ ಪರಿಸ್ಥಿತಿ (2008) ಸುಧಾರಿಸಿತು.
ಬಾಗ್ದಾದ್ ವಾಸಿಗಳ ಆತಂಕ: ಬಕುಬಾದ ನಡೆದ ಘಟನೆಯಿಂದ ಬಂಡುಕೋರರು ಆಕ್ರೋಶಗೊಂಡು ರಾಜಧಾನಿ ಬಾಗ್ದಾದ್ನತ್ತ ಶಸ್ತ್ರ ಸಜ್ಜಿತರಾಗಿ ನುಗ್ಗತೊಡಗಿದ್ದಾರೆ. 230ಕ್ಕೂ ಹೆಚ್ಚು ಜನರಿರುವ ದೊಡ್ಡ ಗುಂಪು ಮೊಸಲ್ ನಗರವನ್ನು ವಶಕ್ಕೆ ತೆಗೆದುಕೊಂಡಿದೆ. ಈ ಬಂಡುಕೋರರು ಟೈಗ್ರಿಸ್ ನದಿ ಕಣಿವೆಯ ಮೂಲದವರಾಗಿದ್ದಾರೆ.
ಬಂಡುಕೋರರಲ್ಲಿ ಕೇವಲ ಇರಾಕ್ ಮತ್ತು ಸಿರಿಯಾದ ಮೂಲಭೂತವಾದಿಗಳು ಮಾತ್ರವಿಲ್ಲ. ‘1920ರ ರೆವಲ್ಯೂಷನ್ ಬ್ರಿಗೇಡ್’ ಮತ್ತು ‘ಇಸ್ಲಾಮಿಕ್ ಆರ್ಮಿ’ ಗುಂಪಿನ ಜನರೂ ಇದ್ದಾರೆ ಎಂದು ಇರಾಕ್ ಗುಪ್ತಚರ ದಳದ ಮೂಲಗಳು ಶಂಕಿಸಿವೆ.
ಈ ಎರಡು ಗುಂಪುಗಳು ದಿಯಾಲ್ ಪ್ರಾಂತ್ಯದಲ್ಲಿ ಬಹುಕಾಲದಿಂದ ಬೀಡುಬಿಟ್ಟಿವೆ. ಹಿಂದೆ ಅನೇಕ ಸಲ ನಡೆದ ಜನಾಂಗೀಯ ಕದನದಲ್ಲಿ ಈ ಗುಂಪುಗಳ ಅತ್ಯುಗ್ರವಾಗಿ ದಾಳಿ ನಡೆಸಿದ್ದವು ಎಂದೂ ಮೂಲಗಳು ಹೇಳಿವೆ.
2003ರಲ್ಲಿ ಇರಾಕ್ ಸೇನೆಯನ್ನು ಅಮೆರಿಕ ಬರ್ಕಾಸ್ತುಗೊಳಿಸಿದ್ದರಿಂದ ಸೇನೆಯಿಂದ ಹೊರಬಿದ್ದ ನಿರುದ್ಯೋಗಿ ಅಧಿಕಾರಿಗಳು ‘1920ರ ರೆವಲ್ಯೂಷನ್ ಬ್ರಿಗೇಡ್’ ಗುಂಪನ್ನು ಹುಟ್ಟಿಹಾಕಿದರು.
ಬಂಡುಕೋರರ ಗುಂಪು ಬಾಗ್ದಾದ್ ಸನಿಹಕ್ಕೆ ಬಂದಿರುವುದರಿಂದ ಈ ನಗರದ ನೆರೆಯ ಪಟ್ಟಣಗಳ ನಿವಾಸಿಗಳು ಭಯ ಭೀತರಾಗಿದ್ದಾರೆ.
‘ರಸ್ತೆಯಲ್ಲಿ ಶಸ್ತ್ರಸಜ್ಜಿತರ ಸಂಖ್ಯೆ ಹೆಚ್ಚಿದೆ. ಅವರು ಯಾರು ಎಂಬುದೇ ತಿಳಿಯುತ್ತಿಲ್ಲ’ ಎಂದು ದಕ್ಷಿಣ ಬಾಗ್ದಾದ್ ಸೆರಗಿಗೆನಲ್ಲಿರುವ ಅಲ್– ಅದಿಲ್ ಪಟ್ಟಣದಲ್ಲಿ ಕಬ್ಬಿಣ ಸಾಮಗ್ರಿಗಳ ಚಿಕ್ಕ ಅಂಗಡಿ ಇರಿಸಿಕೊಂಡಿರುವ ಅಹ್ಮದ್ ಹೇಳಿದ್ದಾರೆ. ಈ ಪಟ್ಟಣದಲ್ಲಿ ಸುನ್ನಿ ಮತ್ತು ಶಿಯಾಗಳು ಪ್ರತ್ಯೇಕ ಬೀದಿಗಳಲ್ಲಿ ವಾಸಿಸುತ್ತಾರೆ.
‘ರಸ್ತೆಯಲ್ಲಿ ಶಸ್ತ್ರಸಜ್ಜಿತರ ಸಂಖ್ಯೆ ಹೆಚ್ಚಿದೆ. ಅವರು ಯಾರು ಎಂಬುದೇ ತಿಳಿಯುತ್ತಿಲ್ಲ’ ಎಂದು ದಕ್ಷಿಣ ಬಾಗ್ದಾದ್ ಸೆರಗಿಗೆನಲ್ಲಿರುವ ಅಲ್– ಅದಿಲ್ ಪಟ್ಟಣದಲ್ಲಿ ಕಬ್ಬಿಣ ಸಾಮಗ್ರಿಗಳ ಚಿಕ್ಕ ಅಂಗಡಿ ಇರಿಸಿಕೊಂಡಿರುವ ಅಹ್ಮದ್ ಹೇಳಿದ್ದಾರೆ. ಈ ಪಟ್ಟಣದಲ್ಲಿ ಸುನ್ನಿ ಮತ್ತು ಶಿಯಾಗಳು ಪ್ರತ್ಯೇಕ ಬೀದಿಗಳಲ್ಲಿ ವಾಸಿಸುತ್ತಾರೆ.
‘ಜನರು ಭಯಭೀತರಾಗಿದ್ದಾರೆ. ಬಂಡುಕೋರರು ಯಾರು, ಭದ್ರತಾ ಪಡೆಯವರು ಯಾರು ಎಂಬುದೇ ತಿಳಿಯುತ್ತಿಲ್ಲ. ಹಿಂದಿನ ಕಲಹಗಳಿಗಿಂತ ಈ ಸಾರಿ ಜೋರಾಗಿಯೇ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ’ ಎಂದು ಅವರು ವ್ಯಾಕುಲರಾಗಿದ್ದಾರೆ.
‘ನಾನಂತೂ ಕುಟುಂಬದೊಂದಿಗೆ ಟರ್ಕಿಗೆ ತೆರಳಲು ಸಿದ್ಧನಾಗಿದ್ದಾನೆ. ಆದರೆ, ವಿಮಾನದಲ್ಲಿ ಸೀಟುಗಳು ಲಭ್ಯವಿಲ್ಲ. ವಾರಗಳ ಮುಂಚೆಯೇ ಮುಂಗಡ ಆಸನ ಕಾಯ್ದಿರಿಸಲಾಗಿದೆ. ನಮಗೆ ಯಾವತ್ತು ಸೀಟು ದೊರಕಬಹುದು ಎಂಬುದನ್ನು ಟ್ರಾವಲ್ ಏಜೆಂಟ್ ಸರಿಯಾಗಿ ಹೇಳುತ್ತಿಲ್ಲ’ ಎಂದು ಐವರು ಮಕ್ಕಳು ಮತ್ತು ಪತ್ನಿ ಸಹಿತ ಊರು ತೊರೆಯಲು ಸಿದ್ಧವಾಗಿರುವ ಅಹ್ಮದ್ ಆತಂಕದಿಂದ ಚಡಪಡಿಸುತ್ತಿದ್ದಾರೆ.
‘ಇರಾಕ್ ಮತ್ತು ಸಿರಿಯಾ ಮೂಲಭೂತವಾದಿಗಳ ಕೈ ಮೇಲಾದರೆ ಸುನ್ನಿಗಳ ಮೇಲೂ ಅದರ ಪರಿಣಾಮ ಉಂಟಾಗುತ್ತದೆ’ ಎಂಬುದು ಗೈಲಾನಿ ಅವರ ವಿಶೇಷ
ಥಾಯ್ಲೆಂಡ್: ಈಗ ಆತಂಕ ತುಂಬಿದ ಮನೆ
ನೆ ರೆ ರಾಷ್ಟ್ರಗಳ ನಿರಾಶ್ರಿತರಿಗೆ ಆಸರೆ ನೀಡುತ್ತ ಬಂದ ಆಗ್ನೇಯ ಏಷ್ಯಾದ ದೇಶ ಥಾಯ್ಲೆಂಡ್. ಆದರೆ ಈಗ ಈ ಉದಾರವಾದಿ ದೇಶದ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದೆ. ಅಲ್ಲಿನ ಆಂತರಿಕ ದಂಗೆ, ಗಲಭೆ, ಸೇನಾಡಳಿತದಿಂದಾಗಿ ಆ ದೇಶದವರೇ ಬೇರೆ ಕಡೆ ನೆಲೆಯನ್ನು ಅರಸುವಂತಾಗಿದೆ. ಒಟ್ಟಿನಲ್ಲಿ ದೇಶ ಆತಂಕ ತುಂಬಿದ ಮನೆಯಾಗಿದೆ.
‘ಸೇನೆಗೆ ಹೆದರಿ ಕೆಲ ವಾರಗಳಿಂದ ಅನೇಕ ರಾಜಕಾರಣಿಗಳು, ಬುದ್ಧಿಜೀವಿಗಳು, ಪ್ರಾಧ್ಯಾಪಕರು ಥಾಯ್ಲೆಂಡ್ ತೊರೆದಿದ್ದಾರೆ. ಅವರು ಸದ್ಯ ವಾಪಸಾಗುವ ಸಾಧ್ಯತೆಗಳೂ ಕಡಿಮೆಯೇ’ ಎಂದು ದೇಶ ತೊರೆದವರ ಸಮುದಾಯದ ಮುಖಂಡ ಜಾಕ್ರಪೋಬ್ ಪೆಂಕೈರ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗ ನೆರೆ ರಾಷ್ಟ್ರಗಳನ್ನು ಇಕ್ಕಟ್ಟಿಗೆ ಸಿಲುಕಿಸದ ರೀತಿಯಲ್ಲಿ ಅವರ ನೆರವು ಪಡೆದು, ಥಾಯ್ ಸೇನೆಯ ಪಿತೂರಿಯನ್ನು ಹತ್ತಿಕ್ಕುವ ಯೋಜನೆಯೊಂದನ್ನು ರೂಪಿಸುವ ಆಶಯ ಪೆಂಕೈರ್ ಅವರದು. ಅವರು ಕಾಂಬೋಡಿಯಾದಲ್ಲಿದ್ದುಕೊಂಡು, ದೇಶಭ್ರಷ್ಟರನ್ನು ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ.
ಕಾಂಬೋಡಿಯಾದ ‘ಖೆಮೇರ್ ರೂಜ್’ (ಕಾಂಪೊಚಿಯಾ ಕಮ್ಯುನಿಸ್ಟ್ ಪಕ್ಷದ ಬೆಂಬಲಿಗರು) ನರಮೇಧದಿಂದ ಬೇಸತ್ತವರು ಹಾಗೂ ಮ್ಯಾನ್ಮಾರ್ನಲ್ಲಿನ ಬರ್ಮಾ ಸೇನಾ ದಾಳಿಯಿಂದ ಕಂಗೆಟ್ಟ ಗುಡ್ಡಗಾಡು ಜನ ಕಳೆದ ನಾಲ್ಕು ದಶಕಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಥಾಯ್ಲೆಂಡ್ಗೆ ವಲಸೆ ಬಂದಿದ್ದಾರೆ.
ಈ ರೀತಿ ಬಂದ ವಲಸಿಗರ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಕಷ್ಟ. ಏಕೆಂದರೆ ತಾವು ಥಾಯ್ ಸೇನೆಯ ಕೆಂಗಣ್ಣಿಗೆ ಗುರಿಯಾಗುವ ಭಯ ಅವರಲ್ಲಿದೆ. ಹೀಗಾಗಿ ತಮ್ಮ ನೆಲೆಯನ್ನು ಬಹಿರಂಗಪಡಿಸಲು ಅವರು ಹಿಂಜರಿಯುತ್ತಾರೆ. ಅಲ್ಲದೇ ಥಾಯ್ಲೆಂಡ್ ಕೂಡ ಒಂದರ ಹಿಂದೆ ಒಂದರಂತೆ ನಿರಂತರ ದಂಗೆಗೆ ತುತ್ತಾಗುತ್ತಲೇ ಇದೆ.
ಸದ್ಯ ದಂಗೆ ಹತೋಟಿಗೆ ಬಂದಿದ್ದು, ಆಡಳಿತವನ್ನು ಕೈಗೆ ತೆಗೆದುಕೊಂಡ ಸೇನೆ, ಇಲ್ಲಿನ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಹೇರಿದೆ. ಬೇರೆ ಪ್ರದೇಶಗಳಲ್ಲಿ ರಾತ್ರಿ ವೇಳೆ ಮಾತ್ರ ನಿಷೇಧಾಜ್ಞೆ ಜಾರಿಯಲ್ಲಿದೆ. ಪದಚ್ಯುತ ಪ್ರಧಾನಿ ಯಿಂಗ್ಲಕ್ ಶಿನವಾತ್ರ ಸೇರಿದಂತೆ ಸೇನೆಯ ವಶದಲ್ಲಿದ್ದ ಹಲವರನ್ನು ಬಿಡುಗಡೆಗೊಳಿಸಲಾಗಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣ ನೆಲಕಚ್ಚಿದೆ.
ಮಾಧ್ಯಮದ ಮೇಲೆ ಸೇನೆ ಹಿಡಿತ ಸಾಧಿಸಿದ್ದು, ಅವುಗಳ ಬಾಯಿಗೆ ಬೀಗ ಹಾಕಿದೆ. ಬಂಧನದಲ್ಲಿದ್ದ ಪತ್ರಕರ್ತರನ್ನು, ‘ಬಾಯಿ ಮುಚ್ಚಿಕೊಂಡಿರಬೇಕು’ ಎಂಬ ಷರತ್ತಿನ ಮೇಲೆ ಬಿಡುಗಡೆ ಮಾಡಿದೆ. ಅಲ್ಲದೇ, ಐದಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವುದನ್ನೂ ನಿಷೇಧಿಸಿದೆ.
ಇದೇ ವೇಳೆ ನಾಗರಿಕರಲ್ಲಿ ಮನೆಮಾಡಿರುವ ಭಯವನ್ನು ದೂರಮಾಡಲು ರಾಜಧಾನಿ ಬ್ಯಾಂಕಾಕ್ನಲ್ಲಿ ಸೇನೆಯು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಲ್ಲಿ ಮಹಿಳೆಯರು ಅರೆಬರೆ ಬಟ್ಟೆ ತೊಟ್ಟು ಹಾಡು ನೃತ್ಯ ಪ್ರದರ್ಶಿಸುತ್ತಾರೆ. ವಿಚಿತ್ರವೆಂದರೆ ಇಂತಹ ಕಾರ್ಯಕ್ರಮಗಳಿಗೆ ಜನ ಸೇರುವುದಕ್ಕೆ ಮಾತ್ರ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.
ರಾಜಕೀಯದ ಬಗ್ಗೆ ಬಹಿರಂಗವಾಗಿಮಾತನಾಡುವವರನ್ನು ಬಂಧಿಸಿ ಸೇನೆ ವಿಚಾರಣೆಗೊಳಪಡಿಸುತ್ತಿದೆ. ಬಂಧನಕ್ಕೊಳಗಾದವರ ಹೆಸರನ್ನು ಪ್ರತಿ ಸಂಜೆ ಮಾಧ್ಯಮದಲ್ಲಿ ಪ್ರಕಟಿಸುತ್ತಿದ್ದಾರೆ. ಇದುವರೆಗೆ ಸುಮಾರು 350ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ‘ಇನ್ನು ಮುಂದೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ಮುಚ್ಚಳಿಕೆ ಬರೆಸಿಕೊಂಡು ಅವರನ್ನು ಬಿಡುಗಡೆಗೊಳಿಸುತ್ತಿದ್ದಾರೆ.
ಸರ್ಕಾರವನ್ನು ವಜಾ ಮಾಡಿ ಸೇನೆ ಅಧಿಕಾರವನ್ನು ವಹಿಸಿಕೊಂಡ ದಿನ (ಮೇ 22), ಸಂಸದ ಚಿನಾವತ್ ಹಬೂನ್ಪತ್ ಅವರು ತನ್ನ ಬೆಂಬಲಿಗರನ್ನು ಉದ್ದೇಶಿಸಿ, ‘ಸೋದರ ಸೋದರಿಯರೇ, ನಾನು ಪಲಾಯನ ಮಾಡುತ್ತಿಲ್ಲ. ಅಲ್ಲದೇ ನನ್ನ ಜತೆ ಮಾಜಿ ಒಳಾಡಳಿ ಸಚಿವ ಚರುಪೊಂಗ್ ರೌಂಗ್ಸುವಾನ್ ಕೂಡ ಇದ್ದಾರೆ’ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ತಮಾಷೆಯೆಂದರೆ, ತಾವು ಸದ್ಯ ಇರುವ ಸ್ಥಳದ ಪತ್ತೆ ನೀಡುವ ಫೇಸ್ಬುಕ್ನ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲು ಮರೆತಿದ್ದ ಅವರು, ಈ ಸಂದೇಶ ಬರೆಯುವ ವೇಳೆ ಕಾಂಬೋಡಿಯಾದಲ್ಲಿದ್ದರು!
ಸೇನೆಯಿಂದ ಬೆದರಿಕೆ: ‘ಸೇನೆಯ ಷರತ್ತುಗಳಿಗೆ ವಿಧೇಯನಾಗಿ ನಡೆದುಕೊಳ್ಳದಿದ್ದರೆ ಅಥವಾ ರಾಜಕೀಯ ಚಟುವಟಿಕೆಗಳನ್ನು ಬೆಂಬಲಿಸಿದಲ್ಲಿ ನನ್ನ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ನನ್ನ ಆರ್ಥಿಕ ವಹಿವಾಟನ್ನು ಮುಟ್ಟುಗೋಲು ಹಾಕಿಕೊಳ್ಳಲು ನನ್ನ ಸಹಮತ ಇದೆ’ ಎಂಬ ಒಕ್ಕಣಿಕೆ ದಂಗೆಕೋರರ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಸೇನಾ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವ ಬೆದರಿಕೆಯನ್ನೂ ಸೇನೆ ಒಡ್ಡಿದೆ. ಸೇನೆಯಿಂದ ವಿಚಾರಣೆಗೊಳಪಟ್ಟವರಲ್ಲಿ ಬಹುತೇಕರು ಮಾಜಿ ಪ್ರಧಾನಿ ತಕ್ಸಿನ್ ಶಿನವಾತ್ರ ಅವರ ಜತೆ ಗುರುತಿಸಿಕೊಂಡವರೇ. ಸೇನಾ ಕ್ರಾಂತಿಯಿಂದ ಅಧಿಕಾರ ವಂಚಿತರಾದ ಜನಪ್ರಿಯ ನಾಯಕ ತಕ್ಸಿನ್. ಅವರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಜಾಕ್ರಪೋಬ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.
ತಕ್ಸಿನ್ ಅವರು ಅಧಿಕಾರದಲ್ಲಿದ್ದಾಗ ಕೃಷಿಕರಿಗೆ ಸಹಾಯಧನ ನೀಡುವುದು ಮುಂತಾದ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ಈ ಕಾರಣಕ್ಕೆ ಅವರಿಗೆ ಗ್ರಾಮಾಂತರ ಪ್ರದೇಶದಲ್ಲಿ ಭಾರಿ ಜನ ಬೆಂಬಲವೂ ಇದೆ. ಆದರೆ ಉಳ್ಳವರ ಪ್ರಕಾರ ಈ ರೀತಿ ಸಹಾಯಧನ ಕೊಡುವುದು ವ್ಯರ್ಥ. ಹೀಗಾಗಿ ತಕ್ಸಿನ್ ಅವರ ಪ್ರಭಾವ ಕುಗ್ಗಿಸಲು ಸೇನಾಕ್ರಾಂತಿ ಸಹಕಾರಿ ಎಂಬುದು ಬ್ಯಾಂಕಾಕ್ ನಗರದ ಮಧ್ಯಮ ವರ್ಗದವರ ಅಭಿಪ್ರಾಯ ಕೂಡ ಹೌದು. ಈ ಹಿನ್ನೆಲೆಯಲ್ಲಿ ದಂಗೆಗೆ ಅವರ ಬೆಂಬಲವಿದೆ.
ರಾಜಕೀಯದಲ್ಲಿ ಗುರುತಿಸಿಕೊಂಡಿರದ ಸಂಶೋಧಕರು, ವಿಶ್ಲೇಷಕರೂ ದೇಶ ತೊರೆದಿದ್ದಾರೆ. ‘ತಕ್ಸಿನ್ ಅವರ ಬೆಂಬಲಿಗರ ವಿರುದ್ಧ ನ್ಯಾಯಾಲಯ ನೀಡಿದ ತೀರ್ಪು ರಾಜಕೀಯ ಪ್ರೇರಿತ. ಥಾಯ್ಲೆಂಡ್ನಲ್ಲಿ ನಾನು ಸುರಕ್ಷಿತವಾಗಿರುತ್ತೇನೆ ಎಂಬ ಭರವಸೆ ಇಲ್ಲ’ ಎಂದು ಲಂಡನ್ನಲ್ಲಿ ಆಶ್ರಯ ಪಡೆದ ವಕೀಲ ವೆರಾಪಟ್ ಪರಿಯಾವಂಗ್ ಅವರು ಹೇಳಿಕೊಂಡಿದ್ದಾರೆ.
ಬಿಕ್ಕಟ್ಟಿಗೆ ಚುನಾವಣೆಯೇ ಪರಿಹಾರ ಎಂಬುದು ವೆರಾಪಟ್ ಹಾಗೂ ಇನ್ನಿತರ ಬುದ್ಧಿಜೀವಿಗಳ ಅಭಿಪ್ರಾಯ. ಆದರೆ ವರ್ಷಾರಂಭದಲ್ಲೇ ನಡೆಸಲು ಉದ್ದೇಶಿಸಿದ್ದ ಚುನಾವಣೆಗೆ ಯಿಂಗ್ಲಕ್ ಶಿನವಾತ್ರ ಸರ್ಕಾರದ ವಿರೋಧಿಗಳು ತಡೆಯೊಡ್ಡಿದ್ದರು. ಈ ಚುನಾವಣೆಯಲ್ಲಿ ಯಿಂಗ್ಲಕ್ ಅವರು ಪ್ರಧಾನಿಯಾಗಿ ಮರು ಆಯ್ಕೆಯಾಗುವ ಭರವಸೆಯಲ್ಲಿದ್ದರು.
ತನನ್ ತನರತನಪಿಸಿತ್ ಎಂಬ ಹೆಸರಿನಲ್ಲಿ ವೆರಾಪಟ್ ಅವರ ಫೇಸ್ಬುಕ್ ಪುಟದಲ್ಲಿ, ‘ನಿಮ್ಮಂತಹ ವ್ಯಕ್ತಿ ಪರದೇಶದಲ್ಲಿ ಸಾಯುವುದೇ ಒಳಿತು. ಮತ್ತೆ ದೇಶಕ್ಕೆ ಬರದಿರಿ’ ಎಂದು ಬರೆಯಲಾಗಿದೆ.
‘ವಿದೇಶಗಳಲ್ಲಿರುವ ನನ್ನ ಸ್ನೇಹಿತರು ಥಾಯ್ಲೆಂಡ್ಗೆ ಮರಳಲು ಅಂಜಿದ್ದಾರೆ. ಹಲವರು ದೇಶ ತೊರೆದಿದ್ದಾರೆ. ಇನ್ನು ಥಾಯ್ಲೆಂಡ್ ಅವರಿಗೆ ಸುರಕ್ಷಿತವೆನಿಸುತ್ತಿಲ್ಲ’ ಎಂದು ಟೋಕಿಯೊದಲ್ಲಿರುವ ಪವಿನ್ ಚಚಾವಲ್ ಪೊಂಗ್ಪುನ್ ಎಂಬ ಥಾಯ್ಲೆಂಡ್ ವಿದ್ಯಾರ್ಥಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
‘ವಿರೋಧಿಗಳನ್ನು ವಿಚಾರಣೆಗೊಳಪಡಿಸುವ ಸೇನೆಯ ಕ್ರಮ, ಭಯದ ವಾತಾವರಣ ಸೃಷ್ಟಿಸುವ ಕುತಂತ್ರ’ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಚಾರಣೆಗೆ ಹಾಜರಾಗುವಂತೆ ಸೇನೆ ಅವರಿಗೆ ಸೂಚಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಬೆಂಬಲಿಸುವವರನ್ನು ಸೇನೆ ಗುರಿಯಾಗಿಸಿಕೊಂಡಿದೆ. ಇದು ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿದ್ದು ಜನಸಾಮಾನ್ಯರನ್ನು ಚಿಂತೆಗೀಡುಮಾಡಿದೆ. ‘ದೇಶದಲ್ಲಿನ ಬಿಕ್ಕಟ್ಟು ಮುಂದಿನ ಒಂದೆರಡು ಪೀಳಿಗೆಯವರಿಗೂ ಸಮಸ್ಯೆಯಾಗಿಯೇ ಉಳಿಯುವಂತೆ ಕಾಣುತ್ತಿದೆ. ನನಗಂತೂ ಈ ದೇಶದಿಂದ ಸುರಕ್ಷಿತವಾಗಿ ಹೊರಗೆ ಹೋದರೆ ಸಾಕು ಎನ್ನುವಂತಾಗಿದೆ’ ಎಂಬುದು ದೇಶ ತೊರೆಯಲು ಸಿದ್ಧವಾಗಿವಿಶೇರುವ ಬ್ಯಾಂಕಾಕ್ ಮೂಲದ ಉದ್ಯಮಿಯೊಬ್ಬರ ಆತಂಕ.
ಭಿನ್ನ ಧಾಟಿಯ ಚಲನಚಿತ್ರ ನಿರ್ದೇಶಕ ಕೆ. ಎಂ. ಶಂಕರಪ್ಪ
ಆದರ್ಶ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಡುವ ಉಮೇದಿನಿಂದ ಚಲನಚಿತ್ರ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡು, ಅದನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ಚಿತ್ರರಂಗಕ್ಕೆ ಮೆರುಗು ನೀಡಿ ಇತ್ತೀಚೆಗೆ ನಿಧನರಾದ ಹೆಸರಾಂತ ಚಲನಚಿತ್ರ ನಿರ್ದೇಶಕ ಕೆ.ಎಂ. ಶಂಕರಪ್ಪ ಹಲವು ಚಳವಳಿಗಳಿಗೆ ಹಿಂದಿನ ಶಕ್ತಿಯಾಗಿದ್ದವರು. ಹೊಸ ಹುರುಪಿನಿಂದ ಕಟ್ಟಿಕೊಟ್ಟ ಮೊದಲ ಸ್ವಂತ ಚಿತ್ರ ಸಫಲತೆ ಕಾಣದಿದ್ದಾಗ ಇನ್ನೊಂದು ಚಿತ್ರ ತಯಾರಿಕೆಯತ್ತ ಮುಖ ಮಾಡದೆ ತಣ್ಣಗೆ ಇದ್ದು ಬಿಟ್ಟವರು ಅವರು.
ತುಮಕೂರು ಜಿಲ್ಲೆ ಮಧುಗಿರಿ ಸಮೀಪದ ಕಾರಮರಡಿಯ ರೈತ ಕುಟುಂಬದ ಶಂಕರಪ್ಪ ಕಾಲೇಜು ವ್ಯಾಸಂಗ ಮಾಡುತ್ತಿರುವಾಗಲೇ ಮಾರ್ಕ್ಸ್ವಾದಿ ಸಿದ್ಧಾಂತಗಳತ್ತ ಒಲವು ತೋರಿದರೂ ನಂತರ ಲೋಹಿಯಾ ವಿಚಾರಗಳನ್ನು ಅನುಸರಿಸಿದವರು. ಆ ಕಾಲಘಟ್ಟದಲ್ಲಿ ನಡೆದ ಹಲವಾರು ಪ್ರಗತಿಪರ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಅನೇಕ ಜನಪರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಅವರು ಚಿತ್ರ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿದಾಗ ಹೆಸರಾಂತ ನಿರ್ದೇಶಕ ಋತ್ವಿಕ್ ಘಟಕ್ ಅವರಿಂದ ಆಕರ್ಷಿತರಾದರು. ಮುಂದಿನ ದಿನಗಳಲ್ಲಿ ಹಿಂಬಾಲಿಸಿದ್ದು ಕೂಡ ಘಟಕ್ ಅವರನ್ನೇ.
ವ್ಯಾಸಂಗದ ಭಾಗವಾಗಿ ಶಂಕರಪ್ಪ ಕನ್ನಡದ ಖ್ಯಾತ ಕಥೆಗಾರ ಕೆ. ಸದಾಶಿವ ಅವರ ‘ನಲ್ಲಿಯಲ್ಲಿ ನೀರು ಬಂತು’ ಕಥೆಯನ್ನು ಚಿತ್ರವಾಗಿಸಿದರು. ಆ ಕಿರುಚಿತ್ರ ಚಲನಚಿತ್ರ ವಲಯದಲ್ಲಿ ಸದ್ದು ಮಾಡಿತಲ್ಲದೆ ಶಂಕರಪ್ಪನವರಿಗೆ ಹೆಸರು ತಂದುಕೊಟ್ಟಿತು.
ಭಿನ್ನ ಧಾಟಿಯ ಚಲನಚಿತ್ರ ಶಕೆ ಶುರುವಾಗಿದ್ದ ಆ ದಿನಗಳಲ್ಲಿ ಗೆಳೆಯರೊಂದಿಗೆ ‘ಚಲನ’ ಚಿತ್ರ ಸಮಾಜ ಸ್ಥಾಪಿಸಿ ಜನರತ್ತ ವಿಭಿನ್ನ ಸಿನಿಮಾವನ್ನು ಕೊಂಡೊಯ್ಯುವ ಯತ್ನ ಮಾಡಿದ ಅವರು ಪೂರ್ಣ ಪ್ರಮಾಣದ ರೂಪಕ ಚಿತ್ರಕ್ಕಾಗಿ ತಯಾರಿ ನಡೆಸಿ ಅದಕ್ಕಾಗಿ ಪ್ರಸಿದ್ಧ ಬರಹಗಾರ ಬಸವರಾಜ ಕಟ್ಟೀಮನಿ ಅವರ ‘ಮಾಡಿ ಮಡಿದವರು’ ಕಾದಂಬರಿಯನ್ನು ಆರಿಸಿಕೊಂಡರು.
ಭಿನ್ನ ಧಾಟಿಯ ಚಲನಚಿತ್ರ ಶಕೆ ಶುರುವಾಗಿದ್ದ ಆ ದಿನಗಳಲ್ಲಿ ಗೆಳೆಯರೊಂದಿಗೆ ‘ಚಲನ’ ಚಿತ್ರ ಸಮಾಜ ಸ್ಥಾಪಿಸಿ ಜನರತ್ತ ವಿಭಿನ್ನ ಸಿನಿಮಾವನ್ನು ಕೊಂಡೊಯ್ಯುವ ಯತ್ನ ಮಾಡಿದ ಅವರು ಪೂರ್ಣ ಪ್ರಮಾಣದ ರೂಪಕ ಚಿತ್ರಕ್ಕಾಗಿ ತಯಾರಿ ನಡೆಸಿ ಅದಕ್ಕಾಗಿ ಪ್ರಸಿದ್ಧ ಬರಹಗಾರ ಬಸವರಾಜ ಕಟ್ಟೀಮನಿ ಅವರ ‘ಮಾಡಿ ಮಡಿದವರು’ ಕಾದಂಬರಿಯನ್ನು ಆರಿಸಿಕೊಂಡರು.
ಭಾರತವನ್ನು ಬ್ರಿಟಿಷರಿಂದ ಬಿಡುಗಡೆಗೊಳಿಸಲು ಸಾಮಾನ್ಯ ಜನರು ಸ್ವಾತಂತ್ರ್ಯ ಆಂದೋಲನದಲ್ಲಿ ವಹಿಸಿದ ಪಾತ್ರವನ್ನು ವಿವರಿಸುವ ‘ಮಾಡಿ ಮಡಿದವರು’ ಕೃತಿಯನ್ನು ತಮ್ಮ ಚೊಚ್ಚಲ ಚಿತ್ರಕ್ಕಾಗಿ ಸಿದ್ಧ ಮಾಡಿಕೊಂಡ ಶಂಕರಪ್ಪ ನಾಡಿನ ಪ್ರತಿಭಾವಂತರ ತಂಡವನ್ನೇ ಅದರೊಳಕ್ಕೆ ತಂದರು. ಉತ್ತರ ಕರ್ನಾಟಕದಲ್ಲಿ ಘಟಿಸಿದ ಹೋರಾಟದ ಹಂತಗಳನ್ನು ಅಲ್ಲಿಯದೇ ಭಾಷಾಶೈಲಿಯಲ್ಲಿ ಕಟ್ಟೀಮನಿ ಅವರೊಂದಿಗೆ ಕೂಡಿ ಸಿದ್ಧಪಡಿಸಿದ ಅವರು ಚಿತ್ರ ನಿರೂಪಣೆಯಲ್ಲೂ ಭಿನ್ನ ಮಾರ್ಗ ತುಳಿದರು. ಯಾವುದೇ ಜನಪ್ರಿಯ ಸಿದ್ಧಸೂತ್ರಗಳನ್ನು ಅಳವಡಿಸಿಕೊಳ್ಳದೆ ಹೊಸ ಜಾಡಿನಲ್ಲಿ ನಡೆದರು.
ರಂಗದಿಗ್ಗಜರಾದ ಏಣಗಿ ಬಾಳಪ್ಪ, ಜಿ. ವಿ. ಶಿವಾನಂದರಂತಹ ಅನುಭವಿಗಳ ಜೊತೆಗೆ ಗಿರಿಜಾ ಲೋಕೇಶ್, ರಾಂಗೋಪಾಲ್, ಸುಧೀರ್ ಅವರಿಗೂ ತಮ್ಮ ಚಿತ್ರದಲ್ಲಿ ಅಭಿನಯಿಸುವಂತೆ ಮಾಡಿದ ಅವರು ತಾವೇ ರಚಿಸಿದ ಲಾವಣಿಯೊಂದಿಗೆ ಚಂದ್ರಶೇಖರ ಕಂಬಾರ ಹಾಡುವ ಪಾತ್ರ ವಹಿಸುವಂತೆ ಮಾಡಿದರು.
ನವ್ಯಪಂಥದ ನೇತಾರ ಗೋಪಾಲಕೃಷ್ಣ ಅಡಿಗರ ‘ನೆನೆ ನೆನೆ ಆ ದಿನ ....’ ಕವಿತೆಯನ್ನು ಮೈಸೂರು ಅನಂತ ಸ್ವಾಮಿ ಸಿರಿಕಂಠದಿಂದ ಹಾಡಿಸಿದ ಕೆ. ಎಂ. ಶಂಕರಪ್ಪ ‘ಮಾಡಿ ಮಡಿದವರು’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿಸಿದ್ದು ಭಾಸ್ಕರ್ ಚಂದಾವರ್ಕರ್ ಅವರಿಂದ.
ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಕಲಿತಿದ್ದ ಯು. ಎಂ. ಎನ್. ಷರೀಫ್ (ಛಾಯಾಗ್ರಹಣ) ಉಮೇಶ್ ಕುಲಕರ್ಣಿ (ಸಂಕಲನ) ಕೈಜೋಡಿಸಿದ್ದ ‘ಮಾಡಿ ಮಡಿದವರು’ ಜನಪ್ರಿಯತೆಯ ದೃಷ್ಟಿಯಿಂದ ಸೋತು ಹೋಯಿತು. ನಿಧಾನಗತಿ, ಜನಪ್ರಿಯ ಸೂತ್ರಗಳಿಲ್ಲದ ಹಾಗೂ ತಾಂತ್ರಿಕವಾಗಿ ಮಂಕಾಗಿದ್ದ ‘ಮಾಡಿ ಮಡಿದವರು’ ಬಸವರಾಜ ಕಟ್ಟೀಮನಿ ಅವರ ಕಾದಂಬರಿಯ ಅನುಭವ ನೀಡಲಿಲ್ಲ.
ಹೊಸ ಅಲೆಯ ಚಿತ್ರವೆಂದು ‘ಮಾಡಿ ಮಡಿದವರು’ ಪ್ರಶಸ್ತಿಗೆ ಆಯ್ಕೆಯಾದರೂ ಶಂಕರಪ್ಪ ಇನ್ನೊಂದು ಚಿತ್ರಕ್ಕೆ ಕೈಹಾಕಲಿಲ್ಲ. ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಗಳು ನಾಲ್ಕೈದು ಆಹ್ವಾನಗಳನ್ನು ನೀಡಿದರೂ ಶಂಕರಪ್ಪ ಬೇಡವೆಂದು ಕೂತರು. ದೇವನೂರು ಮಹಾದೇವ ಅವರ ‘ಒಡಲಾಳ’ವನ್ನು ಅವರು ನಿರ್ದೇಶಿಸುವ ಮಾತುಗಳು ಈಚೆಗೆ ಹರಡಿದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ.
ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಕಲಿತಿದ್ದ ಯು. ಎಂ. ಎನ್. ಷರೀಫ್ (ಛಾಯಾಗ್ರಹಣ) ಉಮೇಶ್ ಕುಲಕರ್ಣಿ (ಸಂಕಲನ) ಕೈಜೋಡಿಸಿದ್ದ ‘ಮಾಡಿ ಮಡಿದವರು’ ಜನಪ್ರಿಯತೆಯ ದೃಷ್ಟಿಯಿಂದ ಸೋತು ಹೋಯಿತು. ನಿಧಾನಗತಿ, ಜನಪ್ರಿಯ ಸೂತ್ರಗಳಿಲ್ಲದ ಹಾಗೂ ತಾಂತ್ರಿಕವಾಗಿ ಮಂಕಾಗಿದ್ದ ‘ಮಾಡಿ ಮಡಿದವರು’ ಬಸವರಾಜ ಕಟ್ಟೀಮನಿ ಅವರ ಕಾದಂಬರಿಯ ಅನುಭವ ನೀಡಲಿಲ್ಲ.
ಹೊಸ ಅಲೆಯ ಚಿತ್ರವೆಂದು ‘ಮಾಡಿ ಮಡಿದವರು’ ಪ್ರಶಸ್ತಿಗೆ ಆಯ್ಕೆಯಾದರೂ ಶಂಕರಪ್ಪ ಇನ್ನೊಂದು ಚಿತ್ರಕ್ಕೆ ಕೈಹಾಕಲಿಲ್ಲ. ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಗಳು ನಾಲ್ಕೈದು ಆಹ್ವಾನಗಳನ್ನು ನೀಡಿದರೂ ಶಂಕರಪ್ಪ ಬೇಡವೆಂದು ಕೂತರು. ದೇವನೂರು ಮಹಾದೇವ ಅವರ ‘ಒಡಲಾಳ’ವನ್ನು ಅವರು ನಿರ್ದೇಶಿಸುವ ಮಾತುಗಳು ಈಚೆಗೆ ಹರಡಿದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ.
.jpg)
ಮೈಸೂರಿನಲ್ಲಿ ನಡೆದ ಮೊದಲ ವಿಶ್ವಕನ್ನಡ ಸಮ್ಮೇಳನದ ಬಗ್ಗೆ ಶಂಕರಪ್ಪ ನಿರ್ಮಿಸಿದ ಸಾಕ್ಷ್ಯಚಿತ್ರ ಸಾಂಸ್ಕೃತಿಕ ಚರಿತ್ರೆಯ ದೃಷ್ಟಿಯಿಂದ ಮಹತ್ವಪೂರ್ಣವಾಗಿದ್ದು, ಗ್ರಾಮೀಣ ಬದುಕಿನ ಬಗೆಗೆ ಸಿದ್ಧಮಾಡಿಕೊಟ್ಟಿರುವ ಕೆಲವು ಸಾಕ್ಷ್ಯಚಿತ್ರಗಳು ದಾಖಲಾರ್ಹವಾದವು.
ತುರ್ತುಪರಿಸ್ಥಿತಿ ಸಮಯದಲ್ಲಿ ಬೆಂಗಳೂರು ಸೆಂಟ್ರಲ್ ಜೈಲ್ನಲ್ಲಿ ಕೆಲವು ಬಂಧಿತರ ಮೇಲೆ ನಡೆಯಿತೆನ್ನಲಾದ ದೌರ್ಜನ್ಯದ ಕುರಿತು ಸಾಕ್ಷ್ಯಚಿತ್ರವೊಂದನ್ನು ತಯಾರಿಸಲು ಯತ್ನಿಸಿದ ಅವರು ಜೈಲು ಒಳಾವರಣವನ್ನು,ಅಲ್ಲಿ ನಡೆಯುವ ಚಟುವಟಿಕೆಗಳನ್ನು ಜೈಲುಗೋಡೆಯ ಬದಿಯಲ್ಲಿದ್ದ ಜನರಲ್ ಹಾಸ್ಟೆಲ್ನ ಶಾಸಕರೊಬ್ಬರ ಕೊಠಡಿಯಿಂದ ಗುಪ್ತವಾಗಿ ಚಿತ್ರೀಕರಿಸುವ ವಿಫಲ ಯತ್ನ ನಡೆಸಿದ್ದೂ ಉಂಟು.
ತುರ್ತುಪರಿಸ್ಥಿತಿ ಸಮಯದಲ್ಲಿ ಬೆಂಗಳೂರು ಸೆಂಟ್ರಲ್ ಜೈಲ್ನಲ್ಲಿ ಕೆಲವು ಬಂಧಿತರ ಮೇಲೆ ನಡೆಯಿತೆನ್ನಲಾದ ದೌರ್ಜನ್ಯದ ಕುರಿತು ಸಾಕ್ಷ್ಯಚಿತ್ರವೊಂದನ್ನು ತಯಾರಿಸಲು ಯತ್ನಿಸಿದ ಅವರು ಜೈಲು ಒಳಾವರಣವನ್ನು,ಅಲ್ಲಿ ನಡೆಯುವ ಚಟುವಟಿಕೆಗಳನ್ನು ಜೈಲುಗೋಡೆಯ ಬದಿಯಲ್ಲಿದ್ದ ಜನರಲ್ ಹಾಸ್ಟೆಲ್ನ ಶಾಸಕರೊಬ್ಬರ ಕೊಠಡಿಯಿಂದ ಗುಪ್ತವಾಗಿ ಚಿತ್ರೀಕರಿಸುವ ವಿಫಲ ಯತ್ನ ನಡೆಸಿದ್ದೂ ಉಂಟು.
ಶಾಂತವೇರಿ ಗೋಪಾಲಗೌಡ, ಜೆ. ಎಚ್. ಪಟೇಲ್, ಎಂ.ಡಿ.ನಂಜುಂಡಸ್ವಾಮಿ, ಕೊಣಂದೂರು ಲಿಂಗಪ್ಪ, ಪೂರ್ಣಚಂದ್ರ ತೇಜಸ್ವಿ, ಆಲನಹಳ್ಳಿ ಕೃಷ್ಣ ಮೊದಲಾದವರ ನಿಕಟ ಒಡನಾಟದಲ್ಲಿದ್ದು ಸಮಾಜವಾದಿ ಯುವಜನ ಸಭಾ ಸೇರಿದಂತೆ ಅನೇಕ ಸಂಘಟನೆಗಳಲ್ಲಿ ಗುರ್ತಿಸಿಕೊಂಡಿದ್ದ ಶಂಕರಪ್ಪ ಮಹಾ ಪುಸ್ತಕ ಪ್ರೇಮಿ. ತಾವು ಓದು ಮುಗಿಸಿದ ಪುಸ್ತಕಗಳನ್ನು ಆಸಕ್ತರಿಗೆ ಹಂಚುವ ರೂಢಿ ಇದ್ದ ಅವರು ‘ಪುಸ್ತಕ ಇರೋದು ಓದಕ್ಕೆ, ಷೋಕೇಸ್ನಲ್ಲಿ ಜೋಡಿಸಕ್ಕೆ ಅಲ್ಲಾ ಕಣಯ್ಯ’ ಎನ್ನುತ್ತಿದ್ದರು
ತಾವು ನಂಬಿದ ಮತ್ತು ಒಪ್ಪಿಕೊಂಡ ವಿಚಾರಗಳ ಬಗೆಗೆ ಎಂದೂ ರಾಜಿ ಮಾಡಿಕೊಳ್ಳದ ಅವರು ಮೇಲ್ನೋಟಕ್ಕೆ ಮೌನಿಯಂತೆ ಕಂಡರೂ ವಿಚಾರಪೂರ್ಣ ವಿಷಯಗಳನ್ನು ಆಳವಾಗಿ ಅರಿತಿದ್ದ ವಾಗ್ಮಿ. ಬೇಸಾಯ, ಆಯುರ್ವೇದದಿಂದ ಖಗೋಳ ಶಾಸ್ತ್ರದವರೆಗೆ ಹಲವು ವಿಚಾರಗಳನ್ನು ಅಧ್ಯಯನ ಮಾಡಿದ್ದ ಅವರಿಗೆ ಬುದ್ಧನ ಬಗ್ಗೆ ಅತೀವ ಪ್ರೀತಿ. ಪಂಚೆ, ಜುಬ್ಬಾ, ನೀಳವಾದ ಗಡ್ಡವನ್ನು ಕೊನೆವರೆಗೂ ಬಿಡದಿದ್ದ ಅವರು ಆಫ್ಘಾನಿಸ್ತಾನದಲ್ಲಿ ಬುದ್ಧನ ಬೃಹತ್ ಪ್ರತಿಮೆಗಳನ್ನು ಕೆಡವಿದಾಗ ‘ಬುದ್ಧ ಇರುವುದು ಕಲ್ಲಿನಲ್ಲಲ್ಲ. ಜ್ಞಾನದಲ್ಲಿ, ಹೃದಯದಲ್ಲಿ’ ಎಂದಿದ್ದ ಕೆ. ಎಂ. ಶಂಕರಪ್ಪ ಹತ್ತೆಂಟು ವರ್ಷಗಳ ಹಿಂದೆಯೇ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ತಮಗೆ ತಿಳಿದಿದ್ದನ್ನು ಇತರಿಗೆ ಹಂಚುತ್ತಿದ್ದ ಅವರು ತಯಾರಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಅವರಿಗೆ ಇಷ್ಟವಾಗಿದ್ದು ಒಂದೇ ‘ಗೌತಮ ಬುದ್ಧ’.ವಿಶೇಷ
ಸ್ವಾತಂತ್ರ್ಯ ಗೀತೆಯ ಹಕ್ಕಿ ಮಾಯಾ ಏಂಜೆಲೊ
‘ಪಂಜರದ ಹಕ್ಕಿ
ಕಂಪಿಸುವ ದನಿಯಲ್ಲಿ
ಕಾಣದೂರನ್ನು ಕುರಿತು
ಕಾಣುವಾಸೆಯಲಿ ಹಾಡುತ್ತೆ
ದೂರದ ಬೆಟ್ಟಗಳಲ್ಲಿ
ಹಕ್ಕಿಯ ರಾಗ ಮಾರ್ದನಿಸುತ್ತೆ
ಯಾಕೆಂದರೆ–ಪಂಜರದ ಹಕ್ಕಿ
ಸ್ವಾತಂತ್ರ್ಯ ಗೀತೆಯ ಹಾಡುತ್ತೆ’
(ಕವನ: ಮಾಯಾ ಏಂಜೆಲೊ. ಅನುವಾದ:ಎಂ.ಆರ್.ಕಮಲ)
ಕಂಪಿಸುವ ದನಿಯಲ್ಲಿ
ಕಾಣದೂರನ್ನು ಕುರಿತು
ಕಾಣುವಾಸೆಯಲಿ ಹಾಡುತ್ತೆ
ದೂರದ ಬೆಟ್ಟಗಳಲ್ಲಿ
ಹಕ್ಕಿಯ ರಾಗ ಮಾರ್ದನಿಸುತ್ತೆ
ಯಾಕೆಂದರೆ–ಪಂಜರದ ಹಕ್ಕಿ
ಸ್ವಾತಂತ್ರ್ಯ ಗೀತೆಯ ಹಾಡುತ್ತೆ’
(ಕವನ: ಮಾಯಾ ಏಂಜೆಲೊ. ಅನುವಾದ:ಎಂ.ಆರ್.ಕಮಲ)
ಜಗತ್ತಿನಾದ್ಯಂತ ನೋವಿನಲ್ಲಿ ಬೆಳೆದು ಜೀವನದ ಉದ್ದಕ್ಕೂ ಅವಮಾನ ಅನುಭವಿಸಿದವರಿದ್ದಾರೆ. ಅವರಲ್ಲಿ ಆಫ್ರಿಕಾದಿಂದ ಅಮೆರಿಕ ಖಂಡಕ್ಕೆ ಬಲವಂತವಾಗಿ ಕರೆತರಲ್ಪಟ್ಟ ಕಪ್ಪುಜನರದ್ದು ನೋವಿನಲ್ಲಿ ಅದ್ದಿದ ಮತ್ತು ರೋಮಾಂಚನಕಾರಿಯಾದ ಹೋರಾಟದ ಗಾಥೆ. ಮಾಯಾ ಏಂಜೆಲೊ ಅವರದ್ದು ಅಂತಹ ಒಂದು ಹೋರಾಟದ ಬದುಕು. ಮಾಯಾ ಅವರು ಚಿಕ್ಕವರಿದ್ದಾಗ ಕಪ್ಪುಜನರು ಮತ್ತು ಅಮೆರಿಕದ ಬಿಳಿಯರ ನಡುವೆ ತೀವ್ರ ಸ್ವರೂಪದ ಅನುಮಾನದ ವಾತಾವರಣವಿತ್ತು.
ಮಾಯಾ ಚಿಕ್ಕವರಿದ್ದಾಗ ಮೂವತ್ತರ ದಶಕದಲ್ಲಿ ಆರ್ಕಾನ್ಸ್ ಎಂಬಲ್ಲಿ ಕಪ್ಪುಜನರನ್ನು ಗಲ್ಲಿಗೆ ಏರಿಸಲಾಗುತ್ತಿತ್ತು. ಒಂದು ಸಲವಂತೂ ಒಬ್ಬ ಕಪ್ಪು ವ್ಯಕ್ತಿಯನ್ನು ಗಲ್ಲಿಗೇರಿಸಿದ ಮೇಲೆ ಜನರು ಅವನ ಚರ್ಮವನ್ನು ಸುಲಿದು ನೆನಪಿಗಾಗಿ ಇಟ್ಟುಕೊಂಡುದ್ದನ್ನು ಮಾಯಾ ತಮ್ಮ ಆತ್ಮಕತೆಯಲ್ಲಿ ನೆನಪಿಸಿಕೊಳ್ಳುತ್ತಾರೆ. ಈ ಭಯಾನಕ ವಾತಾವರಣದಲ್ಲಿ ಬೆಳೆದ ಮಾಯಾ ಅವರ ಪರಿಸರದಲ್ಲಿ ಸಮಾಧಾನದ ವಿಷಯವೆಂದರೆ ಒಂದು ಪುಸ್ತಕಾಲಯವಿತ್ತು. ಅಲ್ಲಿ ಬಾಲಕಿ ಮಾಯಾ ಅನೇಕ ಉತ್ತಮ ಪುಸ್ತಕಗಳನ್ನು ಓದಿದರು.
ಮಾಯಾ ಅವರ ಅಜ್ಜಿಯದು ಕರುಣಾಮಯಿ ವ್ಯಕ್ತಿತ್ವ. ಯಾವುದೇ ಹಿಂಸಾಮಯ ಘಟನೆ ನಡೆದಾಗಲೂ ಪುಟ್ಟ ಮಾಯಾಳ ಅಜ್ಜಿ ‘ಪ್ರಾರ್ಥನೆ ಮಾಡಿ’ ಎಂದು ಜನರಿಗೆ ತಿಳಿಸುತ್ತಿದ್ದರು. ಹೀಗೆ ದೈವವನ್ನು ಕುರಿತ ನಂಬಿಕೆ ಮಾಯಾಗೆ ಅಜ್ಜಿಯ ಮೂಲಕ ಬಾಲ್ಯದಲ್ಲೇ ರೂಢಿಗೊಂಡಿತು.
ಕಿರಿಯವಳಿದ್ದಾಗಲೇ ಓದಿನ ಹುಚ್ಚು ಹತ್ತಿಸಿಕೊಂಡ ಮಾಯಾಳ ಮನಸ್ಸಿನ ಮೇಲೆ ಪ್ರಭಾವ ಬೀರಿದವರಲ್ಲಿ ಚಾರ್ಲ್ಸ್ ಡಿಕನ್ಸ್, ಬ್ರಾಂಟೆ ಸಹೋದರಿಯರು ಮುಖ್ಯರು. ಬಿಳಿಯರ ಬಗ್ಗೆ ಸಹಜವಾಗಿಯೇ ಕಪ್ಪು ಜನರು ದ್ವೇಷ ಬೆಳೆಸಿಕೊಳ್ಳುವಂಥ ವಾತಾವರಣದಲ್ಲಿ ಬೆಳೆದ ಮಾಯಾಳನ್ನು ಅದರಿಂದ ಬಿಡುಗಡೆಗೊಳಿಸಿದ್ದು ಡಿಕನ್ಸ್ ಕಾದಂಬರಿಗಳು. ಎಲ್ಲರೂ ಮನುಷ್ಯರೇ, ಅವರಲ್ಲಿ ಒಳ್ಳೆಯವರು , ಕೆಟ್ಟವರು ಇರುತ್ತಾರೆ ಎಂಬ ಪಾಠವನ್ನು ಮಾಯಾಳಿಗೆ ಡಿಕನ್ಸ್ ಮೌನವಾಗಿ ಬೋಧಿಸಿದ. ಅವರ ಜೀವನ ಕಲ್ಲು ಮುಳ್ಳಿನಿಂದ ಕೂಡಿತ್ತು.
ಆದರೆ ಅವರೇ ಹೇಳುವಂತೆ ‘ಜೀವನದಲ್ಲಿ ಎಷ್ಟು ಸಲ ಸೋತೆನೆಂದು ಅನಿಸಿದರೂ ಸೋತೆ ಎಂದು ಭಾವಿಸಬಾರದು’. ಅವರು ಬಾಲ್ಯದಲ್ಲಿ ಅನುಭವಿಸದ ಸಂಕಟಗಳಿಲ್ಲ. ಬಡತನ, ಒಂದು ಕಡೆಯಾದರೆ, ವರ್ಣಭೇದ ನೀತಿಯಿಂದಾಗುವ ಅವಮಾನ ಇನ್ನೊಂದು ಕಡೆಯಲ್ಲಿ ಅವರನ್ನು ಕಾಡಿತು.
ಇನ್ನೂ ದುರಂತವೆಂದರೆ ಕುಸುಮ ಕೋಮಲವಾದ ಏಳನೇ ವಯಸ್ಸಿನಲ್ಲಿ ಅವರು ಅತ್ಯಾಚಾರಕ್ಕೆ ಒಳಗಾದರು, ಅದರಲ್ಲಿನ ದುರಂತವೆಂದರೆ ಅವರ ತಾಯಿಯ ಗೆಳೆಯನೇ ಈ ಹೀನ ಕೃತ್ಯ ಎಸಗಿದ್ದು!
ಈ ವಿಷಯ ತಿಳಿದ ಜನರು ಅತ್ಯಾಚಾರಿಯನ್ನು ಮಾಯಾ ಕಣ್ಣೆದುರೇ ಹೊಡೆದು ಕೊಂದರು. ಈ ಘಟನೆ ಅವರನ್ನು ಬೆಚ್ಚಿ ಬೀಳಿಸಿತು. ಮಾಯಾ ಅಲ್ಲಿಂದ ಹಲವು ವರ್ಷಗಳ ಕಾಲ ಮಾತೇ ಆಡಲಿಲ್ಲ.
ಮುಂದೆ ಅವರು ಬರೆದ ಅಪಾರ ಪ್ರಮಾಣದ ಸಾಹಿತ್ಯಕ್ಕೆ, ಕ್ರಿಯಾಶೀಲ ಬದುಕಿಗೆ ಕಸುವು ದೊರೆತದ್ದು ಈ ಮೌನಗರ್ಭದಿಂದಲೇ. ಕಪ್ಪು ಜನರು ತಮ್ಮ ಭಾಷೆ, ಸಂಗೀತ, ಅಸ್ಮಿತೆ ಯಾವುದನ್ನೂ ಕಳೆದುಕೊಳ್ಳಬಾರದು. ಬಿಳಿಯರಿಂದ ಆಗಿರುವ ಹಿಂಸೆಯನ್ನು ಎದುರಿಸಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಜಗತ್ತಿನ ಉಳಿದ ಜನಾಂಗದ ಜನರು ಅವರನ್ನು ವಿಸ್ಮಯ, ಗೌರವಗಳಿಂದ ನೋಡುವಂತೆ ಮಾಡಬೇಕೆಂಬುದು ಮಾಯಾ ಅವರ ಕನಸಾಯಿತು.
ಬದುಕಲು ಅವರು ಅನೇಕ ಕೆಲಸಗಳನ್ನು ಮಾಡಿದರು. ಮನೆಗೆಲಸದವಳಾಗಿ, ಕೇಬಲ್ ಕಾರ್ ಕಂಡಕ್ಟರ್ ಆಗಿ, ಹೋಟೆಲಿನ ಪರಿಚಾರಕಿಯಾಗಿ, ಅಡುಗೆಯವಳಾಗಿ, ರಾತ್ರಿ ಕ್ಲಬ್ಗಳಲ್ಲಿ ಹಾಡುವವಳಾಗಿ ದುಡಿದರು. ಇದರ ಜತೆಗೆ ಕಿರಿ ವಯಸ್ಸಿನಲ್ಲಿ ಒಬ್ಬಂಟಿ ತಾಯಿಯ ಹೊರೆಯನ್ನೂ ಹೊತ್ತರು. ಆದರೆ ಅವರು ಯಾವುದನ್ನೂ ತಿರಸ್ಕರಿಸದೆ ಸವಾಲಾಗಿ ತೆಗೆದುಕೊಂಡರು.
ಮುಂದೆ ಅನೇಕರು ಅವರನ್ನು ಸಂದರ್ಶನ ಮಾಡಿದವರು ಆಕೆಯ ಅಪಾರ ಆತ್ಮವಿಶ್ವಾಸವನ್ನು ಕೊಂಡಾಡಿದ್ದಾರೆ. ಅದರ ಮೂಲವಿರುವುದು ಹದಿಹರೆಯದಲ್ಲಿ, ಆಕೆ ಎದುರಿಸಿದ ಸವಾಲು ಮತ್ತು ಪ್ರತಿಕ್ರಿಯಿಸಿದ ರೀತಿಯಲ್ಲಿ.
ಮುಂದೆ ಅನೇಕರು ಅವರನ್ನು ಸಂದರ್ಶನ ಮಾಡಿದವರು ಆಕೆಯ ಅಪಾರ ಆತ್ಮವಿಶ್ವಾಸವನ್ನು ಕೊಂಡಾಡಿದ್ದಾರೆ. ಅದರ ಮೂಲವಿರುವುದು ಹದಿಹರೆಯದಲ್ಲಿ, ಆಕೆ ಎದುರಿಸಿದ ಸವಾಲು ಮತ್ತು ಪ್ರತಿಕ್ರಿಯಿಸಿದ ರೀತಿಯಲ್ಲಿ.
ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ರಂತೆ, ಶಿವರಾಮ ಕಾರಂತರಂತೆ ಹಲವು ಪ್ರಯೋಗಗಳಿಗೆ ಒಡ್ಡಿಕೊಂಡ ಹಿರಿಯ ಚೇತನ ಮಾಯಾ ಏಂಜೆಲೊ. ಆಕೆ ಬದುಕು ರೆಕ್ಕೆ ಸುಟ್ಟಾಗಲೆಲ್ಲ ಮತ್ತೆ ಮತ್ತೆ ಫೀನಿಕ್ಸ್ ಹಕ್ಕಿಯಂತೆ ಎದ್ದುಬಂದರು.
ಕವಿಯಾಗಿ, ಹಾಡುಗಾರ್ತಿಯಾಗಿ, ನಟಿಯಾಗಿ ಹೆಸರು ಮಾಡಿದರು. ಅವರ ಬದುಕಿನ ಅನುಭವ ಎಷ್ಟು ವಿಶಾಲ, ಸಂಕೀರ್ಣವಾಗಿತ್ತೆಂದರೆ ಆಕೆಯ ಮೊದಲ 40 ವರ್ಷಗಳ ಜೀವನ ಹಲವು ಸಂಪುಟಗಳ ಆತ್ಮಕತೆಯಾಗಿ ಹೊರಬಂತು. ಅದರಲ್ಲಿ ಒಂದರ ಹೆಸರು ‘ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ.’ ಜಗತ್ತಿನ ಲಕ್ಷಾಂತರ ಜನರ ಜೀವನದ ಮೇಲೆ ಈ ಕೃತಿಗಳು ಇಂದಿಗೂ ಪ್ರಭಾವ ಬೀರುತ್ತಿವೆ.
ಜೀವನದ ಹೋರಾಟ ಮತ್ತು ಕಪ್ಪು ಜನರ ಪರವಾಗಿ ಕೈಗೊಂಡ ಹೋರಾಟ ಅವರನ್ನು ಬೇರೆ ಬೇರೆ ದೇಶಗಳಿಗೆ ಕರೆದುಕೊಂಡು ಹೋಯಿತು.
ಜೀವನದ ಹೋರಾಟ ಮತ್ತು ಕಪ್ಪು ಜನರ ಪರವಾಗಿ ಕೈಗೊಂಡ ಹೋರಾಟ ಅವರನ್ನು ಬೇರೆ ಬೇರೆ ದೇಶಗಳಿಗೆ ಕರೆದುಕೊಂಡು ಹೋಯಿತು.
ಆಕೆ ಶಿಕ್ಷಕಿಯಾಗಿ, ಲೇಖಕಿಯಾಗಿ ತಮ್ಮನ್ನು ಜನ ಗುರುತಿಸಲಿ ಎಂದು ಇಷ್ಟಪಡುತ್ತಿದ್ದರು.
ಮಾಯಾ ಎಷ್ಟು ಪ್ರಭಾವಶಾಲಿಯಾಗಿದ್ದರೆಂದರೆ ಒಮ್ಮೆ ಅಮೆರಿಕದ ಬಾಕ್ಸಿಂಗ್ ಪಟು ಮೈಕ್ ಟೈಸನ್ ಸೆರೆವಾಸದಲ್ಲಿದ್ದಾಗ ಮಾಯಾ ಅವರನ್ನು ನೋಡಬೇಕು ಎಂದು ಆಸೆ ಪಟ್ಟರು. ಜೈಲಿನ ಅಧಿಕಾರಿಗಳು ಇವರಿಬ್ಬರ ಭೇಟಿಗೆ ಏರ್ಪಾಡು ಮಾಡಿದರು. ಆ ದಿನಗಳಲ್ಲಿ ಟೈಸನ್ ಬಹಳ ಓದಲು ಆರಂಭಿಸಿದ್ದರು. ಮಾಯಾ ಅವರಿಗೆ ಅನೇಕ ಒಳ್ಳೆಯ ಲೇಖಕರನ್ನು ಓದಲು ಹುರಿದುಂಬಿಸಿದರು.
ಮಾಯಾ ಎಷ್ಟು ಪ್ರಭಾವಶಾಲಿಯಾಗಿದ್ದರೆಂದರೆ ಒಮ್ಮೆ ಅಮೆರಿಕದ ಬಾಕ್ಸಿಂಗ್ ಪಟು ಮೈಕ್ ಟೈಸನ್ ಸೆರೆವಾಸದಲ್ಲಿದ್ದಾಗ ಮಾಯಾ ಅವರನ್ನು ನೋಡಬೇಕು ಎಂದು ಆಸೆ ಪಟ್ಟರು. ಜೈಲಿನ ಅಧಿಕಾರಿಗಳು ಇವರಿಬ್ಬರ ಭೇಟಿಗೆ ಏರ್ಪಾಡು ಮಾಡಿದರು. ಆ ದಿನಗಳಲ್ಲಿ ಟೈಸನ್ ಬಹಳ ಓದಲು ಆರಂಭಿಸಿದ್ದರು. ಮಾಯಾ ಅವರಿಗೆ ಅನೇಕ ಒಳ್ಳೆಯ ಲೇಖಕರನ್ನು ಓದಲು ಹುರಿದುಂಬಿಸಿದರು.
ಅನೇಕ ಗಣ್ಯರು ಮಾಯಾ ಅವರ ಸ್ನೇಹಿತರಾಗಿದ್ದರು. ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ (ಜೂನಿಯರ್) ಮತ್ತು ಮಾಲ್ಕಂ ಜತೆ ಮಾಯಾ ಕೆಲಸ ಮಾಡಿದ್ದರು.
ಫೆಬ್ರುವರಿ 2011ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮಾಯಾ ಏಂಜೆಲೊ ಅವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಪ್ರೆಸಿಡೆಂಟಲ್ ಮೆಡಲ್ ಆಫ್ ಫ್ರೀಡಂ’ ನೀಡಿ ಗೌರವಿಸಿದ್ದರು.
ಅಂತರಂಗದ ದನಿಗೆ ಕಿವಿಗೊಡಿ ಎಂದು ಮತ್ತೆಮತ್ತೆ ಹೇಳುತ್ತಿದ್ದ ಮಾಯಾ 2014ರಲ್ಲಿ ಒಂದು ಟ್ವೀಟ್ ನಲ್ಲಿ ಹೀಗೆ ಹೇಳಿದ್ದರು:‘ ನಿಮ್ಮ ಒಳದನಿಗೆ ಕಿವಿಗೊಡಿ. ಆಗ ಆ ಶಾಂತಿಯಲ್ಲಿ ನಿಮಗೆ ದೇವರು ಕಾಣಬಹುದು’. ಅನ್ಯಾಯಕ್ಕೆ ಎಂದೂ ತಲೆಬಾಗಿಸದ ಎಚ್ಚರದ ಸಂಕೇತವಾಗಿ, ಶೋಷಿತರ ಪರ ದನಿಯಾಗಿ ಸದಾ ಮಾಯಾ ಏಂಜೆಲೊ ನೆನಪು ನಮ್ಮೊಳಗೆ ಮಾರ್ದನಿಸುತ್ತಿರುತ್ತದೆ.
ಪಾಕಿಸ್ತಾನ: ಸುದ್ದಿ ಮಾಧ್ಯಮಗಳ ಮಧ್ಯೆ ಸಂಘರ್ಷಪಾಕಿಸ್ತಾನದ ಸುದ್ದಿ ಮಾಧ್ಯಮಗಳ ಕಲಹಕ್ಕೆ ಕೊನೆಗೂ ತಾತ್ಕಾಲಿಕವಾಗಿ ಕಡಿವಾಣ ಬಿದ್ದಿದೆ. ಅತ್ಯಂತ ಜನಪ್ರಿಯ ಸುದ್ದಿ ಚಾನೆಲ್ ‘ಜಿಯೋ ನ್ಯೂಸ್’ಗೆ ಕಳೆದ ವಾರ ನಿಷೇಧ ಹೇರಲಾಯಿತು. ಈ ಮೂಲಕ ಪರಸ್ಪರ ಪ್ರತಿಸ್ಪರ್ಧಿ ಚಾನೆಲ್ಗಳ ಕೆಸರೆರಚಾಟಕ್ಕೆ ಒಂದು ತಿಂಗಳ ನಂತರ ದೇಶದ ಮಾಧ್ಯಮ ನಿಯಂತ್ರಣ ಮಂಡಳಿ ಅಂತ್ಯ ಹಾಡಿತು. ಜಿಯೋ ನ್ಯೂಸ್ ಮುಚ್ಚಬೇಕು ಎಂದು ತೀವ್ರ ಒತ್ತಡ ಹೇರುತ್ತಿದ್ದ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐಗೆ ಕೊಂಚ ಮುನ್ನಡೆ ಸಿಕ್ಕಂತಾಗಿತ್ತು.
ಆದರೆ ಜಿಯೋ ಮೇಲಿನ ನಿರ್ಬಂಧ ತಾತ್ಕಾಲಿಕವಾಗಿತ್ತು. ಪ್ರಧಾನಿ ನವಾಜ್ ಷರೀಫ್ ಅವರ ಸರ್ಕಾರದ ಬೆಂಬಲಿಗರನ್ನೊಳಗೊಂಡ ಮಾಧ್ಯಮ ನಿಯಂತ್ರಣ ಮಂಡಳಿ, ತಾನು ಹೇರಿದ್ದ ನಿಷೇಧವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆಯಿತು. ‘ಕೆಲ ಅಧಿಕಾರಿಗಳು ಕೈಗೊಂಡ ಕಾನೂನುಬಾಹಿರ ಕ್ರಮ ಇದು. ಜಿಯೋ ಟಿ.ವಿ ಪ್ರಸಾರ ಮುಂದುವರಿಸಬಹುದು’ ಎಂದು ಸಮಜಾಯಿಷಿ ನೀಡಿತು.
ಜಿಯೋ ನ್ಯೂಸ್ನ ಖ್ಯಾತ ಕಾರ್ಯಕ್ರಮ ನಿರೂಪಕ ಹಮೀದ್ ಮೀರ್ ಅವರ ಮೇಲೆ ಕಳೆದ ತಿಂಗಳು ನಡೆದ ಗುಂಡಿನ ದಾಳಿಯ ಹಿಂದೆ ಐಎಸ್ಐ ಕೈವಾಡವಿದೆ ಎಂದು ಜಿಯೋ ಮಾಡುತ್ತಿರುವ ಆರೋಪಕ್ಕೆ ಪ್ರತಿಯಾಗಿ, ತಮ್ಮ ಪ್ರಬಲ ಎದುರಾಳಿ ಜಿಯೋವನ್ನು ಮಣಿಸುವ ಸುಸಂದರ್ಭ ಇದು ಎಂದು ತಿಳಿದ ಎದುರಾಳಿ ಚಾನೆಲ್ಗಳು ಐಎಸ್ಐ ಬೆಂಬಲಕ್ಕೆ ನಿಂತವು. ಪ್ರಭಾವಿ ಮಾಧ್ಯಮಗಳ ಸಮರದಿಂದಾಗಿ ಗುಂಡಿನ ದಾಳಿ ಪ್ರಕರಣ ದೊಡ್ಡದಾಗಿ ಬಿಂಬಿಸಲ್ಪಟ್ಟಿತು.
ಜಿಯೋ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳು ಭಾರತ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ವಿಚಾರಧಾರೆಯಿಂದ ಪ್ರಭಾವಿತವಾದವು ಎಂದು ವಿರೋಧಿ ಚಾನೆಲ್ಗಳು ನಿರಂತರವಾಗಿ ಖಂಡಿಸುತ್ತಿದ್ದವು. ಅಲ್ಲದೇ, ತಮ್ಮನ್ನು ಟೀಕಿಸುತ್ತಿದ್ದ ಜಿಯೋ ವಿರುದ್ಧ ದನಿಯೆತ್ತಿದ ಇಸ್ಲಾಮಿಕ್ ಉಗ್ರವಾದಿಗಳು ಇವಕ್ಕೆ ಬೆಂಬಲ ಸೂಚಿಸಿ ಐಎಸ್ಐ ಪರ ನಿಂತಿದ್ದಾರೆ. ನಿಷೇಧಿತ ಉಗ್ರರ ಸಂಘಟನೆ ಲಷ್ಕರ್ –-ಎ –-ತೈಯಬಾ ಮುಖಂಡ ಹಫೀಜ್ ಸಯೀದ್ ಕೂಡ ಇವರೊಂದಿಗೆ ಕೈ ಜೋಡಿಸಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಜಿಯೋ ನ್ಯೂಸ್ನ್ನು ಬಗ್ಗುಬಡಿಯಲೆಂದೇ ನಡೆದ ಈ ‘ಪ್ರಹಸನ’ವು ಅಧಿಕಾರದಲ್ಲಿರುವವರು ಮತ್ತು ಸೇನಾ ಮುಖ್ಯಸ್ಥರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ಅಧಿಕಾರ ವಹಿಸಿಕೊಂಡ ಒಂದು ವರ್ಷದ ಅವಧಿಯಲ್ಲಿ ಪ್ರಧಾನಿ ನವಾಜ್ ಷರೀಫ್ ಅವರು, ಸೇನೆಯ ಮಾಜಿ ಮುಖ್ಯಸ್ಥ ಪರ್ವೇಜ್ ಮುಷರಫ್ ಮೇಲಿನ ದೇಶದ್ರೋಹದ ಆರೋಪ ಹಾಗೂ ತಾಲಿಬಾನ್ ಶಾಂತಿ ಮಾತುಕತೆ ಸೇರಿದಂತೆ ಹಲವು ವಿಚಾರ ಸಂಬಂಧ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಅವರೊಂದಿಗೆ ತಿಕ್ಕಾಟದಲ್ಲಿ ತೊಡಗಿದ್ದಾರೆ. ಇದಕ್ಕೆ ಈಗ ಹೊಸ ಸೇರ್ಪಡೆ ಜಿಯೋ ಮೇಲಿನ ನಿರ್ಬಂಧದ ಪ್ರಕರಣ.
‘ಮಾಧ್ಯಮ ಸಮರ ತೀಕ್ಷ್ಣ ಮತ್ತು ನಾಟಕೀಯವಾದದ್ದು. ಆದರೆ ಇಲ್ಲಿರುವ ಪ್ರಮುಖ ಸಂಗತಿ ಇದಲ್ಲ. ವಿಶಾಲ ಅರ್ಥದಲ್ಲಿ ಹೇಳುವುದಾದರೆ ಇದು ಪ್ರಧಾನಿ ಮತ್ತು ಸೇನೆ ನಡುವಣ ಸಂಘರ್ಷ’ ಎಂಬುದು ರಾಜಕಾರಣಿ ಅಯಾಜ್ ಅಮೀರ್ ಅವರ ವಿಶ್ಲೇಷಣೆ.
ಸುದ್ದಿ ಪ್ರಸಾರ ಹಾಗೂ ವೀಕ್ಷಕರ ಸಂಖ್ಯೆಯ ದೃಷ್ಟಿಯಿಂದ ಕಳೆದೊಂದು ದಶಕದಿಂದ ಮೀರ್ ಶಕೀಲ್ ಉರ್ ರೆಹಮಾನ್ ಒಡೆತನದ ಜಿಯೋ ವ್ಯಾಪ್ತಿ ವಿಶಾಲವಾದದ್ದು. ಭಾರಿ ಪ್ರಮಾಣದ ಆದಾಯವನ್ನು ‘ಬಾಚಿಕೊಳ್ಳುತ್ತಿದೆ’ ಎಂದೇ ಹೇಳಬೇಕು.
ಪಾಕಿಸ್ತಾನದ ರಾಜಕಾರಣದಲ್ಲಿ ಸೇನೆಯ ಹಸ್ತಕ್ಷೇಪ ಮೊದಲಿನಿಂದಲೂ ಇದ್ದಿದ್ದೇ. ಆದರೆ ಜಿಯೋ ತನ್ನ ಪ್ರಭಾವದಿಂದಾಗಿ ಸೇನೆಯ ಹಸ್ತಕ್ಷೇಪವನ್ನು ಸಮರ್ಥವಾಗಿ ಟೀಕೆಗೊಳಪಡಿಸುತ್ತಿತ್ತು.
೨೦೧೧ರಲ್ಲಿ ಅಮೆರಿಕ ಸೇನೆ ಪಾಕಿಸ್ತಾನ ನೆಲದಲ್ಲಿ ಕಾರ್ಯಾಚರಣೆ ನಡೆಸಿ ಒಸಾಮಾ ಬಿನ್ ಲಾಡೆನ್ನ ಹತ್ಯೆ ಮಾಡಿತ್ತು. ಇಂತಹ ಘಟನೆಗಳನ್ನಿಟ್ಟುಕೊಂಡು ಸೇನೆ ಮೇಲೆ ಜಿಯೋ ಮುಗಿಬಿದ್ದಿತ್ತು. ಕೆಲ ಸೇನಾಧಿಕಾರಿಗಳು ಇದರ ಆಹಾರವಾಗಿದ್ದೂ ಉಂಟು.
ಇದರ ಹಿನ್ನೆಲೆಯಲ್ಲಿ ಯಶಸ್ಸಿನ ಜತೆ ಜತೆಗೇ ಸಾಕಷ್ಟು ಶತ್ರುಗಳೂ ಜಿಯೋ ಚಾನೆಲ್ನ ಬೆನ್ನು ಹತ್ತಿದ್ದಾರೆ.
ಇದರ ಹಿನ್ನೆಲೆಯಲ್ಲಿ ಯಶಸ್ಸಿನ ಜತೆ ಜತೆಗೇ ಸಾಕಷ್ಟು ಶತ್ರುಗಳೂ ಜಿಯೋ ಚಾನೆಲ್ನ ಬೆನ್ನು ಹತ್ತಿದ್ದಾರೆ.
ಕೆಲ ದಿನಗಳ ಹಿಂದೆ ಜಿಯೋ ನ್ಯೂಸ್ನ ಮನರಂಜನಾ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ನಟಿ ವೀಣಾ ಮಲಿಕ್ ಅವರ ವಿವಾಹದ ‘ಮರುಸೃಷ್ಟಿ’ಯ ಪ್ರಸಾರ ಆದಾಗ ಹಿನ್ನೆಲೆಯಲ್ಲಿ ಧಾರ್ಮಿಕ ಶ್ಲೋಕಗಳು ಕೇಳಿಬರುತ್ತಿತ್ತು. ಜನಪ್ರಿಯತೆಗಾಗಿ ಏನನ್ನಾದರೂ ಮಾಡುತ್ತೇನೆಂಬ ವೀಣಾ ಧೋರಣೆ ಧಾರ್ಮಿಕ ಮುಖಂಡರನ್ನು ಕೆರಳಿಸಿತು. ಅಲ್ಲದೇ ಧರ್ಮನಿಂದನೆಯ ವಿವಾದವನ್ನೂ ಅದು ಹುಟ್ಟುಹಾಕಿತು. ಉಳಿದ ಮಾಧ್ಯಮಗಳು ಇಂತಹ ಒಂದು ಸುವರ್ಣಾವಕಾಶಕ್ಕಾಗಿ ಕಾಯುತ್ತಿದ್ದವರಂತೆ ಈ ವಿಚಾರವನ್ನು ದೊಡ್ಡದು ಮಾಡಿದ ಕಾರಣ ಅದು ದೊಡ್ಡ ಸುದ್ದಿಯಾಯಿತು.
ವೀಣಾ ಈ ಹಿಂದೆ ತೋಳುಗಳ ಮೇಲೆ ಐಎಸ್ಐ ಎಂದು ಬರೆಸಿಕೊಂಡು ಅರೆನಗ್ನರಾಗಿ ಭಾರತದ ನಿಯತಕಾಲಿಕೆಯೊಂದರ ಮುಖ ಪುಟದಲ್ಲಿ ಕಾಣಿಸಿಕೊಂಡಿದ್ದರು. ಆಗಲೂ ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಂತಹ ನಟಿಗೆ ಕಾರ್ಯಕ್ರಮದಲ್ಲಿ ಅವಕಾಶ ನೀಡಿದ್ದು ಅದರ ವಿರುದ್ಧ ರೋಷ ಹೆಚ್ಚಲು ಕಾರಣವಾಯಿತು.
ಪಾಕಿಸ್ತಾನದಲ್ಲಿ ಜಾಹೀರಾತಿನ ಬಹುಪಾಲು ಆದಾಯವನ್ನು ಜಿಯೋ ಒಂದೇ ಗಳಿಸುತ್ತದೆ. ಚಿಕ್ಕ ಪುಟ್ಟ ಚಾನೆಲ್ಗಳು ಅದಕ್ಕೆ ಪೈಪೋಟಿ ನೀಡಲಾಗದೇ ಸೊರಗುತ್ತಿವೆ. ಹೀಗಾಗಿ ಇದುವರೆಗೆ ಜಿಯೋ ಮೇಲೆ ವ್ಯಾವಹಾರಿಕ ದೃಷ್ಟಿಕೋನದಿಂದ ಆರೋಪಗಳ ಸುರಿಮಳೆಗರೆಯುತ್ತಿದ್ದ ಪ್ರತಿಸ್ಪರ್ಧಿಗಳಿಗೆ ಈ ವಿಚಾರದಲ್ಲಿ ಐಎಸ್ಐ ಕುಮ್ಮಕ್ಕೂ ದೊರೆಯಿತು. ಇದು ತೀರಾ ನಿಂದನೆಯ ಸ್ವರೂಪ ಪಡೆದು, ಸಂಘರ್ಷ ದಿಕ್ಕು ತಪ್ಪಿತು.
ವೈಯಕ್ತಿಕ ಟೀಕೆ: ವೀಣಾ ಮಲಿಕ್ ಅವರ ಕಾರ್ಯಕ್ರಮದಲ್ಲಿ ಧಾರ್ಮಿಕ ನಿಂದನೆಯ ಅಂಶಗಳಿವೆ ಎಂದು ತೀರ್ಮಾನಿಸಿದ ಧಾರ್ಮಿಕ ಮುಖಂಡರು, ಜಿಯೋ ವಿರುದ್ಧ ಧರ್ಮನಿಂದನೆಯ ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಹಮೀದ್ ಮೀರ್ ಅವರ ವಿರುದ್ಧ ಅವಹೇಳನಕಾರಿ ಟೀಕೆಗಳು ಹರಿದಾಡತೊಡಗಿವೆ. ತೀವ್ರ ಪೈಪೋಟಿ ನೀಡುತ್ತಿರುವ ಚಾನೆಲ್ ಎಆರ್ವೈನ ನಿರೂಪಕ ಮುಬಾಷೆರ್ ಲುಕ್ಮನ್ ಅವರಿಗಂತೂ ಜಿಯೋ ಮೇಲೆ ವಾಗ್ದಾಳಿ ನಡೆಸುವುದು ಒಂದು ಚಾಳಿಯೇ ಆಗಿದೆ.
ಬಿಕ್ಕಟ್ಟುಗಳ ಮಧ್ಯೆ ಜಿಯೋ ಜನಪ್ರಿಯತೆ ಕುಂದಿದೆ. ಕೆಲ ಕೇಬಲ್ ನಿರ್ವಾಹಕರು ಜಿಯೋವನ್ನು ಮೂಲೆಗುಂಪು ಮಾಡಿದ್ದರೆ ಇನ್ನು ಕೆಲವರು ಪ್ರಸಾರವನ್ನೇ ಸ್ಥಗಿತಗೊಳಿಸಿದ್ದಾರೆ. ಜಾಹೀರಾತುದಾರರು ಜಿಯೋಗೆ ಬೆನ್ನು ಮಾಡಿದ್ದಾರೆ. ಮಾಲೀಕ ರೆಹಮಾನ್ ದುಬೈನಲ್ಲಿ ವಾಸವಾಗಿದ್ದಾರೆ. ಪಾಕಿಸ್ತಾನದಲ್ಲಿದ್ದು ಚಾನೆಲ್ನ ಜವಾಬ್ದಾರಿ ಹೊತ್ತಿದ್ದ ಅವರ ಮಗ ಇಬ್ರಾಹಿಂ ಕೂಡ ಈಗ ಅಲ್ಲಿಗೇ ಪಲಾಯನ ಮಾಡಿದ್ದಾರೆ.
ಇಷ್ಟೆಲ್ಲ ಆದ ನಂತರ ನಟಿ ವೀಣಾ ಅವರ ಕಾರ್ಯಕ್ರಮ, ಪತ್ರಕರ್ತ ಹಮೀದ್ ಮೀರ್ ಹತ್ಯೆ ಯತ್ನ ಪ್ರಕರಣದ ಸಂಬಂಧದ ಐ ಎಸ್ ಐ ಮೇಲೆ ಮಾಡಿದ ಆರೋಪ ಸಂಬಂಧ ಜಿಯೋ ಐಎಸ್ಐ ಹಾಗೂ ಸೇನೆಯ ಕ್ಷಮೆ ಯಾಚಿಸಿದೆ. ಕಠಿಣ ಶಿಕ್ಷೆ ಎದುರಿಸುವುದಾಗಿ ಹೇಳಿಕೊಂಡಿದೆ. ಸೇನೆಯೊಂದಿಗೆ ಸಂಬಂಧ ಕೆಡಿಸಿಕೊಂಡ ಪ್ರಧಾನಿ ನವಾಜ್ ಜಿಯೋ ಪರ ನಿಂತಿದ್ದಾರೆ. ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಹೊಸ ಪರಿಕಲ್ಪನೆ ಹಿರಿಯ ಪತ್ರಕರ್ತರಲ್ಲಿ ಆತಂಕ ಸೃಷ್ಟಿಸಿದೆ.
‘ಸಂಘರ್ಷ ಹೀಗೆಯೇ ಮುಂದುವರೆದರೆ ದೇಶದ ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಗೆ ಧಕ್ಕೆ ಉಂಟಾಗುತ್ತದೆ’ ಎಂದು ಇಂಗ್ಲಿಷ್ ಪತ್ರಿಕೆ ‘ಡಾನ್’ ಎಚ್ಚರಿಸಿದೆ.>>
ವಿಮಾನ ನಾಪತ್ತೆ: ಶೋಧಕ್ಕೆ ದೈತ್ಯ ಸವಾಲುನಿಗೂಢವಾಗಿ ನಾಪತ್ತೆಯಾದ ಮಲೇಷ್ಯಾ ವಿಮಾನ, ವಿಜ್ಞಾನದಲ್ಲಿ ಮಾನವನ ಸಾಧನೆಗಳನ್ನು ಒಂದು ಹಿಡಿಯಲ್ಲಿ ನಿವಾಳಿಸಿ ಹಾಕಿತೆ? ಮಾನವ ಪ್ರಕೃತಿ ಮುಂದೆ ಇನ್ನೂ ಕುಬ್ಜ ಎಂದು ಅಣಕವಾಡಿತೆ? ತನಿಖೆ ಮತ್ತು ಶೋಧ ಕಾರ್ಯದ ದಿಕ್ಕುದಿಸೆಯನ್ನು ಕ್ಷಣ ಕ್ಷಣಕ್ಕೂ ತಪ್ಪಿಸಿದ, ಇದೇ ಹೊತ್ತಿಗೆ ತಿಂಗಳುಗಟ್ಟಲೆ ನಡೆದ ಭಾರಿ ಕಾರ್ಯಾಚರಣೆಯಿಂದ ಕೋಟಿಗಟ್ಟಲೆ ಹಣವನ್ನು ಸಾಗರದಲ್ಲಿ ಹೋಮ ಮಾಡಿದಂತಾಗಿದೆ.ನಿಗೂಢವಾಗಿ ಕಣ್ಮರೆಯಾದ ಮಲೇಷ್ಯಾ ವಿಮಾನ ಇಡೀ ಮಾಹಿತಿ ತಂತ್ರಜ್ಞಾನ ರಂಗಕ್ಕೇ ಕಠಿಣ ಸವಾಲೊಡ್ಡುತ್ತದೆ ಎಂದು ಬಹುಶಃ ಯಾರೂ ಭಾವಿಸಿರಲಿಲ್ಲ.
ಇದು ವಿಮಾನ ಅಪಹರಣದ ಕೃತ್ಯ, ಭಯೋತ್ಪಾದಕರೇ ಇದನ್ನು ಮಾಡಿರಬಹುದು ಎಂಬುದೇ ಮೊದಲು ಎಲ್ಲರ ಶಂಕೆ ಆಗಿತ್ತು. ಮೂರು ನಾಲ್ಕು ದಿನ ಕಳೆದರೂ ಈ ಅಂಶ ದೃಢವಾಗದಿದ್ದಾಗ ಸಂಶಯ ಪೈಲಟ್, ಸಿಬ್ಬಂದಿ ವರ್ಗ ಮತ್ತು ಪ್ರಯಾಣಿಕರ ಮೇಲೆ ಮೂಡಿತು. ತಾಂತ್ರಿಕ ದೋಷದಿಂದ ವಿಮಾನ ಸ್ಫೋಟಗೊಂಡಿರಬೇಕು... ಈ ರೀತಿ ಏನೆಲ್ಲಾ ಸಂದೇಹಗಳು ಅಧಿಕಾರಸ್ಥರಲ್ಲಿ ಮನೆ ಮಾಡಿದವು. ಆದರೆ, ಇದ್ಯಾವುದೂ ಸ್ಥಿರಗೊಳ್ಳಲಿಲ್ಲ.
ವಿಮಾನ ನಾಪತ್ತೆಯಾಗಿ ಹತ್ತು ವಾರಗಳು ಕಳೆದರೂ ಅದರ ಭಗ್ನಾವಶೇಷಗಳಿರಲಿ, ವಿಮಾನ ನಾಪತ್ತೆಗೆ ನಿಖರ ಕಾರಣ ಇನ್ನೂ ಗೊತ್ತೇ ಆಗಿಲ್ಲ! ವಿಮಾನದ ಬಗ್ಗೆ ಕರಾರುವಾಕ್ಕು ಸುಳಿವು ನೀಡುವಂತಹ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ.
ದಿನದಿಂದ ದಿನಕ್ಕೆ ಎದುರಾದ ಕಠಿಣ ಸವಾಲುಗಳು, ಗೊಂದಲ ಮೂಡಿಸುವ ಅರೆಬರೆ ಮಾಹಿತಿಗಳು ವಿಮಾನ ಶೋಧ ಕಾರ್ಯ ಮತ್ತು ವಿಮಾನದ ಭಗ್ನಾವಶೇಷಕ್ಕೆ ಅವಿರತ ಹುಡುಕಾಟ ನಡೆಸಿದ ಅಂತರರಾಷ್ಟ್ರೀಯ ಮಟ್ಟದ ತನಿಖಾ ತಂಡಗಳನ್ನು ಕಂಗಾಲು ಮಾಡಿದ್ದು ಸುಳ್ಳಲ್ಲ.
ಅಂಡಮಾನ್ ಸಮುದ್ರದಿಂದ ದಕ್ಷಿಣ ಚೀನಾ ಸಮುದ್ರದವರೆಗೆ, ದಕ್ಷಿಣ ಹಿಂದೂ ಮಹಾಸಾಗರದ ಪರ್ಯಂತ ಹಾಗೂ ಉತ್ತರದ ಕಜಕಸ್ತಾನ, ತುರ್ಕಮೇನಿಸ್ತಾನಗಳ ಗಡಿಯಿಂದ ದಕ್ಷಿಣದ ಶ್ರೀಲಂಕಾ, ಇಂಡೊನೇಷ್ಯಾಗಳಿಂದ ನ್ಯೂಜಿಲೆಂಡ್ ಅಂಚಿನವರೆಗೆ 11 ರಾಷ್ಟ್ರಗಳ ಭೂ, ಜಲ ಗಡಿಗಳಲ್ಲಿ ತಡಕಾಡಿದರೂ ವಿಮಾನದ ಬಗ್ಗೆ ನಿಖರ ಸುಳಿವು ದೊರಕಲೇ ಇಲ್ಲ. 26 ರಾಷ್ಟ್ರಗಳ ಸಹಯೋಗದಲ್ಲಿ ವಿಮಾನ ಪತ್ತೆಗಾಗಿ ನಡೆದ ಶೋಧ ಕಾರ್ಯ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿದೆ.
ನಾಪತ್ತೆಯಾದ ವಿಮಾನ ಮೂರು ವಾರಗಳಾದರೂ ಪತ್ತೆಯಾಗದೆ ಪ್ರಯಾಣಿಕರ ಬಂಧುಗಳ, ಅದರಲ್ಲೂ ಚೀನಾದವರ ಒತ್ತಡ ಹೆಚ್ಚಾದಾಗ ಮಲೇಷ್ಯಾ ಸರ್ಕಾರ ಆಸ್ಟ್ರೇಲಿಯಾದ ಪರ್ತ್ ಬಳಿಯ ಹಿಂದೂ ಮಹಾಸಾಗರದಲ್ಲಿ ಈ ವಿಮಾನ ಪತನವಾಗಿದೆ ಎಂದು ಮಾರ್ಚ್ 24ರಂದು ಅಧಿಕೃತವಾಗಿ ಘೋಷಿಸಿತು. ಆದರೆ, ವಿಮಾನದ ಭಗ್ನಾವಶೇಷ ಬಿದ್ದಿರುವ ಸ್ಥಳದ ಬಗ್ಗೆ ಖಚಿತವಾಗಿ ಹೇಳಲಿಲ್ಲ.
ತಾನು ಮಾಡಿದ ಘೋಷಣೆಗೆ ಜಾಗತಿಕವಾಗಿ ಮೊಬೈಲ್ ದೂರವಾಣಿಗಳಿಗೆ ಉಪಗ್ರಹ ಸಂವಹನ ಸೇವೆಗಳನ್ನು ಒದಗಿಸುವ ಬ್ರಿಟನ್ನಿನ ಉಪಗ್ರಹ ಆಧಾರಿತ ದೂರಸಂಪರ್ಕ ಕಂಪೆನಿ ‘ಇನ್ಮಾರ್ಸಾಟ್’, ನಾಪತ್ತೆಯಾದ ವಿಮಾನ ಉತ್ತರ ಇಲ್ಲವೆ ದಕ್ಷಿಣ ವಾಯು ಸಂಚಾರ ವಲಯದಲ್ಲಿ ಸಾಗಿರಬೇಕು ಎಂದಿರುವುದು ಮತ್ತು ಈ ಸುಳಿವನ್ನು ಆಧರಿಸಿ ‘ಬ್ರಿಟನ್ನಿನ ವಾಯು ಸಂಚಾರ ಅಪಘಾತ ಪ್ರಕರಣಗಳ ತನಿಖಾ ದಳ (ಎಎಐಬಿ) ತನ್ನ ಅತ್ಯಾಧುನಿಕ ಸಾಧನಗಳಿಂದ ವಿಮಾನವು ಹಿಂದೂ ಮಹಾಸಾಗರದ ದಕ್ಷಿಣ ಮಾರ್ಗದಲ್ಲೇ ಪತನವಾಗಿದೆ ಎಂದು ಹೇಳಿರುವುದು ಆಧಾರ ಎಂದು ಮಲೇಷ್ಯಾ ಹೇಳಿತು.
ಮೊದಲೇ ವಿಮಾನದ ಪ್ರಯಾಣಿಕರ ಬಂಧುಗಳ ಆಕ್ರೋಶವನ್ನು ಎದುರಿಸುತ್ತಿದ್ದ ಚೀನಾ, ಮಲೇಷ್ಯಾ ನೀಡಿದ ಈ ಅಸ್ಪಷ್ಟ ಹೇಳಿಕೆಯಿಂದ ಮತ್ತಷ್ಟು ಸಿಟ್ಟಿಗೆದ್ದಿತು. ವಿಮಾನ ಪತನವಾಗಿರುವುದಕ್ಕೆ ಖಚಿತ ಪುರಾವೆ ನೀಡುವಂತೆ ಆಕ್ರೋಶದಿಂದ ಕೇಳಿತು.
ಮೊದಲೇ ವಿಮಾನದ ಪ್ರಯಾಣಿಕರ ಬಂಧುಗಳ ಆಕ್ರೋಶವನ್ನು ಎದುರಿಸುತ್ತಿದ್ದ ಚೀನಾ, ಮಲೇಷ್ಯಾ ನೀಡಿದ ಈ ಅಸ್ಪಷ್ಟ ಹೇಳಿಕೆಯಿಂದ ಮತ್ತಷ್ಟು ಸಿಟ್ಟಿಗೆದ್ದಿತು. ವಿಮಾನ ಪತನವಾಗಿರುವುದಕ್ಕೆ ಖಚಿತ ಪುರಾವೆ ನೀಡುವಂತೆ ಆಕ್ರೋಶದಿಂದ ಕೇಳಿತು.
ವಿಮಾನ ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಪತನವಾಗಿದೆ ಎಂದು ಮಲೇಷ್ಯಾದ ಪ್ರಕಟಣೆಯಿಂದ ಆದ ಲಾಭ ಏನೆಂದರೆ 17 ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯಕ್ಕೆ ತಾರ್ಕಿಕ ಅಂತ್ಯ ದೊರೆಕಿದ್ದು. ಈ ಅವಧಿಯಲ್ಲಿ ನೂರಾರು ನೌಕೆಗಳು, ಯುದ್ಧ ವಿಮಾನಗಳು ಅಂದಾಜು 70.7 ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ವಿಮಾನಕ್ಕೆ ತಡಕಾಡಿದ್ದವು.
ಪರ್ತ್ ಸುತ್ತಲಿನಲ್ಲಿ ನಡೆದ ಶೋಧ
ಎರಡನೇ ಹಂತದಲ್ಲಿ ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿ ವಿಮಾನದ ಭಗ್ನಾವಶೇಷ ಮತ್ತು ಬ್ಲ್ಯಾಕ್ ಬಾಕ್ಸ್ನ ಹುಡುಕಾಟ ಮಾರ್ಚ್ ಕಡೆಯ ವಾರದಲ್ಲಿ ಬಿರುಸಿನಿಂದಲೇ ಆರಂಭವಾಯಿತು. ಆಸ್ಟ್ರೇಲಿಯಾ ನೇತೃತ್ವದಲ್ಲಿ ಏಳು ರಾಷ್ಟ್ರಗಳ ಸುಮಾರು 600 ಯೋಧರು 334 ವಿಮಾನಗಳು, ನೂರಾರು ಹಡಗುಗಳ ಬೆನ್ನೇರಿ ಹಿಂದೂ ಮಹಾಸಾಗರದ ದಕ್ಷಿಣದಲ್ಲಿ 45.50 ಲಕ್ಷ ಚದರ ಕಿ.ಮೀ.ಗಳಲ್ಲಿ ನಡೆಸಿದ ವ್ಯಾಪಕ ಶೋಧ ಕಾರ್ಯವೂ ನಿಷ್ಫಲವಾಯಿತು.
ಎರಡನೇ ಹಂತದಲ್ಲಿ ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿ ವಿಮಾನದ ಭಗ್ನಾವಶೇಷ ಮತ್ತು ಬ್ಲ್ಯಾಕ್ ಬಾಕ್ಸ್ನ ಹುಡುಕಾಟ ಮಾರ್ಚ್ ಕಡೆಯ ವಾರದಲ್ಲಿ ಬಿರುಸಿನಿಂದಲೇ ಆರಂಭವಾಯಿತು. ಆಸ್ಟ್ರೇಲಿಯಾ ನೇತೃತ್ವದಲ್ಲಿ ಏಳು ರಾಷ್ಟ್ರಗಳ ಸುಮಾರು 600 ಯೋಧರು 334 ವಿಮಾನಗಳು, ನೂರಾರು ಹಡಗುಗಳ ಬೆನ್ನೇರಿ ಹಿಂದೂ ಮಹಾಸಾಗರದ ದಕ್ಷಿಣದಲ್ಲಿ 45.50 ಲಕ್ಷ ಚದರ ಕಿ.ಮೀ.ಗಳಲ್ಲಿ ನಡೆಸಿದ ವ್ಯಾಪಕ ಶೋಧ ಕಾರ್ಯವೂ ನಿಷ್ಫಲವಾಯಿತು.
ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಹೆಕ್ಕಿ ತೆಗೆಯುವ ಸಾಮರ್ಥ್ಯವಿರುವ ಅಮೆರಿಕ ನೌಕಾಪಡೆಯ ಅತ್ಯಾಧುನಿಕ ನೌಕೆಯು ಜಲದೊಳಗಿನ ಅತಿ ಸೂಕ್ಷ್ಮ ಧ್ವನಿ ತರಂಗಗಳನ್ನು ಗ್ರಹಿಸುವ ಸಾಧನವನ್ನು (ಟೌಡ್ ಪಿಂಗರ್ ಲೊಕೇಟರ್– ಟಿಪಿಎಲ್25) ತನ್ನ ಬೆನ್ನಿಗೆ ಸಿಕ್ಕಿಸಿಕೊಂಡು ಹಿಂದೂ ಮಹಾಸಾಗರದ ಆಳದಲ್ಲಿ ಪಾತಾಳ ಗರಡಿ ಹಾಕಿತು.
ವಿಮಾನ ಪತನವಾಗಿ ಒಂದು ತಿಂಗಳವರೆಗೆ ಸಕ್ರಿಯವಾಗಿರುವ ಬ್ಲ್ಯಾಕ್ ಬಾಕ್ಸ್ನ ಬ್ಯಾಟರಿ ಹೊರಹಮ್ಮಿಸುವ ‘ಪಿಂಗ್’ ಶಬ್ದವನ್ನು ನಿಖರವಾಗಿ ಇದು ಗುರುತಿಸಲು ಆಗಲೇ ಇಲ್ಲ. ಗರಿಷ್ಠ 20 ಸಾವಿರ ಅಡಿ ಆಳದಲ್ಲಿ (ಆರು ಕಿ.ಮೀ.) ಬ್ಲ್ಯಾಕ್ ಬಾಕ್ಸ್ ಬಿದ್ದಿದ್ದರೂ ಅದನ್ನು ಕರಾರುವಾಕ್ಕಾಗಿ ಪತ್ತೆ ಮಾಡುತ್ತದೆ ಎಂಬ ಅಮೆರಿಕದ ಪೆಂಟಗಾನ್ (ರಕ್ಷಣಾ ಇಲಾಖೆ) ಅದರ ಸಾಮರ್ಥ್ಯದ ಬಗ್ಗೆ ಹೇಳಿಕೊಂಡದ್ದು ಕೆಲಸಕ್ಕೆ ಬಾರಲಿಲ್ಲ.
ಬ್ಲ್ಯಾಕ್ ಬಾಕ್ಸ್ ಪತ್ತೆಗಾಗಿ ಮೊದಲು ವಿಮಾನ ಭಗ್ನಾವಶೇಷವನ್ನು ಪತ್ತೆ ಮಾಡಬೇಕಿದ್ದ ಮಾನವ ರಹಿತ ಸ್ವಯಂಚಾಲಿತ ‘ಬ್ಲೂ ಫಿನ್21’ ಕಿರು ಜಲಾಂತರ್ಗಾಮಿಗಳು ಸಾಗರದ ಆಳದಲ್ಲಿ ಗಸ್ತುಹೊಡೆದು ಸುಸ್ತಾದವು. ಇದರಲ್ಲಿ ಅಳವಡಿಸಲಾಗಿದ್ದ ಜಲಾಂತರ ಶಬ್ದ ಶೋಧಕ ಸಾಧನಗಳಿಂದ (ಸೋನಾರ್) ಹೆಚ್ಚೇನು ಸಹಾಯ ಆಗಲಿಲ್ಲ.
ಏಪ್ರಿಲ್ ಅಂತ್ಯಕ್ಕೆ ವೈಮಾನಿಕ ಶೋಧ ಕಾರ್ಯ ಅಧಿಕೃತವಾಗಿ ಅಂತ್ಯಗೊಂಡಿತು. ಈ ಮಧ್ಯೆ, ಮಲೇಷ್ಯಾ ಸರ್ಕಾರ ವಿಮಾನ ನಾಪತ್ತೆಗೆ ನಿಖರ ಕಾರಣ ಪತ್ತೆ ಮಾಡಲು ಅಂತರರಾಷ್ಟ್ರೀಯ ತನಿಖಾ ತಂಡವನ್ನು ರಚಿಸಿತು. ಈ ತಂಡದಲ್ಲಿ ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್ಟಿಎಸ್ಬಿ), ಬ್ರಿಟನ್ನಿನ ವೈಮಾನಿಕ ಅಪಘಾತ ತನಿಖಾ ಕೇಂದ್ರ ಮತ್ತು ಚೀನಾದ ವಿಮಾನ ಅಪಘಾತ ತನಿಖಾ ಇಲಾಖೆಯ ಪ್ರತಿನಿಧಿಗಳು ಇದ್ದಾರೆ. ಈ ತಂಡಕ್ಕೆ ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್, ವಿಮಾನದ ಎಂಜಿನ್ ತಯಾರಿಸಿದ್ದ ರೋಲ್ಸ್ ರಾಯ್ಸ್ ಕಂಪೆನಿ ಹಾಗೂ ಬ್ರಿಟನ್ನಿನ ‘ಇನ್ಮಾರ್ಸಾಟ್’ ನೆರವು ನೀಡುತ್ತಿವೆ.
ಶೋಧ ಕಾರ್ಯದ ಮುಂದಿನ ನಡೆ ಕುರಿತು ಚರ್ಚೆ ನಡೆಸಿದ ಮಲೇಷ್ಯಾ, ಚೀನಾ, ಆಸ್ಟ್ರೇಲಿಯಾ ದೇಶಗಳು ಇನ್ನಷ್ಟು ಸುಧಾರಿತ ಮತ್ತು ಹೊಸ ಜಲಾಂತರ ಶಬ್ದ ಶೋಧಕ ಸಾಧನಗಳನ್ನು ಎರಡು ತಿಂಗಳಲ್ಲಿ ಹೊಂದಿಸಿಕೊಂಡು ವಿಮಾನದ ಭಗ್ನಾವಶೇಷ ಹುಡುಕಲು ಕಡಲಿಗೆ ಇಳಿಯುವುದಾಗಿ ಹೇಳಿವೆ.
ಪರ್ತ್ ನಗರದ ವಾಯವ್ಯಕ್ಕೆ ಸುಮಾರು 1600 ಕಿ.ಮೀ. ದೂರದಲ್ಲಿ 60 ಲಕ್ಷ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ಕಾರ್ಯವನ್ನು ಹೊಸ ಹುರುಪಿನಿಂದ ನಡೆಸುವುದಾಗಿ ಘೋಷಿಸಿವೆ. ಈ ಶೋಧ ಕಾರ್ಯಕ್ಕೆ ಸುಮಾರು 5.55 ಕೋಟಿ ಅಮೆರಿಕದ ಡಾಲರ್ (ಅಂದಾಜು ₨344.59 ಕೋಟಿ) ವ್ಯಯವಾಗಬಹುದು ಎಂದು ಅಂದಾಜಿಸಿವೆ. ಈ ಕಾರ್ಯವು ಒಂದು ವರ್ಷದವರೆಗೆ ಮುಂದುವರಿಯ ಬಹುದು ಎಂದಿವೆ. ಈಗ ಎರಡು ತಿಂಗಳ ಶೋಧ ಕಾರ್ಯಕ್ಕೆ 10 ಕೋಟಿ ಅಮೆರಿಕನ್ ಡಾಲರ್ಗೂ (ಸುಮಾರು ₨ 620 ಕೋಟಿ) ಅಧಿಕ ವೆಚ್ಚ ಆಗಿರುವ ಅಂದಾಜು ಇದೆ.
ವಿಮಾನದ ಹಿನ್ನೆಲೆ
ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರದಿಂದ ಚೀನಾ ರಾಜಧಾನಿ ಬೀಜಿಂಗ್ಗೆ ಮಾರ್ಚ್ 7ರ ಶುಕ್ರವಾರ ಮಧ್ಯರಾತ್ರಿ 12.41ಕ್ಕೆ (ಸ್ಥಳೀಯ ಕಾಲಮಾನ) ಹೊರಟ ಮಲೇಷ್ಯಾ ವಿಮಾನಯಾನ ಸಂಸ್ಥೆಯ ‘ಎಂಎಚ್ 370’ ಬೋಯಿಂಗ್ 777200ಇಆರ್ ವಿಮಾನ, ಹಾರಾಟ ಆರಂಭಿಸಿದ ಒಂದು ತಾಸಿನ ಒಳಗೆ (ಮಾ.8ರ ನಸುಕಿನ 1.19) ನಿಗೂಢವಾಗಿ ಕಣ್ಮರೆಯಾಗಿತ್ತು.
ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರದಿಂದ ಚೀನಾ ರಾಜಧಾನಿ ಬೀಜಿಂಗ್ಗೆ ಮಾರ್ಚ್ 7ರ ಶುಕ್ರವಾರ ಮಧ್ಯರಾತ್ರಿ 12.41ಕ್ಕೆ (ಸ್ಥಳೀಯ ಕಾಲಮಾನ) ಹೊರಟ ಮಲೇಷ್ಯಾ ವಿಮಾನಯಾನ ಸಂಸ್ಥೆಯ ‘ಎಂಎಚ್ 370’ ಬೋಯಿಂಗ್ 777200ಇಆರ್ ವಿಮಾನ, ಹಾರಾಟ ಆರಂಭಿಸಿದ ಒಂದು ತಾಸಿನ ಒಳಗೆ (ಮಾ.8ರ ನಸುಕಿನ 1.19) ನಿಗೂಢವಾಗಿ ಕಣ್ಮರೆಯಾಗಿತ್ತು.
ಕಣ್ಮರೆಯಾದ ಸಮಯದಲ್ಲಿ ವಿಮಾನವು ಮಲೇಷ್ಯಾದ ಪೂರ್ವ ಕರಾವಳಿ ತೀರದ ಪಟ್ಟಣ ಕೋಟ ಭರು ಮತ್ತು ವಿಯೆಟ್ನಾಂನ ದಕ್ಷಿಣ ತುದಿಯ ಮಧ್ಯೆ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತಿತ್ತು ಎನ್ನಲಾಗಿದೆ.
ವಿಮಾನದಲ್ಲಿ ಭಾರತದ ಐವರು, ಚೀನಾದ 154 ಮತ್ತು ಮಲೇಷ್ಯಾದ 38 ಮಂದಿ ಸೇರಿ 227 ಪ್ರಯಾಣಿಕರಿದ್ದರು. 12 ಸಿಬ್ಬಂದಿ ವರ್ಗದವರು ಸೇರಿ ವಿಮಾನದಲ್ಲಿದ್ದ ಒಟ್ಟು 239 ಜನರಿದ್ದರು.
ಕಾಡಿದ ಹಲವು ಸಂಶಯಗಳು
* ವಿಮಾನ ಸ್ಫೋಟ/ಉಗ್ರರಿಂದ ಅಪಹರಣ/ ತಾಂತ್ರಿಕ ದೋಷ.
* ವಿಮಾನ ಸ್ಫೋಟ/ಉಗ್ರರಿಂದ ಅಪಹರಣ/ ತಾಂತ್ರಿಕ ದೋಷ.
* ವಿಮಾನ ನಿಗದಿತ ಮಾರ್ಗ ಉದ್ದೇಶಪೂರ್ವಕವಾಗಿ ಬದಲಿಸಿದ್ದೇಕೆ?
* ವಿಮಾನದ ಸಂವಹನ ಸಾಧನಗಳನ್ನು ವ್ಯವಸ್ಥಿತವಾಗಿ ಸ್ಥಗಿತಗೊಳಿಸಲಾಯಿತೆಂಬ ಶಂಕೆ. ಸಾಧನಗಳನ್ನು ನಿಷ್ಕ್ರಿಯಗೊಳಿಸಿದ ನಂತರ ವಿಮಾನ ಏನಾಯಿತು?
* ಪೈಲಟ್ ಅಥವಾ ಪ್ರಯಾಣಿಕರ ಮಾನಸಿಕ ಅಸಮತೋಲನದ ಅನುಮಾನಗಳು. ಪೈಲಟ್ ಜಹರಿ ಅಹ್ಮದ್ ಮತ್ತು ಸಹ ಪೈಲಟ್ ಫರಿಕ್ ಅಬ್ದುಲ್ ಹಮೀದ್ ಬಗ್ಗೆ ಕಾಡಿರುವ ಅನುಮಾನಗಳು.
* ಸಾಗರದಲ್ಲಿ ತೇಲುತ್ತಿರುವ ವಸ್ತುಗಳು ನಾಪತ್ತೆಯಾದ ವಿಮಾನದ ಭಾಗಗಳೇ ಎಂಬ ಸಂಶಯಕ್ಕೆ ಸಿಗದ ಸ್ಪಷ್ಟ ಉತ್ತರ.
* ವಿಮಾನ ನಾಪತ್ತೆಯಾದ ಹತ್ತನೇ ವಾರದಲ್ಲಿ ಹೊಸದೊಂದು ಸಾಧ್ಯತೆಯ ಶಂಕೆ ವ್ಯಕ್ತವಾಗಿದೆ. ಥಾಯ್ಲೆಂಡ್– ಅಮೆರಿಕ ಜಂಟಿ ಸಮರಾಭ್ಯಾಸದ ವೇಳೆಯಲ್ಲಿ ಈ ‘ಎಂಎಚ್ 370’ ವಿಮಾನವನ್ನು ಆಕಸ್ಮಿಕವಾಗಿ ಹೊಡೆದುರುಳಿಸಲಾಗಿದೆ ಎಂಬ ಅನುಮಾನವನ್ನು ಲೇಖಕರೊಬ್ಬರು ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ.
ಹೀಗೆ ಪತನವಾದ ಅವಶೇಷವು ಥಾಯ್ಲೆಂಡ್ ಕೊಲ್ಲಿಯಲ್ಲಿ ಬಿದ್ದಿದೆ. ನಾಪತ್ತೆಯಾದ ವಿಮಾನದ ಶೋಧ ಕಾರ್ಯಾಚರಣೆಯ ದಿಕ್ಕು ತಪ್ಪಿಸಲು ಇನ್ನೊಂದು ಬ್ಲ್ಯಾಕ್ ಬಾಕ್ಸ್ ಅನ್ನು ಆಸ್ಟ್ರೇಲಿಯಾದ ಕರಾವಳಿಯಲ್ಲಿ ಹಾಕಲಾಗಿದೆ ಎಂದು ಆಂಗ್ಲೊ– ಅಮೆರಿಕ ಪತ್ರಕರ್ತ ಮತ್ತು ಲೇಖಕ ನೀಗೆಲ್ ಕಾಥೋರ್ನೆ ಅವರ ‘ಫ್ಲೈಟ್ ಎಂಎಚ್370: ದಿ ಮಿಸ್ಟರಿ’ ಪುಸ್ತಕದಲ್ಲಿ ಇದೆ.
No comments:
Post a Comment